ಕಾಶ್ಮೀರದಲ್ಲಿ ಸೇನೆಯ ಭರ್ಜರಿ ಕಾರ್ಯಾಚರಣೆ, ಐವರು ಲಷ್ಕರ್ ಉಗ್ರರ ಹತ್ಯೆ, ಓರ್ವ ಯೋಧ ಹುತಾತ್ಮ

ಡಿಜಿಟಲ್ ಕನ್ನಡ ಟೀಮ್:

ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಐವರು ಲಷ್ಕರ್ ಉಗ್ರರನ್ನು ಹೊಡೆದುರುಳಿಸಿದೆ. ಈ ಕಾರ್ಯಾಚರಣೆ ವೇಳೆ ಓರ್ವ ಭಾರತೀಯ ಸೈನಿಕ ಹುತಾತ್ಮನಾಗಿದ್ದು, ಮತ್ತೊಬ್ಬ ಯೋಧ ಗಾಯಗೊಂಡಿದ್ದಾನೆ.

ಕಾಶ್ಮೀರದ ಬಂಡಿಪೋರ ಪ್ರದೇಶದಲ್ಲಿ ಸೇನೆ ಇಂದು ಕಾರ್ಯಾಚರಣೆ ನಡೆಸಿತು. ಈ ಐವರು ಉಗ್ರರ ಪೈಕಿ 26/11 ದಾಳಿಯ ಮಾಸ್ಟರ್ ಮೈಂಡ್ ಲಕ್ವಿ ಸೋದರ ಸಂಬಂಧಿ ಸಹ ಮೃತಪಟ್ಟಿರುವುದಾಗಿ ವರದಿ ಬಂದಿವೆ. ಭಾರತೀಯ ಸೇನೆಯಿಂದ ಕಾರ್ಯಾಚರಣೆ ಹಾಗೂ ಶೋಧ ಕಾರ್ಯ ಮುಂದುವರಿದಿದೆ. ಕಳೆದ ಒಂದು ವರ್ಷದಿಂದ ಭಾರತೀಯ ಸೇನೆ ಉಗ್ರರ ಭೇಟೆಯಾಡುತ್ತಿದ್ದು, ಈಗ ಮತ್ತೊಂದು ಯಶಸ್ಸು ಸಾಧಿಸಿದೆ.

ನಿನ್ನೆಯಷ್ಟೇ ಲಷ್ಕರ್ ಸಂಘಟನೆ ಸೇರಿದ್ದ ಫುಟ್ಬಾಲ್ ಆಟಗಾರ ಪೊಲೀಸರಿಗೆ ಶರಣಾದ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆದು, ಐವರು ಉಗ್ರರ ಹತ್ಯೆಯಾಗಿರೋದು ಸಾಕಷ್ಟು ಕುತೂಹಲ ಮೂಡಿಸಿದೆ. ಕಾರ್ಯಾಚರಣೆ ಇನ್ನು ಪ್ರಕ್ರಿಯೆಯಲ್ಲಿದ್ದು, ಸೇನೆಗೆ ಬಲಿಯಾಗುವ ಉಗ್ರರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯೂ ಇದೆ.

Leave a Reply