ಇಂದಿನಿಂದ ಮೈಸೂರಿನಲ್ಲಿ ಅಕ್ಷರ ಜಾತ್ರೆ, 83ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ದರಾಮಯ್ಯ ಚಾಲನೆ

ಡಿಜಿಟಲ್ ಕನ್ನಡ ಟೀಮ್:

ಅರಮನೆ ನಗರಿ, ಸಾಂಸ್ಕೃತಿಕ ನಗರಿ ಎಂದೇ ಖ್ಯಾತಿ ಪಡೆದಿರುವ ಮೈಸೂರಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಅಕ್ಷರ ಜಾತ್ರೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು 83ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜ್ಯೋತಿ ಬೆಳಗುವ ಮೂಲಕ ಈ ಅಕ್ಷರ ಜಾತ್ರೆಗೆ ಚಾಲನೆ ನೀಡಿದ್ದಾರೆ..

ಈ ಬಾರಿಯ ಸಾಹಿತ್ಯ ಸಮ್ಮೇಳನಕ್ಕೆ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅವರು ಅಧ್ಯಕ್ಷತೆ ವಹಿಸಿದ್ದಾರೆ. ಈ ಸಮ್ಮೆಳನದಲ್ಲಿ ಕನ್ನಡ ಸಾಹಿತ್ಯದ ಜತೆಗೆ ಸಂಸ್ಕೃತಿಯ ಉತ್ಸವವೂ ನಡೆಯುವುದು ಜನರನ್ನು ಆಕರ್ಷಿಸಿದೆ. ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾಷಣದ ಪ್ರಮುಖ ಅಂಶ ಹೀಗಿದೆ…

‘ಕರ್ನಾಟಕದ ಸಾಂಸ್ಕೃತಿಕ ನಗರ ಎಂದೇಪ್ರಸಿದ್ಧವಾಗಿರುವ ಮೈಸೂರು ನಗರದಲ್ಲಿಆಯೋಜಿಸಿರುವ ಎಂಭತ್ತ ಮೂರನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತಅಭಿಮಾನದಿಂದ ಹಾಗೂ ಸಂತೋಷದಿಂದಉದ್ಘಾಟಿಸಿದ್ದೇನೆ.  ಇದು ನನ್ನ ಬದುಕಿನ ಸಾರ್ಥಕಕ್ಷಣಗಳಲ್ಲೊಂದು. ಇದಕ್ಕೆ ಹಲವಾರು ಕಾರಣಗಳಿವೆ. ಮೊದಲನೆಯದಾಗಿ, ನನ್ನ ಹುಟ್ಟೂರು ಮೈಸೂರು. ನನಗೆ ಕನ್ನಡದ ದೀಕ್ಷೆಯನ್ನು ಕೊಟ್ಟ ನೆಲ ಮೈಸೂರು. ಇದೇ ಕನ್ನಡ ಕರ್ಮಭೂಮಿಯ ಗರಡಿಯಲ್ಲಿ ಕನ್ನಡ ಪ್ರಜ್ಞೆಯನ್ನುಬೆಳೆಸಿಕೊಂಡವನು ನಾನು. ಕನ್ನಡ ನಾಡುನುಡಿಯ ಬಗ್ಗೆ ನನ್ನಲ್ಲಿರುವ ಬದ್ಧತೆಗೆ, ಮೈಸೂರಿನಹಿರಿಯ ಮತ್ತು ಕಿರಿಯ ಸಾಹಿತಿಗಳು, ಕನ್ನಡದಹೋರಾಟಗಾರರು ಮತ್ತು ಕನ್ನಡ ಪ್ರೇಮಿಗಳುಇಲ್ಲಿ ನಿರ್ಮಿಸಿರುವ ಕನ್ನಡದ ವಾತಾವರಣಕಾರಣ ಎಂದು ಹೇಳಲು ನನಗೆಹೆಮ್ಮೆಯಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ಸ್ಥಾಪನೆಯ ರೂವಾರಿ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಅವರು ಹುಟ್ಟಿದ ನೆಲವೂ ಮೈಸೂರು.ಒಡೆಯರ್ ಅವರು ಸಾಮಾಜಿಕ ನ್ಯಾಯದಹರಿಕಾರರು ಮಾತ್ರವಲ್ಲ, ಅಪ್ಪಟ ಕನ್ನಡಪ್ರೇಮಿಯೂ ಹೌದು. ನುಡಿ ಬೆಳೆಯಬೇಕಾದರೆನಾಡು ಅಭಿವೃದ್ಧಿಯಾಗಬೇಕು ಎಂಬ ಕನಸುಕಂಡವರು. ಭಾರತದಲ್ಲಿ ಪ್ರಜಾ ಪ್ರಭುತ್ವವುಚಿಗುರೊಡೆಯುವ ಮುನ್ನವೇ, ಮೈಸೂರು ಪ್ರಜಾಪ್ರತಿನಿಧಿ ಸಭೆಯ ಹೆಸರಿನಲ್ಲಿ ಪ್ರಪ್ರಥಮ ಬಾರಿಗೆಪ್ರಜಾಪ್ರಭುತ್ವದ ಮೇರು ಪರಿಕಲ್ಪನೆಯನ್ನುಪರಿಚಯಿಸಿದ ಶ್ರೀ ಚಾಮರಾಜೇಂದ್ರ ಒಡೆಯರ್ಅವರ ಸದಾಶಯಗಳನ್ನು ಮುಂದುವರೆಸಿಪ್ರಭುವಾಗಿದ್ದರೂ ಪ್ರಜಾಪ್ರಭುತ್ವದಮಾದರಿಯಲ್ಲಿಯೇ ಆಡಳಿತ ನಡೆಸಿದವರು ಶ್ರೀಕೃಷ್ಣರಾಜ ಒಡೆಯರ್ ಅವರು. ಪ್ರಜೆಗಳ ಬಗ್ಗೆ ಅವರಿಗಿದ್ದ ಕಾಳಜಿ ಮತ್ತು ದೂರದೃಷ್ಟಿ ರಾಜಕಾರಣಿಗಳಾಗಿರುವ ನಮಗೆಲ್ಲಾ ಮಾದರಿ. ಕನ್ನಂಬಾಡಿ ಜಲಾಶಯವನ್ನು ನಿರ್ಮಿ ಸಲು ಅರಮನೆಯ ಆಭರಣಗಳನ್ನುಮಾತ್ರವಲ್ಲ, ಮಹಾರಾಣಿಯವರ ಮೈ ಮೇಲಿನ ಒಡವೆಗಳನ್ನೂ ಮಾರಿದ್ದ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರಿಗೆ ನಾವೆಲ್ಲರೂ ಸದಾಕಾಲ ಋಣಿಯಾಗಿರಬೇಕು. ಈ ಸಮ್ಮೇಳನವು ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಅವರಿಗೆನಾವು ಸಲ್ಲಿಸುವ ಗೌರವವೂಹೌದು.’

