ಸುದೀಪ್ ಜೆಡಿಎಸ್ ಸೇರ್ಪಡೆ ಬಗ್ಗೆ ಗೌಡ್ರು ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಕಿಚ್ಚ ಸುದೀಪ್ ಜೆಡಿಎಸ್ ಸೇರ್ತಾರಾ? ಇಂತಹದೊಂದು ಪ್ರಶ್ನೆ ಕಳೆದ ಕೆಲವು ವಾರಗಳಿಂದ ಸಾಕಷ್ಟು ಹರಿದಾಡುತ್ತಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಸುದೀಪ್ ಮನೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಪಕ್ಷ ಸೇರ್ಪಡೆಗೆ ಆಹ್ವಾನ ನೀಡಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಆ ಮಾತುಗಳು ನಿಜ, ಕುಮಾರಸ್ವಾಮಿ ಅವರು ಪಕ್ಷ ಸೇರ್ಪಡೆ ಬಗ್ಗೆ ಸುದೀಪ್ ಜತೆ ಮಾತನಾಡಿದ್ದಾರೆ ಎಂದು ಸ್ವತಃ ಮಾಜಿ ಪ್ರಧಾನಿ ದೇವೇಗೌಡರು ಒಪ್ಪಿಕೊಂಡಿದ್ದಾರೆ.

ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು ಈ ವಿಚಾರವಾಗಿ ಮಾತನಾಡಿದ್ದು ಇಷ್ಟು… ‘ಸುದೀಪ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದರ ಬಗ್ಗೆ ಕುಮಾರಸ್ವಾಮಿ ಅವರು ಮಾತನಾಡಿದ್ದು, ನಿಜ. ಆ ವಿಷಯ ನನಗೂ ಗೊತ್ತಿದೆ. ನಾನು ಯಾರನ್ನೂ ಹಗುರವಾಗಿ ನೋಡುವುದಿಲ್ಲ. ಆದರೆ ಆ ಸಭೆಯಲ್ಲಿ ಏನೆಲ್ಲಾ ಮಾತನಾಡಿದ್ದಾರೆ ಎಂಬುದು ಮಾಹಿತಿ ಇಲ್ಲ. ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದೂ ಗೊತ್ತಿಲ್ಲ.’

ದೇವೇಗೌಡರ ಈ ಮಾತಿನಲ್ಲಿ ಒಂದಂತೂ ಸ್ಪಷ್ಟವಾಗಿದೆ. ಸದ್ಯ ಸ್ಯಾಂಡಲ್ ವುಡ್ಡಿನಿಂದ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸುದೀಪ್ ರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ಜೆಡಿಎಸ್ ಸಕಲ ಪ್ರಯತ್ನಿಸುತ್ತಿದೆ. ಈ ಬಗ್ಗೆ ದೇವೇಗೌಡರಿಗೂ ಮಾಹಿತಿ ಇರುವುದು ಸುದೀಪ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಎಷ್ಟರ ಮಟ್ಟಿಗೆ ಉತ್ಸುಕತೆ ಇದೆ ಎಂಬುದು ಗೊತ್ತಾಗಿದೆ.

Leave a Reply