ಮತ್ತೆ ಕಾವು ಪಡೆಯುತ್ತಿದೆ ರಾಮಮಂದಿರ ವಿಚಾರ, ಉಡುಪಿಯಲ್ಲಿ ಮೋಹನ್ ಭಾಗವತ್- ಪೇಜಾವರ ಶ್ರೀಗಳು ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರ ದಿನೇ ದಿನೇ ಕಾವು ಪಡೆದುಕೊಳ್ಳಲಾರಂಭಿಸಿದೆ. ಕೆಲ ದಿನಗಳ ಹಿಂದೆ ರವಿಶಂಕರ ಗುರೂಜಿ ಅವರು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮುಖ್ಯಸ್ಥ ಖಲೀದ್ ರಶೀದ್ ಅವರನ್ನು ಭೇಟಿ ಮಾಡಿ ರಾಮಮಂದಿರ ನಿರ್ಮಾಣದ ಕುರಿತು ಚರ್ಚೆ ನಡೆಸಿದ್ದರು. ಈ ಬೆಳವಣಿಗೆಯ ನಂತರ ರಾಮಮಂದಿರ ವಿಚಾರ ಹೆಚ್ಚು ಸುದ್ದಿಯಾಗುತ್ತಿದೆ.

ಇಂದು ಉಡುಪಿಯಲ್ಲಿ ನಡೆದ ‘ಧರ್ಮ ಸಂಸದ್’ ಕಾರ್ಯಕ್ರಮದಲ್ಲೂ ರಾಮಮಂದಿರ ವಿಚಾರ ಹೆಚ್ಚು ಪ್ರತಿಧ್ವನಿಸಿತು. ಈ ವಿಚಾರವಾಗಿ ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್, ಪೇಜಾವರ ಶ್ರೀಗಳು ಮಾತನಾಡಿದ್ದು, ರಾಮ ಮಂದಿರ 2019ರ ಒಳಗಾಗಿ ನಿರ್ಮಾಣವಾಗಲಿದೆ ಎಂದಿದ್ದಾರೆ. ರಾಮ ಮಂದಿರ ನಿರ್ಮಾಣ ಹಾಗೂ ಗೋಹತ್ಯೆ ವಿಚಾರವಾಗಿ ಈ ಇಬ್ಬರು ಹೇಳಿದಿಷ್ಟು…

  • ‘ಅಯೋಧ್ಯೆಯಲ್ಲಿರುವ ಕಲ್ಲನ್ನು ಬಳಸಿ ರಾಮ ಮಂದಿರ ಕಟ್ಟಲೇ ಬೇಕು. ಈ ರಾಮ ಮಂದಿರದ ಮೇಲೆ ಕೇಸರಿ ಧ್ವಜ ಹಾರಾಡುವ ದಿನ ದೂರವಿಲ್ಲ. ನಾವು ರಾಮ ಮಂದಿರ ಕಟ್ಟಿಯೇ ಕಟ್ಟುತ್ತೇವೆ. ಇದು ಕೇವಲ ಘೋಷಣೆಯಲ್ಲಿ. ನಮ್ಮ ನಂಬಿಕೆಯ ವಿಚಾರ. ಈಗ ರಾಮ ಮಂದಿರ ನಿರ್ಮಾಣ ಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ರಾಮ ಮಂದಿರ ನಿರ್ಮಾಣ ಗುರಿ ತಲುಪಲು ಸಮೀಪವಾಗಿದ್ದು, ಈ ಹಂತದಲ್ಲಿ ನಾವು ಎಚ್ಚರಿಕೆ ವಹಿಸಬೇಕು. ದೇಶದಲ್ಲಿ ಗೋ ಹತ್ಯೆ ನಿಷೇಧವಾಗದ ಹೊರತು ನಾವು ನೆಮ್ಮದಿಯಾಗಿರಲು ಸಾಧ್ಯವಿಲ್ಲ.’
    – ಮೋಹನ್ ಭಾಗವತ್
  • ‘2019ರ ವೇಳೆಗೆ ರಾಮ ಮಂದಿರ ನಿರ್ಮಾಣವಾಗುತ್ತದೆ. ಈಗ ದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸೂಕ್ತ ವಾತಾವರಣ ನಿರ್ಮಾಣವಾಗಿದೆ. ದೇಶದಲ್ಲಿ ಸಂಪೂರ್ಣ ಪ್ರಮಾಣದಲ್ಲಿ ಗೋ ಹತ್ಯೆ ನಿಷೇಧವಾಗಬೇಕು. ನಾವು ಈಗ ಬೌದ್ಧಿಕವಾಗಿ ಬೆಳಯಬೇಕಾಗಿದೆ. ಇನ್ನು ಲಿಂಗಾಯತರು ಹಾಗೂ ವೀರಶೈವರು ಹಿಂದೂಗಳೇ ಆಗಿದ್ದಾರೆ. ಅವರಿಬ್ಬರೂ ಶಿವನನ್ನು ಪೂಜಿಸುತ್ತಾರೆ. ಹೀಗಾಗಿ ತಮ್ಮೊಳಗೆ ಕಿತ್ತಾಟ ಮಾಡುವುದು ಬೇಡ. ಎಲ್ಲರೂ ಒಟ್ಟಾಗಿರೋಣ’
    – ಪೇಜಾವರ ಶ್ರೀ

Leave a Reply