ಹೆಸರು ಹೇಳದೇ ಅನಂತಕುಮಾರ್ ಹೆಗಡೆಗೆ ಟಾಂಗ್ ಕೊಟ್ರು ಪ್ರಕಾಶ್ ರೈ!

ಡಿಜಿಟಲ್ ಕನ್ನಡ ಟೀಮ್:

ಜಾತ್ಯಾತೀತರು ಅಪ್ಪ ಅಮ್ಮ ಗೊತ್ತಿಲ್ಲದವರು, ತಮ್ಮ ರಕ್ತದ ಗುಣ ಗೊತ್ತಿಲ್ಲದವರು ಎಂಬ ವಿವಾದಾತ್ಮಕ ಹೇಳಿಕೆ ಕೊಟ್ಟು ಸಂಸತ್ತಿನಲ್ಲಿ ಕ್ಷಮೆ ಕೇಳಿದ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರಿಗೆ ಖ್ಯಾತ ನಟ ಪ್ರಕಾಶ್ ರೈ ಟಾಂಗ್ ಕೊಟ್ಟಿದ್ದಾರೆ.

ಬೆಂಗಳೂರಿನ ಪ್ರೆಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕ ಪ್ರಶಸ್ತಿ ಪ್ರಧಾನ ಹಾಗೂ ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿ ಪಡೆದು ಮಾತನಾಡಿದ ಪ್ರಕಾಶ್ ರೈ, ದೇಶದಲ್ಲಿ ಧ್ವನಿಯನ್ನ ಹತ್ತಿಕ್ಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಆಡಳಿತವನ್ನು ಪರೋಕ್ಷವಾಗಿ ಟೀಕಿಸಿದರು. ಅಲ್ಲದೆ ಅನಂತ ಕುಮಾರ್ ಹಗಡೆ ಎವರ ಹೆಸರು ಹೇಳದೇನೆ ಅವರ ಹೇಳಿಕೆಗೆ ಟೀಕೆ ಮಾಡಿದ್ದಾರೆ. ಹಾಗಾದರೆ ಈ ಕಾರ್ಯಕ್ರಮದಲ್ಲಿ ಪ್ರಕಾಶ್ ರೈ ಹೇಳಿದ್ದೇನು ನೋಡೋಣ ಬನ್ನಿ…

‘ನನಗೂ ಪತ್ರಕರ್ತರಿಗೂ ಇರುವ ಒಡನಾಟ ಬಹಳ ಹಳೆಯದು. ನಾನು ರಂಗಭೂಮಿಯಲ್ಲಿರುವಾಗಲೇ ಪತ್ರಕರ್ತರ ಜತೆ ನಂಟು ಹೊಂದಿದ್ದೆ. ನನ್ನ 25 ವರ್ಷಗಳ ಪ್ರಯಾಣದಲ್ಲಿ ಸಾಕಷ್ಟು ಪತ್ರಕರ್ತ ಗೆಳೆಯರು ಇದ್ದಾರೆ. ಪತ್ರಕರ್ತರ ಬಗ್ಗೆ ನಿಖರವಾದ ಸ್ವರೂಪವನ್ನು ನನಗೆ ಹೇಳಿಕೊಟ್ಟಿದ್ದು, ಪಿ.ಲಂಕೇಶ್. ನಾನು ಪತ್ರಕರ್ತನಲ್ಲ. ಆದರೆ ಮೇಷ್ಟ್ರು ಅವರ ಒಡನಾಟ ನನಗೆ ಸಾಕಷ್ಟು ಕಲಿತೆ. ನನ್ನ ನೇರವಾದ ಮಾತು, ಗ್ರಹಿಕೆ, ವಿಮರ್ಷೆ, ಧೈರ್ಯದ ಸ್ವಭಾವವನ್ನು ಲಂಕೇಶ್, ತೇಜಸ್ವಿ ಅವರು ಹಾಗೂ ಇತರೆ ಕೆಲವು ದ್ರೋಣಾಚಾರ್ಯರಿಂದ ಕಲಿತ ಏಕಲವ್ಯ ನಾನು. ಪಾತ್ರವಿದೆ.

