ಶಂಕರ್ ಅಶ್ವಥ್ ನೆರವಿಗೆ ನಿಂತ ಪ್ರಥಮ್!

ಡಿಜಿಟಲ್ ಕನ್ನಡ ಟೀಮ್:

ನಟ ಶಂಕರ್ ಅಶ್ವಥ್ ಅವರು ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲನೆ ಮಾಡುತ್ತಿದ್ದ ವಿಚಾರ ಸಾಕಷ್ಟು ಸುದ್ದಿಯಾಗಿದ್ದು ನಿಮ್ಮೆಲ್ಲರಿಗೂ ಗೊತ್ತೇ ಇದೆ. ಈಗ ಶಂಕರ್ ಅವರ ನೆರವಿಗೆ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಧಾವಿಸಿದ್ದಾರೆ.

ನಟ ಶಂಕರ್‌ ಅವರಿಗೆ ಆರ್ಥಿಕ ಸಹಾಯದ ಜೊತೆ ತಮ್ಮ ಮುಂದಿನ ಚಿತ್ರದಲ್ಲಿ ಅವಕಾಶ ನೀಡುವ ಮೂಲಕ ಪ್ರಥಮ್ ನೆರವಿನ ಹಸ್ತ ನೀಡಿದ್ದಾರೆ. ತಮ್ಮ ಮುಂದಿನ ‘ಬಿಲ್ಡಪ್’ ಚಿತ್ರಕ್ಕೆ ಶಂಕರ್ ಅವರ ಕಾಲ್‌ಶೀಟ್ ಪಡೆದಿದ್ದಾರೆ. ಶಂಕರ್ ಅಶ್ವತ್ ಅವರಿಂದ ದಿನಾಂಕ ಗುರುತುಪಡಿಸಿಕೊಂಡು ಹೋಗಿರುವ ಪ್ರಥಮ್, ಸಂಭಾವನೆಯನ್ನು ಮುಂಗಡವಾಗಿಯೇ ನೀಡಿದ್ದಾರೆ.

ನಿನ್ನೆಯಷ್ಟೇ ಶಂಕರ್ ಕ್ಯಾಬ್ ಡ್ರೈವರ್ ಆಗಿರುವ ವಿಚಾರ ಬೆಳಕಿಗೆ ಬಂದಿತ್ತು. ನಂತರ ಮಾಧ್ಯಮಗಳ ಇದು ಹೆಚ್ಚು ಸುದ್ದಿಯಾಗಿತ್ತು. ಇದನ್ನು ಗಮನಿಸಿದ ಪ್ರಥಮ್ ಹಿರಿಯ ನಟನ ಸಹಾಯಕ್ಕೆ ಬಂದಿದ್ದಾರೆ. ಮೊದಲು ದೂರವಾಣಿ ಮೂಲಕ ನಟ ಶಂಕರ್ ಅವರನ್ನು ಸಂಪರ್ಕಿಸಿ ಮಾತನಾಡಿದ ಪ್ರಥಮ್ ನಂತರ ಮೈಸೂರಿನ ಸರಸ್ವತಿಪುರಂನಲ್ಲಿರುವ ಶಂಕರ್ ಅವರ ಮನೆಗೆ ಭೇಟಿ ನೀಡಿದರು.

Leave a Reply