ಅವಕಾಶಗಳ ಕೊರತೆ- ಟ್ಯಾಕ್ಸಿ ಚಾಲಕನಾದ ಅಶ್ವಥ್ ಅವರ ಪುತ್ರ ಶಂಕರ್

ಡಿಜಿಟಲ್ ಕನ್ನಡ ಟೀಮ್:

ಖ್ಯಾತ ಹಿರಿಯ ನಟ ಅಶ್ವಥ್ ಅವರ ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಟರಲ್ಲಿ ಒಬ್ಬರು. ಅವರ ಪುತ್ರರಾದ ಶಂಕರ್ ಅಶ್ವಥ್ ಸಹ ಹಲವು ಅಭಿನಯದಲ್ಲೇ ಮಿಂಚಿ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಲನ್ ಆಗಿಯೂ ಕೆಲವು ಚಿತ್ರಗಳಲ್ಲಿ ಮಿಂಚಿದ್ದಾರೆ.

ಮೈಸೂರಿನ ಸರಸ್ವತಿಪುರಂನಲ್ಲಿರುವ ಶಂಕರ್ ಅಶ್ವಥ್ 1993ರಿಂದ 2016ರವರೆಗೂ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ನಟನಾಗಿ ಅಭಿನಯಿಸಿದ್ದಾರೆ. ಅಣ್ಣಾವ್ರ ಮಕ್ಕಳು, ಭೂಮಿತಾಯಿಯ ಚೊಚ್ಚಲ ಮಗ, ಮಲ್ಲ ಚಿತ್ರಗಳಲ್ಲಿ ವಿಲನ್ ಆಗಿ ಖ್ಯಾತಿ ಪಡೆದಿದ್ದರು. ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾದ ಹಿನ್ನೆಲೆ ಜೀವನ ಸಾಗಿಸಲು ಊಬರ್ ಟ್ಯಾಕ್ಸಿ ಚಾಲನೆ ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಊಬರ್ ಚಾಲನೆ ಮಾಡುತ್ತಿರುವ ಶಂಕರ್, ಇತ್ತೀಚೆಗೆ ಕಾರು ಅಪಘಾತವಾದ ಹಿನ್ನೆಲೆಯಲ್ಲಿ ಚಾಲನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಮತ್ತೆ ಹೊಸ ವರ್ಷದಿಂದ ಊಬರ್ ಚಾಲನೆ ಮಾಡಲು ಸಜ್ಜಾಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ಶಂಕರ್, ‘ನಾನು ನಟನೆ ಬಿಟ್ಟಿಲ್ಲ. ನನಗೆ ಅವಕಾಶ ಕಡಿಮೆಯಾಗಿದೆ. ಯಾರು ಅವಕಾಶ ನೀಡಲಿಲಿಲ್ಲ ಎಂದು ಆರೋಪಿಸುವುದಿಲ್ಲ. ಅವಕಾಶ ಸಿಗದಿರುವುದು ನನ್ನ ದುರಾದೃಷ್ಟ ಅಷ್ಟೇ. ನಮ್ಮ ತಂದೆ ಸ್ವಾಭಿಮಾನ ಕಲಿಸಿದ್ದಾರೆ. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತಿದ್ದೇನೆ’ ಎಂದು ಶಂಕರ್ ಅಶ್ವಥ್ ತಿಳಿಸಿದ್ದಾರೆ.

Leave a Reply