ಇವತ್ತಿನ ದಿನಗಳಲ್ಲಿ ನನ್ನ ನಿಮ್ಮ ಸಂಬಂಧ ಬೇರೆಯದೇ ರೀತಿಯಲ್ಲಿ ಮೂಡಿಬರುತ್ತಿದೆ. ನನಗೆ ಈ ಪ್ರಶಸ್ತಿ ಸಿಕ್ಕಿರುವುದು ಬಹಳು ಪ್ರಮುಖ ಹಾಗೂ ಹೆಮ್ಮೆಯ ವಿಷಯ. ನಾನು ತೆಗೆದುಕೊಳ್ಳುವ ನಿಲುವಿಗೆ ಒತ್ತಾಸೆಯಾಗುತ್ತಿರುವುದು ಪತ್ರಕರ್ತರು. 2017ರ ವರ್ಷ ಬಹಳ ಪ್ರಮುಖವಾದುದು. ನನ್ನ ಗೆಳತಿ ಎನ್ನುಮುದಕ್ಕಂತೆ ನಮ್ಮ ಒಬ್ಬ ಪತ್ರಕರ್ತೆ ದಾರುಣ ಹತ್ಯೆಯಾಗಿದ್ದು, ನನ್ನನ್ನು ಬಹಳ ವಿಚಲಿತನಾಗುವಂತೆ ಮಾಡಿತು. ನಟನಾಗುವುದಕ್ಕೂ ಮುಂಚೆ ಒಬ್ಬ ಮನುಷ್ಯನಾಗಬೇಕು. ಸಮಾಜ ನನಗೆ ಒಂದು ವೇದಿಕೆಯನ್ನು ಕೊಟ್ಟಿದೆ. ಹೆಸರು ಬಂದಾಗಿದೆ, ಹಣ ಬಂದಾಗಿದೆ, ನೆಮ್ಮದಿಯಾಗಿ ಬದುಕಬಹುದು ಎಂಬ ನಂಬಿಕೆ ಬಂದಿದೆ. ಆದರೆ ಇವತ್ತಿನ ರಾಜಕೀಯ ಪರಿಸ್ಥಿತಿ, ಸಮಾಜದ ಪರಿಸ್ಥಿತಿಯಲ್ಲಿ ನಾನು ಸುಮ್ಮನಿರಬಹುದು. ಆದರೆ ನನ್ನನ್ನು ಬೆಳಸದ ಲಂಕೇಶ್, ತೇಜಸ್ವಿ ಹಾಗೂ ಇತರ ವ್ಯಕ್ತಿಗಳು ಆತ್ಮಸಾಕ್ಷಿಯನ್ನು ಹೊಂದಿದ್ದರು. ಅದೇ ಆತ್ಮಸಾಕ್ಷಿಯಿಂದಾಗಿ ನಾನು ಇಂದು ಸಮಾಜ ಹಾಗೂ ವ್ಯವಸ್ಥೆ ವಿರುದ್ಧ ಧ್ವನಿ ಎತ್ತುತ್ತಿದ್ದೇನೆ.

ಗೌರಿ ಹತ್ಯೆಯ ನಂತರ ನಾವು ಎತ್ತಿರುವ ಧನಿ ಏನಿದೆ ‘ಸೈಲೆನ್ಸ್ ಆಫ್ ವಾಯ್ಸ್’ ಅದು ಗಟ್ಟಿಯಾಗಿ ಪ್ರತಿಧ್ವನಿಸುತ್ತಿದೆ. ಜಸ್ಟ್ ಆಸ್ಕಿಂಗ್ ಎಂಬ ಆಯಶ್ ಟ್ಯಾಗ್ ಮೂಲಕ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದೇನೆ. ನನ್ನ ಆ ಧೈರ್ಯಕ್ಕೆ, ಉತ್ಸಾಹಕ್ಕೆ ನಿಮ್ಮ ಈ ಪ್ರಶಸ್ತಿ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕೆಲಸ ಮಾಡಿದೆ. ಜತೆಗೆ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ನಾನು ಗುರೂಜಿಗಳ ಜತೆ ಮಾತನಾಡುವಾಗ ನಮ್ಮ ಸಮಸ್ಯೆ ನಮ್ಮ ದೃಷ್ಟಿಕೋನಗಳ ಮೇಲೆ ವಲಂಬಿತವಾಗಿರುತ್ತೆ ಎಂದು ಹೇಳಿದರು.

