ರಾಮಸೇತು ನೈಸರ್ಗಿಕ ಸೃಷ್ಟಿಯಲ್ಲ ಎಂದ್ರು ಅಮೆರಿಕ ತಜ್ಞರು, ರಾಮನ ಅಸ್ತಿತ್ವ ಪ್ರಶ್ನಿಸೋರು ಈಗ ಏನು ಹೇಳ್ತಾರೆ?

ಡಿಜಿಟಲ್ ಕನ್ನಡ ಟೀಮ್:

ರಾಮಾಯಣ ಕೇವಲ ಕಾಲ್ಪನಿಕ ಕಥೆ. ಶ್ರೀರಾಮ ಅಸ್ತಿತ್ವದಲ್ಲಿ ಇರಲೇ ಇಲ್ಲ. ಅದಕ್ಕೆ ಯಾವುದೇ ಪುರಾವೆಗಳಿಲ್ಲ ಎಂಬ ಹೇಳಿಕೆಗಳಿಂದ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿರೋರು ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ರಾಮಾಯಣದ ಕುರಿತಂತೆ ಒಂದು ಸುದ್ದಿ ಹೊರಬಂದಿದೆ. ಅದೇನೆಂದರೆ ಭಾರತದ ರಾಮೇಶ್ವರದಿಂದ ಲಂಕಾಗೆ ಸಂರಪ್ಕವಾಗಿರುವ ರಾಮಸೇತು ನೈಸರ್ಗಿಕವಾದುದಲ್ಲ, ಬದಲಾಗಿ ನಿರ್ಮಾಣ ಮಾಡಿರುವುದು ಎಂದು ಅಮೆರಿಕದ ವಿಜ್ಞಾನಿಗಳು ಖಚಿತಪಡಿಸಿದ್ದಾರೆ.

ಸಮುದ್ರದ ತಳದಲ್ಲಿ ದ್ವಾರಕ ನಗರದ ಕುರುಹುಗಳು ಪತ್ತೆಯಾಗಿರುವುದು, ರಾಮಾಯಣದಲ್ಲಿ ಬರುವ ಪ್ರಮುಖ ಸ್ಥಳ ರಾಮಸೇತುವನ್ನು ಕೆಲವರು ಒಪ್ಪಿಕೊಳ್ಳಲು ಬಿಲ್ ಕುಲ್ ಸಿದ್ಧರಿಲ್ಲ. ದ್ವಾರಕ ನಗರದ ಕುರುಹುಗಳು ಸುಳ್ಳು, ರಾಮಸೇತು ಎಂಬುದು ನೈಸರ್ಗಿಕ ಸೃಷ್ಟಿ ಎಂಬ ವೈದ ಮುಂದಿಟ್ಟಿದ್ದರು. ಈಗ ಅಮೆರಿಕದ ಡಿಸ್ಕವರಿ ಕಮ್ಯೂನಿಕೇಷನ್ ಸೈನ್ಸ್ ವಾಹಿನಿ ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಿದ್ದು, ಇದರಲ್ಲಿ ರಾಮಸೇತುವಿನ ಕುರಿತಾಗಿ ವೈಜ್ಞಾನಿಕ ಉತ್ತರಗಳನ್ನು ನೀಡಿದ್ದಾರೆ.

ರಾಮಾಯಣ ಕೇವಲ ಕಾಲ್ಪನಿಕ, ಅದು ನಿಜ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಬೊಬ್ಬೆ ಹಾಕುತ್ತಿರುವವರು ಈ ವೈಜ್ಞಾನಿಕ ಕಾರಣಗಳನ್ನು ಒಪ್ಪಿಕೊಳ್ಳುತ್ತಾರೋ ಅಥವಾ ಪ್ರಚಾರ ಪಡೆಯಲು ಮತ್ತೆ ಅದರಲ್ಲೂ ಕೊಂಕು ಹುಡುಕುತ್ತಾರೋ ಕಾದು ನೋಡಬೇಕು.

Leave a Reply