ಮತ್ತೆ ನಾಲಿಗೆ ಹರಿಬಿಟ್ಟ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ, ಜಾತ್ಯಾತೀತರ ವಿರುದ್ಧ ಅವಹೇಳನಕಾರಿ ಮಾತು

ಡಿಜಿಟಲ್ ಕನ್ನಡ ಟೀಮ್:

ಸದ್ಯ ಕರ್ನಾಟಕ ಬಿಜೆಪಿಯ ಫೈರ್ ಬ್ರ್ಯಾಂಡ್ ನಾಯಕನಾಗಿ ಗುರುತಿಸಿಕೊಳ್ಳುತ್ತಿರುವ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಮತ್ತೊಮ್ಮೆ ತಮ್ಮ ನಾಲಿಗೆ ಹರಿ ಬಿಟ್ಟಿದ್ದಾರೆ. ತಮ್ಮ ಪ್ರತಿ ಭಾಷಣದಲ್ಲೂ ವಿವಾದಾತ್ಮಕ ಹೇಳಿಕೆ ನೀಡಿರುವ ಅನಂತ ಕುಮಾರ್ ಹೆಗಡೆ ಅಪ್ಪ ಅಮ್ಮ ಯಾರು ಎಂದು ಗೊತ್ತಿಲ್ಲದವರು ಜಾತ್ಯಾತೀತರು ಎಂದಿದ್ದಾರೆ.

ಕೊಪ್ಪಳದ ಕುಕನೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅನಂತ ಕುಮಾರ್ ಹೆಗಡೆ, ಮಾಡಿದ ವಿವಾದಾತ್ಮಕ ಭಾಷಣ ಹೀಗಿತ್ತು…

‘ಇವತ್ತು ಒಂದು ಹೊಸ ಸಂಪ್ರದಾಯ ಬಂದುಬಿಟ್ಟಿದೆ ಜ್ಯಾತ್ಯಾತೀತರು ಅಂತ. ಯಾವುದೇ ಒಬ್ಬ ವ್ಯಕ್ತಿ ತಾನು ಮುಸ್ಲಿಂ, ತಾನು ಕ್ರೈಸ್ತ, ತಾನು ಲಿಂಗಾಯತ ಎಂದು ತನ್ನ ಜಾತಿಯನ್ನು ಹೇಳಿಕೊಂಡರೆ ನನಗೆ ಖುಷಿಯಾಗುತ್ತೆ. ಕಾರಣ ಆ ವ್ಯಕ್ತಿಗೆ ಆತನ ರಕ್ತದ ಪರಿಚಯವಿರುತ್ತದೆ ಎಂದು ಅರ್ಥ. ಆದರೆ ಈ ಜಾತ್ಯಾತೀತರು ಅಂತಾ ಕರೆದುಕೊಳ್ತಾರಲ್ಲಾ ಅವರನ್ನು ಯಾರು ಅಂತಾ ಕರಿಬೇಕು ಗೊತ್ತಾಗಲ್ಲ. ಅಪ್ಪ- ಅಮ್ಮನ ಗುರುತಿಲ್ಲದೇ ಇರುವಂತಹ ರಕ್ತದವರು ಜಾತ್ಯಾತೀತರು. ಅಪ್ಪ ಅಮ್ಮನ ಪರಿಚಯವೇ ಇಲ್ಲದವರು ತಮ್ಮನ್ನು ತಾವು ಜಾತ್ಯಾತೀತರು ಎಂದು ಕರೆದುಕೊಳ್ಳುತ್ತಾರೆ. ವಿಚಾರವಾದಿಗಳೆಂದು ಕರೆದುಕೊಳ್ಳುತ್ತಾರೆ. ಜಾತಿ ಜತೆ ಗುರುತಿಸಿಕೊಳ್ತಿರೋ, ಕುಲದ ಜತೆ ಗುರುತಿಸಿಕೊಳ್ತಿರೋ ಯಾವುದಾದರ ಜತೆ ಗುರುತಿಸಿಕೊಳ್ಳಿ ಸ್ವಾಮಿ. ನಿಮ್ಮ ರಕ್ತದ ಪರಿಚಯವಿರುತ್ತದೆ. ನಿಮ್ಮ ಕಾಲು ಮುಟ್ಟಿ ನಮಸ್ಕಾರ ಮಾಡುತ್ತೀನಿ.

ಆದರೆ ಜಾತ್ಯಾತೀತರು ಅಂತಾ ಕರೆದುಕೊಂಡರೆ ನೀವು ಯಾರು ಅಂತಾ ಸ್ವಲ್ಪ ಸಂಶಯ ಬರುತ್ತದೆ. ಸಂವಿಧಾನ ಹೇಳಿದೆ ಸ್ವಾಮಿ ನೀವು ಒಪ್ಪಿಕೊಳ್ಳಬೇಕಲ್ಲ. ಹೌದು ಸಂವಿಧಾನ ಹೇಳಿದೆ ಸಂವಿಧಾನಕ್ಕೆ ಗೌರವ ಕೊಡಬೇಕು. ಆದರೆ ಸಂವಿಧಾನಗಳು ಕಾಲಕ್ಕೆ ತಕ್ಕಂತೆ ಬದಲಾಗಬೇಕು. ನಿಮಗೆ ಸಂಪ್ರದಾಯ, ಪರಂಪರೆ, ಸ್ಮೃತಿ ಐತಿಹಾಸಿಕ ಹೆಜ್ಜೆಗಳ ಗುರುತೇ ಗೊತ್ತಿಲ್ಲ ನಿಮಗೆ. ನೀವು ಮೂರ್ಖರು. ಇವತ್ತಿನ ಭೂಪಟಗಳು ಬದಲಾಗಿ ಹೋದವು. ಪ್ರಪಂಚದ ಸಾಮಾಜಿಕ ಚಿಂತನೆಗಳು ಬದಲಾಗಿವೆ. ಹೀಗಾಗಿ ಸಂವಿಧಾನ ಬದಲಾಗಬೇಕು. ಆ ಬದಲಾವಣೆಗೆ ನಾವು ಬಂದಿರೋದು. 800 ವರ್ಷಗಳು ಕಳೆದರೂ ಕೂಡ ಭಾರತದಲ್ಲಿ ಪುಟುಗೋಸಿಗಳಿಗೆ ಇನ್ನು ತಲೆ ಎತ್ತಲು ಸಾಧ್ಯವಾಗಿಲ್ಲ.’

1 COMMENT

Leave a Reply