ಫಿಲಿಪ್ಪೀನ್ಸ್ ನಲ್ಲಿ ಪಿಎಂ ಮೋದಿ, ಮೂರು ದಿನಗಳ ಪ್ರವಾಸಗಳ ಪ್ರಮುಖ ಹೈಲೈಟ್ಸ್ ಹೀಗಿವೆ

ಡಿಜಿಟಲ್ ಕನ್ನಡ ಟೀಮ್:

ಏಷ್ಯಾದ ಆಗ್ನೇಯ ರಾಷ್ಟ್ರಗಳ ಸಂಸ್ಥೆ (ಏಸಿಯಾನ್) ಹಾಗೂ ಇಂಡೊ ಪೆಸಿಫಿಕ್ ಪ್ರದೇಶಗಳ ಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಕಾಲ ಫಿಲಿಪ್ಪೀನ್ಸ್ ಪ್ರವಾಸ ಕೈಗೊಂಡಿದ್ದಾರೆ. ಭಾನುವಾರ ಫಿಲ್ಲಿಪ್ಪೀನ್ಸ್ ಗೆ ತೆರಳಿದ ಮೋದಿ ಈ ಸಭೆಗಳ ಜತೆಗೆ ವಿಶ್ವದ ಇತರೆ ರಾಷ್ಟ್ರ ನಾಯಕರನ್ನು ಭೇಟಿ ಮಾಡಲಿದ್ದು, ಆ ದೇಶಗಳ ಜತೆಗೆ ಒಪ್ಪಂಧಗಳ ಮೂಲಕ ಸಂಬಂಧ ವೃದ್ಧಿಸಿಕೊಳ್ಳುವ ನಿರೀಕ್ಷೆ ಇದೆ. ಹೀಗಾಗಿ ಮೋದಿ ಅವರ ಈ ಪ್ರವಾಸ ಸಾಕಷ್ಟು ಗಮನ ಸೆಳೆದಿದೆ. ಮೋದಿ ಅವರ ಈ ಪ್ರವಾಸದ ಪ್ರಮುಖ ಅಂಶಗಲು ಹೀಗಿವೆ…

  • ಈ ಎರಡು ಸಭೆಗಳ ಬೆನ್ನಲ್ಲೇ ಮೋದಿ ನವೆಂಬರ್ 13ರಂದು ಫಿಲಿಪ್ಪೀನ್ ಅಧ್ಯಕ್ಷ ರೊಡ್ರಿಗೊ ಡ್ಯುಟರ್ಟ್ ಅವರನ್ನು ಭೇಟಿ ಮಾಡಲಿದ್ದಾರೆ.
  • ನ.13ರಂದೇ ಏಸಿಯಾನ್ ವ್ಯಾಪಾರ ಹಾಗೂ ಬಂಡವಾಲ ಸಭೆಯಲ್ಲಿ ಭಾಗವಹಿಸಲಿದ್ದಾರೆ.
  • ನ.14ರಂದು ಮನಿಲಾದಲ್ಲಿ ನಡೆಯಲಿರುವ ಪ್ರಾದೇಶಿಕ ಆರ್ಥಿಕ ಸಹಭಾಗಿತ್ವ ಸಭೆಯಲ್ಲಿ ಭಾಗವಹಿಸಿ, ಏಸಿಯಾನ್ ಸದಸ್ಯ ರಾಷ್ಟಗಳ ಉದ್ದಿಮೆ ಹಾಗೂ ಬಂಡವಾಲದಾರರ ಜತೆ ಸಭೆ ನಡೆಸಲಿದ್ದಾರೆ. ಭಾರತದ ವಿದೇಶಿ ವ್ಯಾಪಾರದ ಶೇ.10ರಷ್ಟು ಈ ರಾಷ್ಟಗಳ ಜತೆ ಇರುವುದರಿಂದ ಈ ಸಭೆ ಪ್ರಾಮುಖ್ಯತೆ ಪಡೆದುಕೊಂಡಿದೆ.
  • ಏಸಿಯಾನ್ ಸಂಸ್ಥೆ ಸ್ಥಾಪನೆಗೊಂಡು 25 ವರ್ಷಗಳ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಇಂಡಿಯಾ ಏಸಿಯಾನ್ ಒಪ್ಪಂದ ಸಭೆ ಮಹತ್ವ ಪಡೆದುಕೊಂಡಿದೆ. ಈ ಬಾರಿ 15ನೇ ಇಂಡಿಯಾ ಏಸಿಯಾನ್ ಸಭೆ ಹಾಗೂ 12ನೇ ಪೂರ್ವ ಏಷ್ಯಾ ಸಭೆಯಾಗಿದೆ.
  • ಈ ಸಭೆಗಳ ಜತೆಗೆ ಮೋದಿ ಫಿಲಿಪ್ಪೀನ್ಸ್ ನಲ್ಲಿರುವ ಭಾರತೀಯರ ಜತೆ ಚರ್ಚೆ ನಡೆಸಲಿದ್ದಾರೆ.
  • ಈ ಸಭೆಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ಭಾಗವಹಿಸಲಿದ್ದು, ಇವರ ಜತೆ ಮೋದಿ ಸಭೆ ನಡೆಸಲಿದ್ದಾರೆ.
  • ಇವೆಲ್ಲಕ್ಕಿಂತ ಮುಖ್ಯವಾಗಿ ಇಂದಿರಾ ಗಾಂಧಿಯವರು 1981ರಲ್ಲಿ ಫಿಲಿಪ್ಪೀನ್ಸ್ ಗೆ ಭೇಟಿ ನೀಡಿದ್ದ ನಂತರ ಭಾರತದ ಪ್ರಧಾನಿ ಈ ದೇಶಕ್ಕೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅದೂ 36 ವರ್ಷಗಳ ನಂತರ.
  • 2015-16ನೇ ಸಾಲಿನ ಇಂಡಿಯಾ ಏಸಿಯಾನ್ ಸಭೆಯಲ್ಲಿ ಒಟ್ಟು 65.04 ಬಿಲಿಯನ್ ನಷ್ಟು ವ್ಯಾಪಾರ ನಡೆದಿದ್ದು, ಇದು ಭಾರತದ ವಿದೇಶಿ ವ್ಯಾಪರದಲ್ಲಿ ಶೇ.10.12 ರಷ್ಟಿದೆ. ಹೀಗಾಗಿ ಈ ಬಾರಿಯ ಸಭೆ ನಿರೀಕ್ಷೆ ಹುಟ್ಟಿಸಿದೆ.

Leave a Reply