ಬೇನಾಮಿ ಆಸ್ತಿಗೆ ಆಧಾರ್ ಅಂಕುಶವಾಗೋದು ಹೇಗೆ ಎಂದು ಮೋದಿ ವಿವರಿಸಿದ್ದಾರೆ ಕೇಳಿ

ಡಿಜಿಟಲ್ ಕನ್ನಡ ಟೀಮ್:

ಆಧಾರ್ ಕಡ್ಡಾಯದ ಕುರಿತಾಗಿ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಹಂತದಲ್ಲಿ ಕೇಂದ್ರ ಸರ್ಕಾರ ಆಧಾರ್ ಕಡ್ಡಾಯ ನಿರ್ಧಾರವನ್ನು ಮುಂದುವರಿಸುತ್ತಲೇ ಇದೆ. ಈ ಮಧ್ಯೆ ಆಧಾರ್ ಕಡ್ಡಾಯದಿಂದ ಬೇನಾಮಿ ಆಸ್ತಿಗಳನ್ನು ಸಂಪೂರ್ಣವಾಗಿ ಮಟ್ಟ ಹಾಕಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ಮೇದಿ, ಬೇನಾಮಿ ಆಸ್ತಿಯನ್ನು ನಿಯಂತ್ರಿಸಲು ಆಧಾರ್ ಒಂದು ಪ್ರಬಲ ಅಸ್ತ್ರ ಎಂದಿದ್ದಾರೆ. ಅದು ಹೇಗೆ ಎಂದು ಮೋದಿ ವಿವರಿಸಿರೋದು ಹೀಗೆ…

‘ಆಧಾರ್ ಕಾರ್ಡ್ ಸಾಮಾನ್ಯ ಜನರ ಜೀವನದಲ್ಲಿ ಬಹುದೊಡ್ಡ ಬದಲಾವಣೆಯನ್ನು ತಂದಿದೆ. ಆಧಾರ್ ಅನ್ನು ಮೊಬೈಲ್ ಹಾಗೂ ಜನ್ ಧನ್ ಗೆ ಜೋಡಣೆ ಮಾಡುವ ಮೂಲಕ ಕೆಲವು ವರ್ಷಗಳ ಹಿಂದೆ ಕಲ್ಪಿಸಿಕೊಳ್ಳಲೂ ಅಸಾಧ್ಯವಾಗದಂತಹ ವ್ಯವಸ್ಥೆಯನ್ನು ನಾವು ತಂದಿದ್ದೇವೆ.

ಕಳೆದ ಮೂರು ವರ್ಷಗಳಲ್ಲಿ ಆಧಾರ್ ಅನ್ನು ಬಳಸಿಕೊಂಡು ನಮ್ಮ ವ್ಯವಸ್ಥೆಯಲ್ಲಿ ಸೇರಿಕೊಂಡಿದ್ದ ಕೋಟ್ಯಂತರ ನಕಲಿ ಹೆಸರುಗಳನ್ನು ಕಿತ್ತೊಗೆಯಲಾಗಿದೆ. ಅದೇ ರೀತಿ ಆಧಾರ್ ಅನ್ನು ಬೇನಾಮಿ ಆಸ್ತಿ ವಿರುದ್ಧ ಪ್ರಬಲ ಅಸ್ತ್ರವಾಗಿ ಬಳಸಬಹುದಾಗಿದೆ.

ನೋಟು ಅಮಾನ್ಯದ ನಂತರ ಸ್ವಚ್ಛ ಆರ್ಥಿಕತೆಗೆ ದಾರಿಯಾಗಿದ್ದು, ಇದರಿಂದ ದೇಶದಲ್ಲಿ ಒಂದು ಬದಲಾವಣೆ ಬಂದಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಇದೇ ಮೊದಲ ಬಾರಿಗೆ ಭ್ರಷ್ಟರು ಕಪ್ಪು ಹಣ ಚಲಾಯಿಸಲು ಎದುರುವಂತಹ ಪರಿಸ್ಥಿತಿ ಎದುರಾಗಿದೆ. ಇಷ್ಟು ದಿನಗಳ ಕಾಲ ಕಪ್ಪು ಹಣ ಪ್ರತ್ಯೇಕ ಆರ್ಥಿಕತೆಯಂತೆ ಚಲಾವಣೆಯಾಗುತ್ತಿತ್ತು. ಆದರೆ ಈಗ ಅದು ಸಹಜ ಆರ್ಥಿಕತೆಗೆ ಸೇರಿಕೊಂಡಿದೆ.ಈ ಒಂದು ಬದಲಾವಣೆಯನ್ನು ಆಧಾರ್ ಮೂಲಕ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಬಹುದು.

ಆಧಾರ್ ಮೂಲಕ ಸರ್ಕಾರ ಬಡವರಿಗೆ ತಲುಪಬೇಕಿರುವ ಸೌಲಭ್ಯಗಳು ಸಿಗುವಂತೆ ನೋಡಿಕೊಳ್ಳಲು ನೆರವಾಗಿದೆ. ಆಹಾರ ಪದಾರ್ಥ ಹಂಚಿಕೆಯಲ್ಲಿ ಸಬ್ಸಿಡಿ ವಿತರಣೆಯಾಗಿರಬಹುದು, ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ ಧನವಾಗಿರಬಹುದು, ಔಷಧಿಗಳಾಗಿರಬಹುದು, ಪಿಂಚಣಿ ಹಾಗೂ ಇತರೆ ಸರ್ಕಾರಿ ಸೌಲಭ್ಯವಿರಬಹುದು ಆಧಾರ್ ನಿಂದ ಇದರ ಫಲಾನುಭವಿಗಳು ಯಾರು ಎಂಬುದನ್ನು ನಿಖರವಾಗಿ ಗುರುತಿಸಿ ಅವರಿಗೆ ಸರಿಯಾಗಿ ತಲುಪಿದಯೇ ಎಂಬುದನ್ನು ಪತ್ತೆಹಚ್ಚಬಹುದಾಗಿದೆ. ಅದೇ ರೀತಿ ಆಧಾರ್ ಮೂಲಕ ಡಿಜಿಟಲ್ ವಿಳಾಸವಿದ್ದರೆ ಸಂಗಟಿತ ಅಪರಾಧಗಳನ್ನು ನಿಯಂತ್ರಣಕ್ಕೆ ತರಬಹುದಾಗಿದೆ.

ಅದೇ ರೀತಿ ಆಸ್ತಿಗಲ ವಿಚಾರದಲ್ಲೂ ಆಧಾರ್ ಕಾರ್ಡ್ ಅನ್ನು ಬಳಸಿದರೆ ಯಾರು ಎಷ್ಟು ಆಸ್ತಿ ಹೊಂದಿದ್ದಾರೆ. ಬೇರೆಯವರ ಹೆಸರಿನಲ್ಲಿ ಎಷ್ಟು ಆಸ್ತಿ ಹೊಂದಿದ್ದಾರೆ ಎಂಬುದನ್ನು ಪತ್ತೆಹಚ್ಚಬಹುದು.’

Leave a Reply