ಮಂಡ್ಯ ರಮೇಶ್, ಸಾಧು ಕೋಕಿಲಾ ಸ್ಪಾ ಹುಡುಗಿಯನ್ನು ಮಂಚಕ್ಕೆ ಕರೆದಿದ್ದು ಸತ್ಯನಾ?

ಡಿಜಿಟಲ್ ಕನ್ನಡ ಟೀಮ್:

ಮೈಸೂರು ಮಸಾಜ್ ಪಾರ್ಲರ್ ನಲ್ಲಿ ಸೆಕ್ಸ್ ದಂಧೆ ಪ್ರಕರಣ ಹೊರಬಂದಿದ್ದು, ಕನ್ನಡ ಚಿತ್ರರಂಗದ ನಂಟು ಕೇಳುತ್ತಿದೆ. ಈ ಬಗ್ಗೆ ಯುವತಿಯ ಲಿಖಿತ ದೂರು ದಾಖಲಿಸಿದ್ದು ದೂರಿನಲ್ಲಿ ಖ್ಯಾತ ಹಾಸ್ಯ ನಟರಾದ

ಮಂಡ್ಯ ರಮೇಶ್ ಹಾಗೂ ಸಾಧು ಕೋಕಿಲಾರ ಹೆಸರು ಉಲ್ಲೇಖ ಮಾಡಿದ್ದಾರೆ. ಬಾಡಿ ಮಸಾಜ್ ಹೆಸರಲ್ಲಿ ನಡೆಯುತ್ತಿದ್ದ ಸ್ಪಾಗೆ ಈ ಇಬ್ಬರು ನಟರು ಎರಡು ಭಾರಿ ಭೇಟಿ ನೀಡಿದ್ದರು. ಆ ಸಮಯದಲ್ಲಿ  ಗುಪ್ತಾಂಗ ಮುಟ್ಟುವಂತೆ ಒತ್ತಾಯಿಸುತ್ತಿದ್ರು, ನಾನು ಮುಟ್ಟದಿದ್ರೆ ಮಾಲೀಕರಿಗೆ ಹೇಳುವ ಬೆದರಿಕೆ ಹಾಕ್ತಿದ್ರು. ಭಯದಲ್ಲಿ ನಾನು ಅವರ ಗುಪ್ತಾಂಗ ಮುಟ್ಟಿದಾಗ ಅವರು ನನ್ನ ಗುಪ್ತಾಂಗ ಮುಟ್ಟುತ್ತಿದ್ರು, ಹಣದ ಆಮಿಷ ತೋರಿಸಿ ಲೈಂಗಿಕ ಸುಖಕ್ಕೆ ಇಬ್ಬರೂ ಒತ್ತಾಯಿಸುತ್ತಿದ್ದರು. ಅಂತ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಇವರಿಬ್ಬರಷ್ಟೇ ಅಲ್ಲದೆ ಬೆಂಗಳೂರಿನಿಂದ ಇಬ್ಬರು ಪೊಲೀಸ್ ಅಧಿಕಾರಿಗಳು ಬರುತ್ತಿದ್ದರು, ಅವರೊಂದಿಗೆ ಎಲ್ಲಾ ರೀತಿಯಲ್ಲೂ ಸಹಕಾರ ಕೊಡಬೇಕಿತ್ತು ಇಲ್ಲದಿದ್ದರೆ ಮಾಲೀಕರು ಬೈಯ್ಯುತ್ತಿದ್ದರು. ಹಾಗಾಗಿ ನಾನು ಸಹಕರಿಸುತ್ತಿದ್ದೆ. ಲೈಂಗಿಕವಾಗಿ ಬಳಸಿಕೊಂಡಿದ್ರಿಂದ ನೊಂದಿದ್ದೇನೆ ಎಂದು ದೂರಿದ್ದಾರೆ.

