ಪ್ರಧಾನಿ ಮೋದಿ ಮಹಾಸ್ವಾರ್ಥಿ; ಅಂಬರೀಶ್ ಗುಡುಗು

ಪ್ರಧಾನಿ ನರೇಂದ್ರ ಮೋದಿ ಅವರು ಬಹುದೊಡ್ಡ ಸ್ವಾರ್ಥಿ. ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಮಹಾನ್ ಪಕ್ಷಪಾತಿ ಎಂದು ಕೇಂದ್ರ ಹಾಗೂ ರಾಜ್ಯದ ಮಾಜಿ ಸಚಿವ ಅಂಬರೀಶ್ ಗುಡುಗಿದ್ದಾರೆ.
ಕರ್ನಾಟಕದವರೇನೂ ಭಾರತೀಯರಲ್ವಾ? ಅವರ ಸಮಸ್ಯೆ ದೇಶದ ಸಮಸ್ಯೆ ಅಲ್ವಾ? ಪ್ರಧಾನಿಯವರ ಕಣ್ಣಿಗೆ ಅದೇಕೆ ಬೀಳುತ್ತಿಲ್ಲ. ಅವರು ಸ್ವಾರ್ಥ ಬಿಟ್ಟರೆ ಒಂದೇ ಕ್ಷಣದಲ್ಲಿ ಮಹದಾಯಿ ಸಮಸ್ಯೆ ಬಗೆಹರಿದು ಹೋಗುತ್ತದೆ ಎಂದು ಬಹುದಿನಗಳ ನಂತರ ವಿಧಾನಸೌಧಕ್ಕೆ ಮಂಗಳವಾರ ಭೇಟಿ ನೀಡಿದ್ದ ಅಂಬರೀಶ್ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಪ್ರಕೃತಿಯ ವಿಕೋಪವಾದಾಗ ಮೋದಿ ಭೇಟಿ ನೀಡಿ, ನಾನಿದ್ದೇನೆ ಅಂಥ ಭರವಸೆ ನೀಡಿದ್ದರು. ಆ ರಾಜ್ಯಕ್ಕೆ ಸಾಕಷ್ಟು ಪರಿಹಾರವನ್ನೂ ಕೊಟ್ಟಿದ್ದರು. ಆದರೆ ಕನಾ೯ಟಕದ ವಿಷಯ ಬಂದಾಗ ಮೋದಿ ಅವರಿಗೆ ಅಂಥ ಭರವಸೆ ಕೊಡಬೇಕು ಅಂತ ಅನ್ನಿಸುವುದಿಲ್ಲ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ತಮಿಳುನಾಡಿನಲ್ಲಿ ಬಿಜೆಪಿಯ ಎಷ್ಟು ಸಂಸದರು ಇದ್ದಾರೆ?  ಕರ್ನಾಟಕದಲ್ಲಿ ಇರುವ ಬಿಜೆಪಿ ಸದಸ್ಯರ ಸಂಖ್ಯೆ ಎಷ್ಟು? ಅಷ್ಟೊಂದು ಸಂಸದರನ್ನು ಕೊಟ್ಟಿರುವ ಕರ್ನಾಟಕದ ಬಗ್ಗೆ ಪ್ರಧಾನಿ ಅವರಿಗೇಕೆ ಇಂಥ ತಾರತಮ್ಯ ಎಂದು ಪ್ರಶ್ನಿಸಿದರು. ಎಲ್ಲರೂ ಸ್ವಾಥ೯ ಬಿಟ್ಟರೆ ಮಹದಾಯಿ ವಿಚಾರದಲ್ಲಿ ಒಂದು ನಿಮಿಷದಲ್ಲಿ ಪರಿಹಾರವಾಗುತ್ತದೆ. ಪ್ರಧಾನಿಯವರು ಮನಸ್ಸು ಮಾಡಬೇಕಷ್ಟೇ ಎಂದರು.
ರಜನಿ ಕಾಂತ್ ರಾಜಕೀಯಕ್ಕೆ ಪ್ರವೇಶ ವಿಚಾರ ಪ್ರಸ್ತಾಪಿಸಿದಾಗ, ‘ಇವತ್ತೇ ಬರೆದು ಇಟ್ಟುಕೊಳ್ಳಿ.. ಅವರು ಶೂರ್ ವಿನರ್…’ ಎಂದು ತಮ್ಮ ಆಪ್ತ ಸ್ನೇಹಿತನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

1 COMMENT

Leave a Reply