ರಜನಿ ರಾಜಕೀಯದಲ್ಲಿ ಅನಕ್ಷರಸ್ಥ! ತಲೈವಾಗೆ ಸುಬ್ರಮಣಿಯನ್ ಸ್ವಾಮಿ ಟಾಂಗ್

ಡಿಜಿಟಲ್ ಕನ್ನಡ ಟೀಮ್:

ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಪ್ರವೇಶಿಸುವ ಅಧಿಕೃತ ಘೋಷಣೆಯಿಂದ ಅವರ ಎಲ್ಲ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿದ್ದರೆ, ತಮಿಳುನಾಡಿನ ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ, ರಜನಿಗೆ ಟಾಂಗ್ ಕೊಟ್ಟಿದ್ದಾರೆ.

ರಜನಿ ರಾಜಕೀಯವಾಗಿ ಅನಕ್ಷರಸ್ಥ ಎಂದು ಹೇಳುವ ಮೂಲಕ ರಜನಿಗೆ ರಾಜಕೀಯವಾಗಿ ಮೊದಲ ಟೀಕೆ ಮಾಡಿದ್ದಾರೆ. ರಜನಿ ರಾಜಕೀಯ ಪ್ರವೇಶಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರೋ ಸ್ವಾಮಿ ಹೇಳಿದಷ್ಟು…

‘ರಜನಿ ತಾವು ರಾಜಕೀಯಕ್ಕೆ ಪ್ರವೇಶಿಸುತ್ತಿರುವುದಾಗಿ ಘೋಷಿಸಿದ್ದಾರೆ ಅಷ್ಟೇ. ಈ ಕುರಿತಾಗಿ ಅವರ ಬಳಿ ಯಾವುದೇ ದಾಖಲೆಗಳಾಗಲಿ, ವಿವರಗಳಾಗಲಿ ಇಲ್ಲ. ಹೀಗಾಗಿ ಅವರು ರಾಜಕೀಯವಾಗಿ ಇನ್ನು ಅನಕ್ಷರಸ್ಥರು. ರಜನಿ ರಾಜಕೀಯಕ್ಕೆ ಬರುತ್ತಿರುವುದನ್ನು ಮಾಧ್ಯಮಗಳು ದೊಡ್ಡದ್ದಾಗಿ ಬಿಂಬಿಸುತ್ತಿವೆ. ಆದರೆ ತಮಿಳುನಾಡಿನ ಜನರು ಬುದ್ಧಿವಂತರು.’

Leave a Reply