ಲಾಲೂಗೆ ಮೂರೂವರೇ ವರ್ಷ ಜೈಲು

ಮೇವು ಹಗರಣದ ಅಪರಾಧ ಸಾಬೀತಾಗಿದ್ದ ರಾಷ್ಟ್ರೀಯ ಜನತಾ ದಳ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಮೂರೂವರೇ ವರ್ಷ ಜೈಲು ಶಿಕ್ಷೆ ಹಾಗೂ ಹತ್ತು ಲಕ್ಷ ರುಪಾಯಿ ದಂಡ ವಿಧಿಸಿದೆ.

ಭಾರತೀಯ ದಂಡ ಸಂಹಿತೆ (ಐಪಿಸಿ) ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯಿದೆ (ಪಿಸಿಎ) ಅನ್ವಯ ಲಾಲೂ ಪ್ರಸಾದ್ ಅವರಿಗೆ ತಲಾ ಐದು ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. ದಂಡ ತೆರಲು ವಿಫಲವಾದಲ್ಲಿ ಇನ್ನಾರು ತಿಂಗಳ ಜೈಲು ಶಿಕ್ಷೆಅನುಭವಿಸಬೇಕು ಎಂದು ಸಿಬಿಐ ನ್ಯಾಯಮೂರ್ತಿಗಳಾದ ಶಿವರಾಜ್ ಪಾಲ್ ಸಿಂಗ್ ಆದೇಶಿಸಿದರು.
ಮೇವು ಹಗರಣದ ಎರಡನೇ ಮೊಕದ್ದಮೆಯಲ್ಲಿ ಒಟ್ಟು ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಒಟ್ಟು ಹದಿನಾರು ಮಂದಿ ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿದೆ, ಶಿಕ್ಷೆ ಪ್ರಮಾಣವನ್ನು ಜ.3ರಂದು ಪ್ರಕಟಿಸುವುದಾಗಿ ನ್ಯಾಯಾಲಯವು ಕಳೆದ ತಿಂಗಳು 23 ರಂದು ಹೇಳಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಶಿಕ್ಷೆ ಪ್ರಕಟ ದಿನಾಂಕವನ್ನು ಮೂರು ಬಾರಿ ಮುಂದೂಡಿ ಅಂತಿಮವಾಗಿ ಶುಕ್ರವಾರ ಪ್ರಕಟಿಸಲಾಯಿತು. 15 ಮಂದಿ ಲಾಲೂ ಸಹ ಅಪರಾಧಿಗಳ ಪೈಕಿ ಏಳು ಮಂದಿಗೆ ಮೂರೂವರೇ ವರ್ಷ ಜೈಲುಶಿಕ್ಷೆ ಹಾಗೂ ತಲಾ ಐದು ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. ಉಳಿದವರ ಶಿಕ್ಷೆ ಪ್ರಮಾಣ ಘೋಷಣೆಯನ್ನು ಕಾಯ್ದಿರಿಸಲಾಗಿದೆ.

Leave a Reply