ಈ ಸಾಹಿತ್ಯ ಸಮ್ಮೇಳನದ ಪ್ರಮುಖ ಅಂಶಗಳು ಹೀಗಿವೆ…

  • ಸಾವಿರಾರು ಸಂಖ್ಯೆಯಲ್ಲಿ ಶಾಲಾ ಮಕ್ಕಳು ಕನ್ನಡ ಧ್ವಜ ಹಿಡಿದು ಮೆರವಣಿಗೆ ನಡೆಸಿದರು.
  • ರಾಮ, ಕಿತ್ತೂರು ರಾಣಿ ಚೆನ್ನಮ್ಮ. ಅಕ್ಕಮಹಾದೇವಿ, ತಾಯಿ ಭುವನೇಶ್ವರಿ, ಹುಲಿ ವೇಷಧಾರಿಗಳು ಈ ಮೆರವಣಿಗೆಯಲ್ಲಿ ಜನರ ಗಮನ ಸೆಳೆದರು. ಇನ್ನು ನಾಡಿನ ಕಲೆ, ಸಂಸ್ಕೃತಿ ಪ್ರತಿನಿಧಿಸುವ ಸ್ತಬ್ಧಚಿತ್ರಗಳು ವಿಶೇಷ ಆಕರ್ಷಣೆ ಪಡೆದವು.
  • ವಿಶೇಷ ವಾಹನಗಳಲ್ಲಿ ಕನ್ನಡ ಗೀತೆ ಹಾಗೂ ಗಾಯನದ ಯಾತ್ರೆ ನಡೆದಿದೆ.
  • 26 ವರ್ಷಗಳ ಬಳಿಕ ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ.
  • ಐದು ಸಾವಿರ ವಿದ್ಯರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಮೆರವಣಿಗೆ, 600 ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ.
  • 83 ಕಲಾವಿದರು ನಾಡಗೀತಿಯನ್ನು ಹಾಡಿದರು.
  • ಮೂರು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು 22 ಗೋಷ್ಠಿಗಳು ನಡೆಯಲಿದ್ದು, ಹಿಂದಿನ ಸಮ್ಮೇಳನಗಳಿಗೆ ಹೋಲಿಕೆ ಮಾಡಿದರೆ ಅತಿ ಹೆಚ್ಚು ಗೋಷ್ಠಿಗಳ ಆಯೋಜನೆ.
  • ಮೈಸೂರು ನಗರದಲ್ಲಿ ಕನ್ನಡ ಧ್ವಜ, ಬಣ್ಣ ಬಣ್ಣದ ದೀಪಗಳಿಂದ ಕಂಗೊಳಿಸುತ್ತಿದೆ.

ಇವಿಷ್ಟೂ ಸಮ್ಮೇಳನದಲ್ಲಿ ಜನರನ್ನು ಆಕರ್ಷಿಸಿದ ಪ್ರಮುಖ ಅಂಶಗಳಾದರೆ, ಸಮ್ಮೇಳನದಲ್ಲಿ ಜನರು ಕೆಲವು ಸಮಸ್ಯೆಗಳನ್ನು ಎದುರಿಸಿದರು. ಸಮ್ಮೇಳನಕ್ಕೆ ಹೋಗಲು ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದೆ ಜನರು ಕಾಯುವಂತಾಯಿತು. ಇನ್ನು ಊಟದ ಚೀಲ ಬ್ಯಾಗ್ ನೀಡಲು ಸರಿಯಾದ ಕೌಂಟರ್ ವ್ಯವಸ್ಥೆ ಇಲ್ಲದೆ ಜನರಿಗೆ ಅನಾನುಕೂಲವಾಯಿತು. ಇದರಿಂದ ಕೋಪಗೊಂಡ ರಾಮನಗರ, ಚನ್ನಪಟ್ಟಣ ಹಾಗೂ ಇತರೆ ಭಾಗದ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದರು.

Leave a Reply