ಬಿ.ಎಸ್ ಯಡಿಯೂರಪ್ಪ ವಿರುದ್ಧ ನಿರ್ಮಾಣವಾಗುತ್ತಿದೆ ಸಿನಿಮಾ! ಈ ಚಿತ್ರ ನಿರ್ಮಿಸುತ್ತಿರೋರು ಯಾರು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಯಡಿಯೂರಪ್ಪ ಆಪ್ತ ಸಹಾಯಕ ಸಂತೋಷ್ ಹಾಗೂ ಕೆ.ಎಸ್ ಈಶ್ವರಪ್ಪನವರ ಮಾಜಿ ಆಪ್ತ ಸಹಾಯಕ ವಿನಯ್ ನಡುವಣ ಕಿತ್ತಾಟ ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಬಂದಿರುವ ಹೊಸ ಸುದ್ದಿ ಏನೆಂದರೆ ವಿನಯ್ ಅವರು ಸಿನಿಮಾ ಒಂದನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದು ತಮ್ಮ ಹಾಗೂ ಸಂತೋಷ್ ನಡುವಣ ಕಿತ್ತಾಟದ ಕುರಿತು. ಕೇವಲ ಇಷ್ಟೇ ಅಲ್ಲ ಈ ಚಿತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ವಿಲನ್ ರೀತಿ ತೋರಿಸಲಿದ್ದಾರೆ ಎಂಬ ಸುದ್ದಿ ಸದ್ಯ ಎಲ್ಲರ ಹುಬ್ಬೆರುವಂತೆ ಮಾಡಿದೆ.

ಹೌದು, ಇಂತಹದೊಂದು ಅಚ್ಚರಿ ಮಾಹಿತಿ ಈಗ ಹೊರ ಬಂದಿದೆ. ಶೋಭಾ ಕ್ರಿಯೇಷನ್ಸ್ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿರುವ ವಿನಯ್, ಚಿತ್ರಕ್ಕೆ ‘ಮೂರು ಬಿಟ್ಟವರು ಊರಿಗೆ ದೊಡ್ಡವರು’ ಎಂಬ ಹೆಸರಿಟ್ಟಿದ್ದಾರೆ. ಚಿತ್ರದಲ್ಲಿ ವಿನಯ್ ಪಾತ್ರವನ್ನು  ಹೆಸರಿನಲ್ಲಿ ಮೂಡಿ ಬರುತ್ತಿರುವ ಸಿನಿಮಾ

ಸಿನಿಮಾದಲ್ಲಿ ವಿನಯ್ ಪಾತ್ರ ಹೀರೋ ಆಗಿದ್ದು ಹಾಗೂ ಯಡಿಯೂರಪ್ಪ ಪಿ.ಎ ಸಂತೋಷ್ ಅವರ ಪಾತ್ರ ವಿಲನ್‌ ಆಗಿರಲಿದೆ.

ವಿನಯ್ ಗೆ ಹಲ್ಲೆ ಮಾಡಿದ ಆರೋಪ ಪ್ರಕರಣದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ರಕ್ಷಣೆ ಮಾಡುತ್ತಿದ್ದಾರೆ. ಪ್ರಮುಖ ಆರೋಪಿ ಸ್ಥಾನದಲ್ಲಿರುವ ಸಂತೋಷ್ ರನ್ನು ಜತೆಯಲ್ಲಿಟ್ಟುಕೊಂಡು ಬಿಎಸ್ವೈ ಚುನಾವಣಾ ಪ್ರಚಾರ ನಡೆಸುದ್ದಾರೆ. ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ಯಡಿಯೂರಪ್ಪ ಅವರನ್ನು ವಿಲನ್ ರೀತಿಯಲ್ಲಿ ತೋರಿಸಲಾಗುವುದಂತೆ.

ಸಿನಿಮಾದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಯಡಿಯೂರಪ್ಪ ಬಗ್ಗೆಯೂ ಪರೋಕ್ಷ ಪ್ರಸ್ತಾಪ ಮಾಡಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ರಿಜಿಸ್ಟರ್ ಕೂಡ ವಿನಯ್ ಮಾಡಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲೇ ರಹಸ್ಯವಾಗಿ ಚಿತ್ರೀಕರಣ ನಡೆಯುತ್ತಿದ್ದು, ಸದ್ಯದಲ್ಲೇ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲು ವಿನಯ್ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ.

ವಿನಯ್ ಜತೆ ಸಿನಿಮಾ ನಿರ್ಮಾಣಕ್ಕೆ ವಕೀಲ ಅಮೃತೇಶ್ ಕೂಡ ಸಾಥ್ ನೀಡಿದ್ದು, ಸಿನಿಮಾದ ಕಥೆ ಚಿತ್ರಕಥೆ ವಿನಯ್ ಅವರದ್ದೇ ಆಗಿದೆ. ಚುನಾವಣಾ ಹೊಸ್ತಿಲಲ್ಲಿ ಬಿಎಸ್ವೈ ಅವರಿಗೆ ಈ ಚಿತ್ರ ಮುಜುಗರಕ್ಕೀಡುಮಾಡಲಿರುವುದು ಖಚಿತ. ಹೀಗಾಗಿ ರಾಜ್ಯ ಬಿಜೆಪಿಗೆ ಬಿಸಿ ತುಪ್ಪವಾಗಲಿದೆಯಾ ವಿನಯ್ ಸಿನಿಮಾ? ಎಂಬ ಪ್ರಶ್ನೆಯೂ ಉದ್ಬವಿಸಿದೆ.

Leave a Reply