ಗುಜರಾತ್ ಚುನಾವಣೆ: ಸತತ ಐದನೇ ಬಾರಿಯೂ ಬಿಜೆಪಿಗೆ ಅಧಿಕಾರ ಅಂತಿದೆ ಚುನಾವಣೋತ್ತರ ಸಮೀಕ್ಷೆ!

ಡಿಜಿಟಲ್ ಕನ್ನಡ ಟೀಮ್:

ದೇಶದ ರಾಜಕೀಯಕ್ಕೆ ತಿರುವು ನೀಡುವ ಘಟ್ಟವಾಗಿ ಬಿಂಬಿತವಾಗಿರುವ ಗುಜರಾತ್ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಮತದಾನ ಮುಕ್ತಾಯವಾಗುತ್ತಿದ್ದಂತೆ ಈಗ ಎಲ್ಲರ ಗಮನ ಹರಿದಿರೋದು ಚುನಾವಣಾ ನಂತರದ ಸಮೀಕ್ಷೆ ಅಂಕಿ ಅಂಶಗಳ ಮೇಲೆ. ಸತತ ನಾಲ್ಕು ಅವಧಿಗಳಿಂದ ಅಧಿಕಾರದ ಗದ್ದುಗೆ ಅಲಂಕರಿಸಿರುವ ಬಿಜೆಪಿ ಐದನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವುದೇ ಎಂಬ ಕುತೂಹಲಮೂಡಿತ್ತು. ಈಗ ಬಿಜೆಪಿ ಅಧಿಕಾರ ಹಿಡಿಯೋದು ಖಚಿತ ಎನ್ನುತ್ತಿವೆ ವಿವಿಧ ಸಂಸ್ಥೆಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆ. ಯಾವ ಯಾವ ಸಮೀಕ್ಷೆಯಲ್ಲಿ ಯಾವ ಪಕ್ಷ ಎಷ್ಟು ಕ್ಷೇತ್ರ ಗೆಲ್ಲಲಿದೆ ಎಂದು ತಿಳಿಸಿದೆ ಎಂಬುದನ್ನು ನೋಡೋಣ ಬನ್ನಿ…

ಟೈಮ್ಸ್ ನೌ: ಬಿಜೆಪಿ 109, ಕಾಂಗ್ರೆಸ್ 70, ಇತರರು 03

ಸೀ ವೋಟರ್: ಬಿಜೆಪಿ 108, ಕಾಂಗ್ರೆಸ್ 74

ಸಿಎನ್ಎನ್ ಐಬಿಎನ್: ಬಿಜೆಪಿ 109, ಕಾಂಗ್ರೆಸ್ 70, ಇತರೆ 03

ರಿಪಬ್ಲಿಕ್: ಬಿಜೆಪಿ 108, ಕಾಂಗ್ರೆಸ್ 74

ಇಂಡಿಯಾ ನ್ಯೂಸ್: ಬಿಜೆಪಿ 110-120, ಕಾಂಗ್ರೆಸ್ 70-74, ಇತರೆ 0-4

ಕಾಪ್ಸ್: ಬಿಜೆಪಿ 128, ಕಾಂಗ್ರೆಸ್ 54

ಸಿಎನ್ಎನ್: ಬಿಜೆಪಿ 125, ಕಾಂಗ್ರೆಸ್ 57

ಸಹರಾ: ಬಿಜೆಪಿ 115, ಕಾಂಗ್ರೆಸ್ 65, ಇತರೆ 02

ಇಂಡಿಯಾ ಟುಡೆ: ಬಿಜೆಪಿ 99-113, ಬಿಜೆಪಿ 68-82, ಇತರೆ 1-4

ನ್ಯೂಸ್ ಎಕ್ಸ್: ಬಿಜೆಪಿ 115, ಕಾಂಗ್ರೆಸ್ 65, ಇತರೆ 02

ಈ ಎಲ್ಲಾ ಸಮೀಕ್ಷೆಗಳ ಪ್ರಕಾರ ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಬರೋದು ಖಚಿತ. ಈ ಅಂಕಿ ಅಂಶಗಳ ಪ್ರಕಾರ, ರಾಹುಲ್ ಗಾಂಧಿ ಹಾರ್ದಿಕ್ ಪಟೇಲ್, ಅಲ್ಪೇಶ್ ಹಾಗೂ ಜಿಗ್ನೇಶ್ ಜತೆ ಕೈ ಜೋಡಿಸಿದ್ದು, ನಿರಂತರವಾಗಿ ದೇವಸ್ಥಾನಗಳ ಮ್ಯಾರಥಾನ್ ಭೇಟಿ, ಉಚಿತ ಶಿಕ್ಷಣ, ರೈತರ ಸಾಲ ಮನ್ನಾದಂತಹ ಅತ್ಯಾಕರ್ಷಕ ಭರವಸೆಗಳನ್ನು ಕಡೆಗಣಿಸಿ ಗುಜರಾತಿನ ಜನರು ಮೋದಿ ನಾಯಕತ್ವದ ಬಿಜೆಪಿಯ ಕೈ ಹಿಡಿಯಲು ನಿರ್ಧರಿಸಿದ್ದಾರೆ.

ಇನ್ನು ಹಿಮಾಚಲ ಪ್ರದೇಶ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷೆ ಹೇಳುತ್ತಿದೆ. ಇದೇ ತಿಂಗಳು 18ರಂದು ಎರಡೂ ರಾಜ್ಯಗಳ ಫಲಿತಾಂಶ ಹೊರಬೀಳಲಿದ್ದು, ಈ ಅಂಕಿ ಅಂಶಗಳು ಎಷ್ಟರಮಟ್ಟಿಗೆ ನಿಜ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಿದೆ.

Leave a Reply