ರವಿ ಬೆಳಗೆರೆಗೆ ಸಿಕ್ತು ಮಧ್ಯಂತರ ಜಾಮೀನು

ಡಿಜಿಟಲ್ ಕನ್ನಡ ಟೀಮ್:

ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಅವರ ಕೊಲೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರಿಗೆ ನಗರದ ಸಿವಿಲ್ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ.

ಸೋಮವಾರವಷ್ಟೇ 1ನೇ ಎಎಂಸಿಸಿ ನ್ಯಾಯಾಲಯ ರವಿ ಬೆಳಗೆರೆ ಅವರನ್ನು 12 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಿತ್ತು. ಆಗ ರವಿ ಬೆಳಗೆರೆ ಅವರ ಜಾಮೀನಿನ ವಿಷಯವಾಗಿ ಯಾವುದೇ ಅರ್ಜಿ ಸಲ್ಲಿಸದ ವಕೀಲರು, ಇಂದು ರವಿ ಬೆಳಗೆರೆ ಅವರ ಆರೋಗ್ಯ ಹದಗೆಟ್ಟಿರುವ ಕಾರಣ ನೀಡಿ ಮಧ್ಯಂತರ ಜಾಮೀನಿಗೆ ಮನವಿ ಮಾಡಿದ್ದರು. ಮಧ್ಯಾಹ್ನ ವಿಚಾರಣೆ ನಡೆಸಿದ ನ್ಯಾಯಾಲಯ ಡಿ.16ರವರೆಗೆ ಅಂದರೆ ಮೂರು ದಿನಗಳ ಕಾಲ ಜಾಮೀನು ನೀಡಿದೆ. ಡಿ.16ಕ್ಕೆ ಮತ್ತೆ ವಿಚಾರಣೆ ನಡೆಸಲು ನ್ಯಾಯಾಲಯ ನಿರ್ಧರಿಸಿದೆ.

ವಿಚಾರಣೆಗೆ ಸಹಕಾರ ನೀಡುವಂತೆ ಸೂಚನೆ ರವಾನಿಸಿರುವ ನ್ಯಾಯಲಯ, ಇಬ್ಬರ ಶ್ಯೂರಿಟಿ ಮತ್ತು ₹ 1 ಲಕ್ಷ ಬಾಂಡ್ ಪಡೆದು ಷರತ್ತುಬದ್ಧ ಜಾಮೀನು ನೀಡಿತು. ಇದಕ್ಕೂ ಮುನ್ನ ಅನಾರೋಗ್ಯದ ಹಿನ್ನೆಲೆಯಲ್ಲಿ ರವಿ ಬೆಳಗೆರೆ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಚಿಕಿತ್ಸೆಯ ಅಗತ್ಯ ಇರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಜಾಮೀನು ನೀಡಿದೆ.

Leave a Reply