ಕೆಜಿಎಫ್ ಚಿತ್ರದಲ್ಲಿ ಯಶ್ ಪಾತ್ರವೇನು? ಕುತೂಹಲ ಮೂಡಿಸುತ್ತಿವೆ ಈ ಹೊಸ ಫೋಟೋಗಳು

ಡಿಜಿಟಲ್ ಕನ್ನಡ ಟೀಮ್:

ಸದ್ಯ ಸ್ಯಾಂಡಲ್ ವುಡ್ಡಿನ ಬಹು ನಿರೀಕ್ಷಿತ ಚಿತ್ರಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ ಸಹ ಒಂದು. ದೊಡ್ಡ ಬಜೆಟ್, ದೊಡ್ಡ ತಂಡ, ಸುದೀರ್ಘ ಚಿತ್ರೀಕರಣ, ಸೂಪರ್ ಸೆಟ್, ಐದು ಭಾಷೆಯಲ್ಲಿ ನಿರ್ಮಾಣ ಎಲ್ಲವೂ ಸೇರಿ ಕೆಜಿಎಫ್ ಗೆ ಬೇರೆಯದೇ ಆದ ತೂಕ ಪಡೆದಿದೆ. ಇದರಿಂದ ಕೆಜಿಎಫ್ ಸಿನಿಮಾ ಎಂದರೆ ಸಾಕು ಕನ್ನಡ ಸಿನಿಮಾ ಅಭಿಮಾನಿಗಳ ಕಣ್ಣು ಸಹಜವಾಗಿಯೇ ಚುರುಕಾಗುತ್ತದೆ. ಕಿವಿ ನೆಟ್ಟಗಾಗುತ್ತದೆ. ಇದೇ ಸಂದರ್ಭದಲ್ಲಿ ಕೆಜಿಎಫ್ ಚಿತ್ರದ ಕೆಲವು ಶೂಟಿಂಗ್ ಚಿತ್ರಗಳು ಬಿಡುಗಡೆಯಾಗಿವೆ.

ಒಂದರಲ್ಲಿ ಗಡ್ಡಧಾರಿ ಯಶ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡರೆ ಇನ್ನೊಂದು ಫೋಟೋದಲ್ಲಿ ಅಚ್ಚ ಬಿಳಿ ವಸ್ತ್ರಧರಿಸಿ ತಲೆಗೊಂದು ಬಿಳಿ ಟೋಪಿ ಇಟ್ಟುಕೊಂಡಿದ್ದಾರೆ. ಎಂಭತ್ತರ ದಶಕದ ಕತೆಯಾದ್ದರಿಂದ ಅಲ್ಲದೇ ಕೆಜಿಎಫ್ ನಲ್ಲಿ ನಡೆಯುವ ಕತೆಯಾಗಿದೆ. ಈ ಫೋಟೋಗಳನ್ನು ನೋಡಿದ ಮೇಲೆ ಯಶ್ ಅವರದ್ದು ಗಣಿಯಲ್ಲಿ ಕೆಲಸ ಮಾಡುವವನ ಪಾತ್ರವೋ, ನೌಕಾದಳದ ಸೇನಾನಿ ಪಾತ್ರವೋ ಅಥವಾ ಹೋರಾಟಗಾರನ ಪಾತ್ರವೋ ಎಂಬ ಕುತೂಹಲ ಹೆಚ್ಚಾಗಿಸಿದೆ. ಒಟ್ಟಿನಲ್ಲಿ ಯಶ್ ಈ ಚಿತ್ರದಲ್ಲಿ ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿರುವುದು ಪಕ್ಕಾ ಆಗಿದೆ. ಇನ್ನು ಚಿತ್ರ ತೆರೆ ಕಂಡ ನಂತರವಷ್ಟೇ ಅಭಿಮಾನಿಗಳ ಈ ಕುತೂಹಲ ಅಂತ್ಯವಾಗುವುದು. ಅಂದಹಾಗೆ ಚಿತ್ರದ ಚಿತ್ರೀಕರಣದ ಹೊಸ ಫೋಟೋಗಳು ಹೀಗಿವೆ ನೋಡಿ…

Leave a Reply