ಚಳಿಗಾಲ ಆರಂಭವಾಗುವ ಮುನ್ನ ದೋಕಲಂ ನಲ್ಲಿ 1800 ಸೇನಾ ತುಕಡಿ ನಿಯೋಜಿಸಿದೆ ಚೀನಾ! ರಕ್ಷಣಾ ಸಚಿವಾಲಯಕ್ಕೆ ಎಚ್ಚರಿಕೆ ಗಂಟೆ

ಡಿಜಿಟಲ್ ಕನ್ನಡ ಟೀಮ್:

ಭಾರ, ಚೀನಾ. ಭೂತಾನ್ ರಾಷ್ಟ್ರಗಳ ಗಡಿ ಸೇರುವ ಪ್ರದೇಶವಾದ ದೋಕಲಂ ಈ ವರ್ಷ ಸಾಕಷ್ಟು ಚರ್ಚೆಯಲ್ಲಿತ್ತು. ಈ ಪ್ರದೇಶದ ವಿವಾದದಲ್ಲಿ ಭಾರತ ಚೀನಾಗೆ ಸೆಡ್ಡು ಹೊಡೆದು ನಿಂತ ಪರಿ ಎಲ್ಲರ ಗಮನ ಸೆಳೆದಿತ್ತು. ಕಳೆದ ಮೂರು ತಿಂಗಳಿನಿಂದ ತಣ್ಣಗಿದ್ದ ಈ ಪ್ರದೇಶ ಈಗ ಮತ್ತೆ ಕಾವು ಪಡೆದುಕೊಳ್ಳುತ್ತಿದೆ. ಕಾರಣ ಈ ಪ್ರದೇಶದಲ್ಲಿ ಚೀನಾ 1800 ಸೇನಾ ತುಕಡಿಗಳನ್ನು ನಿಯೋಜಿಸುತ್ತಿದೆ. ಆ ಮೂಲಕ ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ಎಚ್ಚರಿಕೆ ಗಂಟೆ ಬಾರಿಸಿದಂತಾಗಿದೆ.

ಸದ್ಯ ಚೀನಾ ಸೇನೆ ಆ ಪ್ರದೇಶದಲ್ಲಿ ಎರಡು ಹೆಲಿಪ್ಯಾಡ್ ಗಳ ನಿರ್ಮಾಣಕ್ಕೆ ಮುಂದಾಗಿದ್ದು, ಚಳಿಗಾಲದಲ್ಲಿ ಅಗತ್ಯ ವಸ್ತುಗಳ ಪೂರೈಕೆ ಹಾಗೂ ಸಂಗ್ರಹಣೆಗೆ ಮುಂದಾಗಿದೆ. ಆ ಮೂಲಕ ದೋಕಲಂ ಪ್ರದೇಶದಲ್ಲಿ ಶಾಶ್ವತ ಸೇನಾ ತುಕಡಿ ನಿರ್ಮಾಣ ಮಾಡುವ ನಿರ್ಧಾರ ಸ್ಪಷ್ಟವಾಗಿದೆ.

ಈ ಹಿಂದೆ ದೋಕಲಂ ಪ್ರದೇಶದಲ್ಲಿ ಸೇನೆ ನಿಯೋಜನೆ ಮುಂದುವರಿಕೆ ಬಗ್ಗೆ ಮಾಹಿತಿ ನೀಡಿದ್ದ ಚೀನಾ, ‘ದೋಕಲಂನಲ್ಲಿರುವ ಚೀನಾ ಭಾಗದ ಪ್ರದೇಶದಲ್ಲಿ ಚಳಿಗಾಲದಲ್ಲೂ ಸೇನೆಯ ನಿಯೋಜನೆ ಮುಂದುವರಿಯಲಿದೆ’ ಎಂದು ತಿಳಿಸಿತ್ತು. ಚೀನಾದ ಈ ನಿರ್ಧಾರದಿಂದ ಈಗ ರಕ್ಷಣಾ ಸಚಿವಾಲಯಕ್ಕೆ ಎಚ್ಚರಿಕೆ ಗಂಟೆ ಬಾರಿಸಿದ್ದು, ಭಾರತ ಸೇನೆ ಚೀನಾದ ಪ್ರತಿ ಹೆಜ್ಜೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

Leave a Reply