ಪದ್ಮಾವತಿಗೆ ಸಿಕ್ತಿದೆ ರಾಜ್ಯ ನಾಯಕರ ಬೆಂಬಲ: ಈ ವಿಚಾರವಾಗಿ ಡಿಕೆಶಿ, ಅಂಬರೀಶ್, ಜಯಮಾಲ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ನಟಿ‌ ದೀಪಿಕಾ ಪಡುಕೋಣೆಗೆ‌ ಕೊಲೆ ಬೆದರಿಕೆ ವಿಚಾರ ರಾಜ್ಯದಲ್ಲಿ ಸಾಕಷ್ಟು ತೀವ್ರ ಚರ್ಚೆಗೆ ಕಾರಣವಾಗ್ತಿದೆ. ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹರ್ಯಾಣ ಮುಖ್ಯಮಂತ್ರಿಗೆ ದೂರವಾಣಿ ಕರೆ ಮೂಲಕ ರಕ್ಷಣೆ ನೀಡುವಂತೆ ಆಗ್ರಹಿಸಿದ್ದರು. ಇದರ ಜತೆಗೆ ಇಂಧನ ಸಚಿವ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ನಾಯಕರಾದ ಅಂಬರೀಶ್ ಹಾಗೂ ಜಯಮಾಲಾ ಸಹ ದೀಪಿಕಾ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಈ ವಿಚಾರವಾಗಿ ಈ ಮೂವರು ನಾಯಕರು ಹೇಳಿದಿಷ್ಟು…

  • ‘ದೀಪಿಕಾ ‌ಪಡುಕೋಣೆ ಕನ್ನಡದ ಹೆಣ್ಣು‌ ಮಗಳು. ತಲೆ ಕತ್ತರಿಸುತ್ತೇನೆ, ಕೈ ಕತ್ತರಿಸುತ್ತೇನೆ ಹೇಳಿಕೆ ಖಂಡನೀಯ. ದೀಪಿಕಾ ಪಡುಕೋಣೆಗೆ ಕರ್ನಾಟಕದಲ್ಲಿ ಏನಾದ್ರು ತೊಂದರೆ ಯಾದ್ರೆ, ಸರ್ಕಾರಕ್ಕೆ ಕೆಟ್ಡ ಹೆಸರು. ಹೀಗಾಗಿ ಬಿಜೆಪಿಯ ನಾಯಕರು ಇದರ ಬಗ್ಗೆ ಗಮನ ಹರಿಸಬೇಕು. ಈ ರೀತಿ ಹೇಳಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ದೀಪಿಕಾ‌ ಪಡುಕೋಣೆ ರಕ್ಷಣೆ ಕೊಡುವಂತೆ ಈಗಾಗಲೇ ಸಿಎಂಗೂ ಪತ್ರ ಬರೆಯಲಾಗಿದೆ. ಗೃಹ ಸಚಿವ ರಾಮಲಿಂಗಾರೆಡ್ಡಿ ಯವರಿಗೂ ತಿಳಿಸಲಾಗುವುದು.’
    – ಡಿ.ಕೆ ಶಿವಕುಮಾರ್, ಇಂಧನ ಸಚಿವ
  • ‘ಪ್ರಜಾಪ್ರಭುತ್ವಸಲ್ಲಿ ಈ ರೀತಿಯ ಹೇಳಿಕೆ ಕೊಡೊದು ಸರಿಯಲ್ಲ, ಯಾರೆ ಆದ್ರು ಆ ರೀತಿ ಹೇಳಿಕೆ ಕೊಡೊದು ತಪ್ಪು.’
    – ಅಂಬರೀಶ್, ಕಾಂಗ್ರೆಸ್ ನಾಯಕ
  • ‘ನಮ್ಮ ದೇಶದಲ್ಲಿ ಸರಿಯಾಗಿ ಇತಿಹಾಸವನ್ನೇ ಕಟ್ಟಿಲ್ಲ. ಇನ್ನೂ ಇತಿಹಾಸವನ್ನು ತಿರುಚುವ ಪ್ರಶ್ನೆ ಎಲ್ಲಿ ಬಂತು. ಕಲಾವಿದರಿಗೆ ಬೆದರಿಕೆ ಹಾಕೋದು ನಿಜಕ್ಕೂ  ಖಂಡನೀಯ. ಬೆದರಿಕೆ ಹಾಕೋದ್ರ ಮೂಲಕ ಕಲಾವಿದರನ್ನು ಆತ್ಮಸ್ಥರ್ಯ ಕುಗ್ಗಿಸುವಂತ ಕೆಲಸವಾಗ್ತಿದೆ. ಇದಕ್ಕೆಲ್ಲಾ ಕಲಾವಿದರು ಹೆದರುವುದಿಲ್ಲ. ಬೆದರಿಕೆ ಹಾಕೋವ್ರ ವಿರುದ್ದ ಕೇಂದ್ರ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು. ದೀಪಿಕಾ ಪಡುಕೋಣೆಗೆ ಸೂಕ್ತ ರಕ್ಷಣೆ ಒದಗಿಸಬೇಕು.’
    – ಜಯಮಾಲ

Leave a Reply