ಆದರೆ ಇಂದಿನ ಸಮಾಜದಲ್ಲಿ ಮತೀಯ ರಾಜಕೀಯ ಏನಿದೆ, ಒಂದೇ ಧ್ರಮದವರು ಮಾತ್ರ ಇರಬೇಕು ಎಂಬ ರಾಜಕೀಯ ಏನಿದೆ ಇದು ಹಿಟ್ಲರ್ ನ ಕಾಲದಲ್ಲಿ ನಡೆದಿತ್ತು. ಯಾವುದೇ ಜಾತಿಯಾಗಲಿ ಧರ್ಮವಾಗಲಿ, ಮನುಷ್ಯನನ್ನು ವಿನಯನನ್ನಾಗಿಸುವ ವಿನಯವಂತಕೆ ಬೆಳೆಸುವ, ನನಗಿಂತ ದೊಡ್ಡ ಶಕ್ತಿ ಒಂದಿದೆ ಎಂಬುದನ್ನು ಒಪ್ಪಿಕೊಳ್ಳುವ, ಆತ ಸರ್ವಾಧಿಕಾರಿ ಆಗದಂತೆ ತಡೆಯುವ ಮಾರ್ಗವಾಗಬೇಕು.

ನಾನು ಎಲ್ಲವನ್ನು ಬಿಡಿಸಿ ಹೇಳಬೇಕಾಗಿಲ್ಲ. ಎಲ್ಲವೂ ಎಲ್ಲರಿಗೂ ಗೊತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಾಮಾನ್ಯ ಜನರು ಹೆದರಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಪತ್ರಕರ್ತರು ಹೆದರಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಆ ನಿಟ್ಟಿನಲ್ಲಿ ಧ್ವನಿ ಎತ್ತುವ ಪತ್ರಕರ್ತರ ಧ್ವನಿ ಅಡಗಿಸುವ ಪ್ರಯತ್ನ ನಡೆಯುತ್ತಿದೆ. ನಾನು ಕಲಾವದನಾಗಿ ಈ ಮಾತು ಹೇಳುತ್ತಿದ್ದೇನೆ. ನನಗೆ ರಾಜಕೀಯ ಆಕಾಂಕ್ಷೆಗಳಿಲ್ಲ. ಹಾಗಂತ ಒತ್ತಾ ಮಾಡಿದರೆ ರಾಕೀಯಕ್ಕೆ ಬರುತ್ತೇನೆ. ಅದು ದೊಡ್ಡ ವಿಷಯ ಅಲ್ಲ. ಆದರೆ ನನ್ನ ಜವಾಬ್ದಾರಿ ಬಹಳ ದೊಡ್ಡದಿದೆ. ಒಬ್ಬ ಕಲಾವಿದನಾಗಿ ನಾನು ಸಮಾಜಕ್ಕೆ ಸ್ಪಂದಿಸಬೇಕಾಗಿದೆ. ಪತ್ರಕರ್ತರಾಗಿ ನೀವು ಸ್ಪಂದಿಸಬೇಕಾಗಿದೆ. ನಾವು ಧ್ವನಿ ಎತ್ತದಿದ್ದರೆ, ಗೊತ್ತಿದ್ದೂ ನಾವು ಒಂದು ಸಮಾಜವನ್ನು ಹೇಡಿಯನ್ನಾಗಿಸುವ ಕೆಲಸ ಮಾಡಿದಂತಾಗುತ್ತದೆ. ಆ ಪಾಪ ನನಗೆ ಬೇಡ.

ಇವಂತು ಕೆಲವರು ಯಾವ ರೀತಿ ಮಾತನಾಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತು. ಎಲ್ಲಾ ಮಾತುಗಳನ್ನಾಡಿ ಕ್ಷಮೆಯನ್ನೂ ಕೇಳುತ್ತಾರೆ. ಕ್ಷಮೆ ಕೇಳುವವರನ್ನು ಕ್ಷಮೆ ಕೇಳುವವರನ್ನು ಕ್ಷಮಿಸೋಣ. ಆದರೆ ಅವರು ಹೇಳಿದ್ದನ್ನು ಮರೆಯುವುದು ಬೇಡ. ಅವರು ಬದಲಾಗುವುದಿಲ್ಲ.’

Leave a Reply