ಈ ವಿಚಾರ ಮಾಧ್ಯಮಗಳಲ್ಲಿ ವರದಿ ಬಂದ ನಂತರ ಮಾತನಾಡಿದ ಹಾಸ್ಯನಟ ಮಂಡ್ಯ ರಮೇಶ್ ಹೇಳಿದಿಷ್ಟು… ‘ನಾನು ಇಲ್ಲೀವರೆಗೂ ಆ ಯುವತಿಯನ್ನು ನೋಡಿಲ್ಲ, ಈ ವಿಚಾರಕ್ಕೂ ನನಗೂ ಸಂಬಂಧವಿಲ್ಲ, ಆ ಯುವತಿ ನನ್ನ ಹೆಸರನ್ನು ಯಾಕೆ ಪ್ರಸ್ತಾಪಿಸಿದ್ದಾರೇ ಅನ್ನೋದೆ ಅರ್ಥ ಆಗ್ತಿಲ್ಲ. ಸುದ್ದಿ ಕೇಳ್ತಿದ್ದ ಹಾಗೆ ನನಗೆ ಅಚ್ಚರಿ ಹಾಗೂ ದಿಗ್ಬ್ರಾಂತಿಯಾಯ್ತು. ಸಾಕಷ್ಟು ಸ್ನೇಹಿತರು, ಅಭಿಮಾನಿಗಳೂ ಕೂಡ ನನಗೆ ಕರೆ ಮಾಡಿ ಧೈರ್ಯ ತುಂಬಿದರು, ಈ ಪ್ರಕರಣದಲ್ಲಿ ಸ್ವಲ್ಪವೂ ಸತ್ಯವಿಲ್ಲ ನಾನು ಹೆದರುವ ಅಗತ್ಯವೂ ಇಲ್ಲ ಎಂದಿದ್ದಾರೆ. ನನಗೆ ಆ ಯುವತಿ ವಯಸ್ಸಿನ ಮಗಳಿದ್ದಾಳೆ ಈ ವಿಚಾರ ಪ್ರಸ್ತಾಪ ಮಾಡ್ತಿದ್ದ ಹಾಗೆ ಮುಗುಳ್ನಕ್ಕಳು. ನಾನು ಆ ರೀತಿ ಎಂದೂ ನಡೆದುಕೊಂಡಿಲ್ಲ, ನಡೆದುಕೊಳ್ಳುವುದಿಲ್ಲ. ನನ್ನ ಅಭಿಮಾನಿಗಳು ನನ್ನ ಕೆಲಸವನ್ನು ಮೆಚ್ಚಿದ್ದಾರೆ. ಅವರು ಇದನ್ನೆಲ್ಲಾ ನಂಬುವುದಿಲ್ಲ. ಈ ಮಸಾಜ್ ಪಾರ್ಲರ್ ನಲ್ಲಿ ಒಮ್ಮೆ ಕಟಿಂಗ್ ಮಾಡಿಸಿಕೊಂಡು ಬಣ್ಣ ಹಾಕಿಸಿಕೊಂಡಿದ್ದೇನೆ. ಮಸಾಜ್ ಎಲ್ಲಾ ಮಾಡಿಸಿಕೊಂಡಿಲ್ಲ. ಅದೂ ಅಲ್ಲದೆ ಕಳೆದ 6 ಸಾಧು ಕೋಕಿಲಾ ಅವರನ್ನು ಒಮ್ಮೆ ಮಾತ್ರವೇ ಭೇಟಿ ಮಾಡಿರೋದು. ನಾನು ಕಟ್ಟಿಂಗ್ ಮಾಡಿಸಿಕೊಳ್ಳಲು ಹೋಗುತ್ತಿದ್ದಾಗ ಪರಿಚಯವಾದ ಒಬ್ಬ ಹುಡುಗ ನಾನೇ ಒಂದು ಅಂಗಡಿ ಮಾಡಿದ್ದೇನೆ ಎಂದು ಒತ್ತಾಯ ಮಾಡಿ ಅಂಗಡಿಯನ್ನು ನನ್ನ ಕೈಲಿ ಉದ್ಘಾಟಿಸಿದರು. ಅಲ್ಲಿ ದೇವರ ಪೂಜೆ ಮಾಡಿದ್ರು, ಪ್ರಸಾದ ಸೇವಿಸಿ ವಾಪಸ್ ಬಂದೆ.’

ಇತ್ತ ನಟ ಸಾಧುಕೋಕಿಲಾ ಕೂಡ ಯಾವ ಸ್ಪಾ, ಏನು ಕಥೆ, ನಾನು ಸೆಲೆಬ್ರಿಟಿ ಅನ್ನೋ ಕಾರಣಕ್ಕೆ ಮನೆ ಹತ್ತಿರವೇ ಕರೆಸಿಕೊಳ್ಳುವ ರೂಢಿ ಮಾಡಿಕೊಂಡಿದ್ದೇನೆ ಎಂದಿದ್ದಾರೆ.

Leave a Reply