ಸೇನೆಗೆ ಸೇರ್ಪಡೆಯಾಯ್ತು ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ, ಹಿಂದೂಮಹಾ ಸಾಗರದಲ್ಲಿ ಅಬ್ಬರಿಸಲು ಕಲ್ವರಿ ಸಜ್ಜು

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಇಂದು ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ಕಲ್ವರಿಯನ್ನು ನೌಕಾ ಸೇನೆಗೆ ಸೇರ್ಪಡೆಗೊಳಿಸಿದರು.

ಸದ್ಯ ಸಮುದ್ರ ವಲಯದಲ್ಲಿ ಪ್ರಾಬಲ್ಯ ಸಾಧಿಸುವತ್ತ ಗಮನ ಹರಿಸುತ್ತಿರುವ ಭಾರತ ನೌಕಾಪಡೆಯ ಬಲವರ್ದನೆಗೆ ಸಾಕಷ್ಟು ಗಮನ ಹರಿಸಿದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ನೌಕಾ ಪಡೆಗೆ ಆರು ಅಣ್ವಸ್ತ್ರ ಸಜ್ಜಿತ ಜಲಾಂತರ್ಗಾಮಿ ನಿಯೋಜಿಸಲು ನಿರ್ಧರಿಸಿದ್ದು, ಮುಂದಿನ ವರ್ಷದ ವೇಳೆ ಜಲಾಂತರ್ಗಾಮಿ ಸೋನೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವದೇಶಿ ನಿರ್ಮಿತ ಆರು ಸ್ಕೋರ್ಪೇನ್ ಜಲಾಂತರ್ಗಾಮಿಗಳಲ್ಲಿ ಮೊದಲನೆಯದನ್ನು ಸೇನೆಗೆ ಅನಿಯೋಜಿಸಿದ್ದಾರೆ.

ಈ ಜಲಾಂತರ್ಗಾಮಿ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹೇಳಿದಿಷ್ಟು… ‘ಕಲ್ವರಿ ಒಂದು ಅತ್ಯುತ್ತಮ ತಂತ್ರಜ್ಞಾನ ಹೊಂದಿರುವ ಜಲಾಂತರ್ಗಾಮಿ. ಇದು ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಗುಣಮಟ್ಟಕ್ಕೆ ಸಾಕ್ಷಿಯಾಗಿ ನಿಂತಿದೆ. ಇನ್ನು ಭಾರತದ ಜತೆ ಸಾಕಷ್ಟು ರಾಜತಾಂತ್ರಿಕ ಯೋಜನೆಗಳ ಒಪ್ಪಂದ ಮಾಡಿಕೊಂಡಿರುವ ರಷ್ಯಾಗೂ ಪ್ರಧಾನಿ ಧನ್ಯವಾದ ಅರ್ಪಿಸಿದರು. ಈ ಜಲಾಂತರ್ಗಾಮಿಯನ್ನು ಲೋಕಾರ್ಪಣೆ ಮಾಡುತ್ತಿರೋದು ಹೆಮ್ಮೆಯ ಸಂಗತಿ. ಈ ಜಲಾಂತರ್ಗಾಮಿ ಸೇರ್ಪಡೆಯಿಂದ ನೌಕಾಪಡೆಯ ಬಲ ಹೆಚ್ಚಾಗಿದೆ. ಈ ಜಲಾಂತರ್ಗಾಮಿಗೆ ಹಿಂದೂಮಹಾಸಾಗರದಲ್ಲಿ ಅತ್ಯಂತ ಭಯಾನಕವಾಗಿರುವ ಶಾರ್ಕ್ ಗೆ ಹೋಲಿಸಿ ಕಲ್ವರಿ ಎಂದು ಹೆಸರಿಡಲಾಗಿದೆ. ಹೆಸರಿಗೆ ತಕ್ಕಂತೆ ಈ ಜಲಾಂತರ್ಗಾಮಿ ಬಲಿಷ್ಠವಾಗಿದ್ದು ನೌಕಪಡೆಯ ದೊಡ್ಡ ಅಸ್ತ್ರವಾಗಿದೆ.

ಭಾರತ ತನ್ನ ನೆರೆ ರಾಷ್ಟ್ರಗಳಿಗೆ ಯಾವುದೇ ರೀತಿಯ ವಿಕೋಪಕ್ಕೆ ತುತ್ತಾದರೂ ಮೊದಲಿಗೆ ನೆರವಾಗಲು ಭಾರತ ಸದಾ ಸಿದ್ಧವಿದೆ. ಇನ್ನು ಭಾರತ ಉಗ್ರರ ವಿರುದ್ಧ ತನ್ನ ಸಮರ ಮುಂದುವರಿಸಿದ್ದು, ಈ ವರ್ಷ ಭಾರತದ ಗಡಿಯಲ್ಲಿ 200 ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಅಲ್ಲದೆ ಕಾಶ್ಮೀರದಲ್ಲಿ ಕಲ್ಲುತೂರಾಟದ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿವೆ. ಅದೇ ರೀತಿ ನಕ್ಸಲ್ ಪಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳ ಮೂಲಕ ನಕ್ಸಲರ ದಾಳಿಯನ್ನು ನಿಯಂತ್ರಿಸಲಾಗಿದೆ.’

Leave a Reply