ಕಾಶ್ಮೀರಕ್ಕಾಗಿ ಹೋರಾಡ್ತನಂತೆ ಉಗ್ರ ಹಫೀಜ್ ಸಯೀದ್, ಬಿಡುಗಡೆಯಾದ ದಿನವೇ ಬಾಲ ಬಿಚ್ಚಿದ ಮುಂಬೈ ದಾಳಿ ರೂವಾರಿ

ಡಿಜಿಟಲ್ ಕನ್ನಡ ಟೀಮ್:

ನಾಡಿದ್ದು ಭಾನುವಾರಕ್ಕೆ ಮುಂಬೈ ದಾಳಿ ನಡೆದು ಸರಿಯಾಗಿ ಒಂಬತ್ತು ವರ್ಷ ಪೂರ್ಣಗೊಳ್ಳುತ್ತದೆ. ಈ ಸಂದರ್ಭದಲ್ಲಿ ಪಾಕಿಸ್ತಾನ ಈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸೈಯದ್ ನನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಿದೆ. ಇಂದು ಬಿಡುಗಡೆಯಾದ ಹಫೀಜ್ ಸಯೀದ್, ‘ತಾನು ಕಾಶ್ಮೀರಕ್ಕಾಗಿ ಹೋರಾಡುತ್ತೇನೆ’ ಎಂದು ಹೇಳಿಕೆ ನೀಡುವ ಮೂಲಕ ತನ್ನ ಉದ್ಧಟತನ ಮೆರೆದಿದ್ದಾನೆ.

ಶುಕ್ರವಾರ ಬಿಡುಗಡೆಯಾದ ನಂತರ ಮಾತನಾಡಿದ ಹಫೀಜ್ ಸಯೀದ್ ಹೇಳಿರುವುದಿಷ್ಟು…

‘ಕಾಶ್ಮೀರದ ವಿಚಾರವಾಗಿ ನನ್ನ ಧ್ವನಿಯನ್ನು ತಡೆಯಲು 10 ತಿಂಗಲ ಕಾಲ ನನ್ನನ್ನು ಸೆರೆಹಿಡಿಯಲಾಗಿತ್ತು. ಕಾಶ್ಮೀರಿಗರಿಗಾಗಿ ನಾನು ಹೋರಾಡುತ್ತಿದ್ದೇನೆ. ಕಾಶ್ಮೀರದ ವಿಚಾರವಾಗಿ ದೇಶದ ಮೂಲೆ ಮೂಲೆಯಿಂದ ಜನರನ್ನು ಸೇರಿಸುತ್ತೇನೆ. ಆ ಮೂಲಕ ಕಾಶ್ಮೀರಿಗರಿಗೆ ಸ್ವಾತಂತ್ರ್ಯ ಸಿಗುವಂತೆ ಮಾಡಲು ಹೋರಾಡುತ್ತೇನೆ. ನನ್ನ ವಿರುದ್ಧ ಮಾಡಲಾಗಿದ್ದ ಯಾವುದೇ ಅಪರಾಧಗಳನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಭಾರತ ನನ್ನ ವಿರುದ್ಧ ಆಧಾರರಹಿತ ಆರೋಪ ಮಾಡಿತ್ತು. ಆದರೆ ನ್ಯಾಯಾಲಯದ ಮೂವರು ನ್ಯಾಯಾಧೀಶರು ನನ್ನನ್ನು ನಿರಪರಾಧಿ ಎಂದು ಘೋಷಿಸಿದೆ. ಪಾಕಿಸ್ತಾನ ಸರ್ಕಾರದ ಮೇಲೆ ಅಮೆರಿಕ ಒತ್ತಡ ಹೇರಿದ ಪರಿಣಾಮವಾಗಿ ನನ್ನನ್ನು ಬಂಧಿಸಲಾಗಿತ್ತು. ಅಮೆರಿಕ ಪಾಕಿಸ್ತಾನದ ಮೇಲೆ ಒತ್ತಡ ಹೇರುವಂತೆ ಮಾಡಿದ್ದು ಭಾರತ.’

ಭಾರತದ ವಿರುದ್ಧ ನೇರವಾಗಿ ಹೋರಾಡುವ ತಾಕತ್ತು ಇಲ್ಲದ ಪಾಕಿಸ್ತಾನ ಉಗ್ರರನ್ನೇ ಭಾರತ ವಿರುದ್ಧ ಬಳಸುವುದು ಗೊತ್ತಿರುವ ಸಂಗತಿ. ಈಗಲೂ ಪಾಕಿಸ್ತಾನ ಹಫೀಜ್ ಸಯೀದ್ ವಿಚಾರದಲ್ಲೂ ಅದನ್ನೇ ಮಾಡುತ್ತಿರುವುದು ಸ್ಪಷ್ಟವಾಗಿದೆ.

Leave a Reply