ಬಿಗ್ ಬಾಸ್ ಮನೆಯಿಂದ ಜಯಶ್ರೀನಿವಾಸನ್ ಔಟ್, ಸೀಕ್ರೆಟ್ ರೂಮಿಗೆ ದಿವಾಕರ್

ಕಳೆದವಾರ ಬಿಗ್ ಬಾಸ್ ವಾರದ ಮಧ್ಯೆ ಜಯ ಶ್ರೀನಿವಾಸನ್ ಹಾಗೂ ಸಮೀರ್ ಆಚಾರ್ಯ ಅವರನ್ನು ನಡುರಾತ್ರಿ ಎಬ್ಬಿಸಿ, ಸೀಕ್ರೆಟ್ ರೂಮ್ ಗೆ ಸಾಗ ಹಾಕಿದ್ರು. ಇವತ್ತು ಶನಿವಾರ ಆಗಿರೋದ್ರಿಂದ ಸೀಕ್ರೆಟ್ ರೂಮಿನಿಂದ ಇಬ್ಬರನ್ನು ಮನೆಯೊಳಗೆ ಕಳುಹಿಸಿ, ಅಷ್ಟೂ ಸ್ಪರ್ಧಿಗಳ ಪೈಕಿ ಓರ್ವ ಸ್ಪರ್ಧಿಯನ್ನು ಮನೆಯಿಂದ ಹೊರಕ್ಕೆ ಕಳುಸಬೇಕಿತ್ತು. ಆದರೆ ಸಿಕ್ಕಾಪಟ್ಟೆ ಡಿಫರೆಂಟ್ ಆಗಿ ಆಡಿಸುತ್ತಿರೋ ಬಿಗ್ ಬಾಸ್ ಈ ವಾರ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ..

ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಅದೇನೇ ತೀರ್ಮಾನ ಆದರೂ ಅದು ಬಿಗ್ ಬಾಸ್ ರದ್ದು ಆಗಿರಲಿಲ್ಲ. ಸೀಕ್ರೆಟ್ ರೂಮಿನಲ್ಲಿದ್ದ ಜಯ ಶ್ರೀನಿವಾಸನ್ ಹಾಗೂ ಸಮೀರ್ ಆಚಾರ್ಯ ಅವರದ್ದಾಗಿತ್ತು. ಕೆಲವೊಂದು ಬಾರಿ ಅನ್ನೋದಕ್ಕಿಂತ ಬಹುತೇಕ ಬಾರಿ ಸಮೀರ್ ಆಚಾರ್ಯ ಅವರನ್ನು ಬಗ್ಗಿಸಿದ ಜಯ ಶ್ರೀನಿವಾಸನ್ ತನಗೆ ಬೇಕಾದ ನಿರ್ಣಯವನ್ನು ಇಬ್ಬರ ಸಮ್ಮತಿ ಮೇರೆಗೆ ಎಂದು ಚಲಾಯಿಸುವಲ್ಲಿ ಯಶಸ್ವಿಯಾಗಿದ್ರು.. ಆದ್ರೀಗ ಅದನ್ನೇ ಬಿಗ್ ಬಾಸ್ ಉಲ್ಟಾ ಮಾಡಿದ್ದಾರೆ.

ಇದೀಗ ಬಂದಿದೆ ಬಿಗ್ ಬ್ರೇಕಿಂಗ್ ನ್ಯೂಸ್
ಬಿಗ್ ಬಾಸ್ ಮನೆಯಿಂದ ಲೆಕ್ಕಾಚಾರ್ ಔಟ್

ಬಾರಿ ಲೆಕ್ಕಾಚಾರ ಅಂಕಿ ಸಂಖ್ಯೆಗಳ ಭವಿಷ್ಯ ಹೇಳ್ಕೊಂಡು ಆಟವಾಡ್ತಿದ್ದ ಜಯ ಶ್ರೀನಿವಾಸನ್ ಮನೆಯಿಂದ ಔಟ್ ಆಗಿದ್ದು, ಹುಬ್ಬಳ್ಳಿಯ ಸಮೀರ್ ಆಚಾರ್ಯ ಮತ್ತೆ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಪಡೆದಿದ್ದು ಆಟ ರಂಗೇರಲಿದೆ. ಇನ್ನೊಂದು ಹೊಸ ಟ್ವಿಸ್ಟ್ ಅಂದ್ರೆ ಸಮೀರ್ ಆಚಾರ್ಯ ಮನೆ ಸೇರ್ತಿದ್ದ ಹಾಗೆ ಮತ್ತೊಬ್ಬ ಆಟಗಾರ ಸೀಕ್ರೆಟ್ ರೂಮು ಸೇರಿ ಆಗಿದೆ. ಸಾಮಾನ್ಯರಲ್ಲಿ ಸಾಮಾನ್ಯ ಅಂತ ನೇರ ನುಡಿಗಳಿಂದಲೇ ಜನಮನ ಗೆದ್ದಿದ್ದ ದಿವಾಕರ್ ನನ್ನು ಸೀಕ್ರೆಟ್ ರೂಮು ಸೇರಿಸಲಾಗಿದೆ ಅನ್ನೋದು ಸದ್ಯಕ್ಕೆ ಸಿಕ್ಕಿರೋ ಮಾಹಿತಿ. ಇದು ಪಕ್ಕಾ ಆಗೋದಕ್ಕೆ ಕೆಲವೇ ಕ್ಷಗಳಷ್ಟೇ ಬಾಕಿ ಉಳಿದುಕೊಂಡಿವೆ.

Leave a Reply