ಕೋಮು ಸಂಘಟನೆಗಳ ನಿಷೇಧಕ್ಕೆ ಸಿದ್ರಾಮಯ್ಯ ಚಿಂತನೆ

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಮತೀಯ ದ್ವೇಷದ ಹತ್ಯೆ ನಿಯಂತ್ರಿಸಲು ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ), ಎಸ್ ಡಿಪಿಐ, ಬಜರಂಗದಳ, ಶ್ರೀರಾಮ ಸೇನೆ ಸೇರಿದಂತೆ ಎಲ್ಲಾ ಕೋಮು ಸಂಘಟನೆಗಳನ್ನು ನಿಷೇಧಿಸುವ ಸಂಬಂಧ ಕೇಂದ್ರಕ್ಕೆ ಪತ್ರ ಬರೆದು ವರದಿ ಸಲ್ಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ವಿಚಾರವಾಗಿ ಮೂಡಿಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿದ್ದರಾಮಯ್ಯ ಹೇಳಿದಿಷ್ಟು… ‘ಪಿಎಫ್ಐ, ಬಜರಂಗದಳ, ಶ್ರೀರಾಮಸೇನೆ ಸೇರಿದಂತೆ ರಾಜ್ಯದಲ್ಲಿ ನಡೆದಿರುವ ಮತೀಯ ಗಲಭೆಗಳಿಗೆ ಕಾರಣವಾಗಿರುವ ಎಲ್ಲಾ ಕೋಮು ಸಂಘಟನೆಗಳನ್ನು ನಿಷೇಧಿಸುವುದೂ ಹಾಗೂ ಇತರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಸಂಘಟನೆಗಳನ್ನು ನಿಷೇಧಿಸುವ ಅಧಿಕಾರ ನಮ್ಮ ಕೈಯಲ್ಲಿಲ್ಲ. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ರಾಜ್ಯದಲ್ಲಿನ ಹತ್ಯೆಗಳಿಗೆ ಕಾರಣವಾಗಿರುವ ಕೋಮುಸಂಘಟನೆಗಳ ನಿಷೇಧಕ್ಕೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ವರದಿಯನ್ನು ಕಳುಹಿಸಲಾಗುತ್ತದೆ.’

ರಾಜ್ಯದಲ್ಲಿ ನಿರಂತರವಾಗಿ 24 ಜನ ಹತ್ಯೆಗೀಡಾದ ನಂತರ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದ್ವೇಷದ ಕೊಲೆಗಳಿಗೆ ಅಂತ್ಯವಾಡುವ ದಿಕ್ಕಿನಲ್ಲಿ ಚಿಂತನೆ ನಡೆಸಿರೋದು ಉತ್ತಮ ಬೆಳವಣಿಗೆ. ನಿನ್ನೆ ಆರೋಗ್ಯ ಸಚಿವ ಯು.ಟಿ ಖಾದರ್ ಕೂಡ ಸಂಘಟನೆ ನಿಷೇಧ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ಹೇಳಿದ್ದಾರೆ. ತಮಗೆ ಸಂಘಟನೆಗಳನ್ನು ನಿಷೇಧಿಸುವ ಅಧಿಕಾರ ಇಲ್ಲ ಎಂದು ಯಾವುದೋ ವ್ಯಕ್ತಿ ಅಥವಾ ಸಂಘಟನೆ ಹಾದಿ ಬೀದಿಯಲ್ಲಿ ಕೋಲೆಗಳನ್ನು ಮಾಡುತ್ತಾ ಕಾನೂನು ಸುವ್ಯವಸ್ಥೆ ಹರಾಜಕತೆ ಆಗೋದಕ್ಕೆ ಬಿಡಬಾರದು. ಅವಕಾಶ ನೀಡಬಾರದು. ಅಂತಹ ಬೆಳವಣಿಗಳನ್ನು ಸಹಿಸಿಕೊಂಡಿರಬಾರದು.  ಈ ಸಂಘಟನೆ ನಿಷೇಧ ಮಾಡುವ ತಮ್ಮ ಕೈಲಿಲ್ಲ ಕೇಂದ್ರ ಸರ್ಕಾರ. ಜವಾಬ್ದಾರಿ ಹಾಕಿಕೈ ತೊಳೆದುಕೊಳ್ಳಬಾರದು. ನಿಷೇಧ ಮಾಡೋದಕ್ಕೆ ಆಗದಿದ್ದರೇನು ಈ ಸಂಘಟನೆಗಳ ನಿಷೇಧದ ಅಧಿಕಾರ ನಮ್ಮ ಕೈಯಲ್ಲಿಲ್ಲ ಎಂದು ಜವಾಬ್ದಾರಿಯನ್ನು ಕೇಂದ್ರದ ಮೇಲೆ ಹಾಕಿ ಕೈ ತೊಳ್ಳೆದುಕೊಳ್ಳಬಾರದು. ರಾಜ್ಯ ಸರ್ಕಾರ ತನ್ನ ಕಾನೂನಿನ ಇತಿ ಮಿತಿಯಲ್ಲಿ ಈ ಸಂಘಟನೆಗಳ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು.

Leave a Reply