ಅಧಿವೇಶನದಲ್ಲಿ ಮಹಾದಾಯಿ ಸದ್ದು: ಇನ್ನೊಂದು ತಿಂಗಳಲ್ಲಿ ಸಿಹಿ ಸುದ್ದಿ ಕೊಡ್ತಾರಂತೆ ಜಗದೀಶ್ ಶೆಟ್ರು

ಡಿಜಿಟಲ್ ಕನ್ನಡ ಟೀಮ್:

ಕಳೆದ ಎರಡು ವರ್ಷಗಳಿಂದ ಉತ್ತರ ಕರ್ನಾಟಕ ಜನರ ನಿರಂತರ ಹೋರಾಟವಾಗಿರುವ ಮಹದಾಯಿ ನೀರು ಹಂಚಿಕೆ ವಿವಾದ ಸದ್ಯ ಚಳಿಗಾಲದ ಅಧಿವೇಶನದಲ್ಲೂ ಪ್ರತಿಧ್ವನಿಸುತ್ತಿದೆ. ಈ ಹೊತ್ತಿನಲ್ಲಿ ವಿಧಾನಸಭೆ ವಿರೋಧ ಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ‘ಮುಂದಿನ ಒಂದು ತಿಂಗಳಲ್ಲಿ ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಸಿಹಿ ಸುದ್ದಿ ಕೊಡುತ್ತೇನೆ’ ಎಂದು ಹೇಳುವ ಮೂಲಕ ಜನರಲ್ಲಿ ಹೊಸ ಭರವಸೆ ಬಿತ್ತಿದ್ದಾರೆ.

ಬೆಳಗಾವಿಯ ಸುರ್ಣಸೌಧದಲ್ಲಿ ನಡೆಯುತ್ತಿರುವ  ಚಳಿಗಾಲದ ಅಧಿವೇಶನದಲ್ಲಿ ಇಂದು ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಕೋನರಡ್ಡಿ ಅವರು ಈ ವಿಚಾರ ಪ್ರಸ್ತಾಪಿಸಿದರು. ಉತ್ತರ ಕರ್ನಾಟಕದ ಜನತೆ ಮಹದಾಯಿಗಾಗಿ ಕಳೆದ ಎರಡು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಈ ಕುರಿತಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಬಿಜೆಪಿ ನಾಯಕರ ಜವಾಬ್ದಾರಿ ಹೆಚ್ಚಿನ ಪ್ರಮಾಣದಲ್ಲಿದೆ. ಈ ಕುರಿತಂತೆ ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದರು. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರು ಅಧಿವೇಶನಕ್ಕೆ ಗೈರಾಗಿರುವುದನ್ನು ಪ್ರಸ್ತಾಪಿಸಿದ ಮತ್ತೊಬ್ಬ ಜೆಡಿಎಸ್ ಶಾಸಕ ವೈಎಸ್ ವಿ ದತ್ತಾ ‘ಇಂತಹ ಗಂಭೀರ ವಿಷಯವನ್ನು ಸಚಿವರ ಸಮ್ಮುಖದಲ್ಲೇ ನಡೆಸಬೇಕು’ ಎಂದು ಪಟ್ಟು ಹಿಡಿದರು.

ಈ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಸದನದ ಬಾವಿಗಿಲಿದು ಸಚಿವರ ಹಾಜರಾತಿಗೆ ಆಗ್ರಹಿಸಿದರು. ಈ ವೇಳೆ ವಿರೋಧ ಪಕ್ಷಗಳ ವಿರುದ್ಧ ಕಿಡಿ ಕಾರಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ವಿಚಾರ ನ್ಯಾಯಾಲಯಲ್ಲಿದೆ. ಈ ಬಗ್ಗೆ ಏನು ಚರ್ಚೆ ಮಾಡುತ್ತೀರಿ. ಅಷ್ಟೇ ಅಲ್ಲದೆ ಚಈ ವಿಚಾರದಲ್ಲಿ ಚೆಂಡು ನಿಮ್ಮ ಅಂಗಳದಲ್ಲಿದೆ ಎಂದು ಮುಖ್ಯಮಂತ್ರಿಗಳು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಹೀಗೆ ಮಹದಾಯಿ ವಿಚಾರ ಅಧಿವೇಶನದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಜಗದೀಶ್ ಶೆಟ್ಟರ್ ಅವರು ಭರವಸೆಯ ಮಾತುಗಳನ್ನಾಡಿದ್ದಾರೆ. ಈ ವಿವಾದದ ಕುರಿತು ಶೆಟ್ಟರ್ ಅವರು ಹೇಳಿರೋದಿಷ್ಟು… ‘ಕಳೆದ ಎರಡು ವರ್ಷಗಳಿಂದ ಮಹದಾಯಿ ಹಾಗೂ ಕಳಸಾ ಬಂಡೂರಿಗಾಗಿ ಉತ್ತರ ಕರ್ನಾಟಕದ ಜನ ಹೋರಾಟ ನಡೆಸುತ್ತಿದ್ದಾರೆ. ನಮ್ಮ ಪಕ್ಷ ಗೋವಾ ರಾಜ್ಯದ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿದೆ. ಮುಂದಿನ ಒಂದು ತಿಂಗಳಲ್ಲಿ ಸಿಹಿ ಸುದ್ದಿ ನೀಡಲಿದ್ದೇವೆ. ಹುಬ್ಬಳ್ಳಿಯ ನನ್ನ ನಿವಾಸದಲ್ಲಿ ಈ ವಿಚಾರವಾಗಿ ಪ್ರತಿಭಟನೆ ನಡೆಯುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರು ಭರವಸೆ ಕೊಟ್ಟ ನಂತರ ಧರಣಿ ಹಿಂಪಡೆಯಲಾಗಿದೆ. ಈ ವಿಚಾರವಾಗಿ ನಾವು ಸುಮ್ಮನೆ ಕುಳಿತಿಲ್ಲ.’

3 COMMENTS

  1. SATTA SUDDIUGAKLIGAGUIYE PRADHANYATE NEEDUVA SHETTARU EE bhagada mM.L.A ANU VADAKKE NACHIKEYAGUTTE<< BARREE SATTASUDDI BAGGE KSHANAGANANE MADUVADARE BELAGAVIYALI SOUDHA SERUVA AUCHITYAVADARU YENIDE??
    2. belagavigew bandaga.. dinagattasle… ganapati ganapati nyendu abbarisuvadadarew,,, ILLI SERUVA AGATYAVADARU YENIDE!!?
    3innu mele belagavige bandu duddu halu/polugolisuvava prameya tappiosabekiddare.. be3ngaluralle adhiveshanagalku nadeyali!!
    4. neera nudiya mate4 illa.. beree baree nanagwe mata yendu haradidare janarenu nambuttare yendu tilididdare.. shasakara mand buddhi annadekaste allave??

Leave a Reply to vilaslatthe Cancel reply