ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ; ಜಾರ್ಜ್ ಬಂಧನ ಸಾಧ್ಯತೆ

ಡಿವೈಎಸ್ಪಿ  ಎಂ ಕೆ ಗಣಪತಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕೇಂದ್ರ ತನಿಖಾದಳ (ಸಿಬಿಐ ) ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ ಜೆ ಜಾರ್ಜ್ ,ಹಿರಿಯ ಪೊಲೀಸ್ ಅಧಿಕಾರಿಗಳಾದ ಎ ಎಂ ಪ್ರಸಾದ್ ಹಾಗು ಪ್ರಣವ್ ಮೊಹಂತಿ ವಿರುದ್ಧ ಎಫ್ ಐ ಆರ್ ದಾಖಲಿಸಿದೆ. ಇದರಿಂದ ಜಾರ್ಜ್ ಬಂಧನ ಭೀತಿ ಎದುರಿಸಿವುದರ ಜೊತೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ರಾಜ್ಯ ಸಿಐಡಿಯಿಂದ ಸಿಬಿಐಗೆ ವರ್ಗಾಯಿಸಲಾಗಿತ್ತು. ಇದೀಗ  ಸಿಬಿಐ ಈ ಮೂವರ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದು, ಯಾವುದೇ ಸಮಯದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸುವ ಸಾಧ್ಯತೆ ಇದೆ .

ಪ್ರಸ್ತುತ ಗುಪ್ತಚರ ಇಲಾಖೆ ಎಡಿಜಿಪಿಯಾಗಿರುವ ಎ  ಎಂ ಪ್ರಸಾದ್ ಹಾಗು ಆಧಾರ್ ಕಾರ್ಡ್ ಡಿಐಜಿ ಆಗಿರುವ ಮೊಹಂತಿ ಮತ್ತು ಜಾರ್ಜ್ ವಿರುದ್ಧ ತನಿಖೆ ನಡೆಸಿದ್ದ ಸಿಐಡಿ ಅಧೀನ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿತ್ತು . ಇದನ್ನು ಪ್ರಶ್ನಿಸಿ, ಗಣಪತಿ ಕುಟುಂಬದ ಸದಸ್ಯರು ಸುಪ್ರೀಂಕೋರ್ಟ್ ಗೆ ಹೋಗಿದ್ದರು . ಸುಪ್ರೀಂಕೋರ್ಟ್ ತನಿಖೆಯನ್ನು ಸಿಬಿಐಗೆ ವಹಿಸಿದೆ. ಸಿಬಿಐ ಆದೇಶದ ಪ್ರಕಾರ ಸಿಐಡಿಯು ಪ್ರಕರಣಕ್ಕೆ ಸಂಬಂಧಪಟ್ಟಂತೆ ಚೆನ್ನೈ  ಸಿಬಿಐ ಅಧಿಕಾರಿಗಳಿಗೆ ವರದಿಯನ್ನು ಹಸ್ತಾ೦ತರಿಸಿದೆ.

Leave a Reply