ಆಧಾರ್ ನಿಂದ ಬಯಲಾಯ್ತು ಶಿಕ್ಷಕರ ಮೋಸ!

ಸಂಗ್ರಹ ಚಿತ್ರ

ಡಿಜಿಟಲ್ ಕನ್ನಡ ಟೀಮ್:

ಮಾನವ ಸಂಪನ್ಮೂಲ ಇಲಾಖೆ ಆಧಾರ್ ಸಲ್ಲಿಕೆಯಿಂದ ನಿರ್ಧಾರದಿಂದ ದೇಶದಲ್ಲಿ 80 ಸಾವಿರ ಶಿಕ್ಷಕರ ಮೋಸ ಬಯಲಾಗಿದೆ.

ಈಗಾಗಲೇ ಆಧಾರ್ ಕಾರ್ಡ್ ಕಡ್ಡಾಯ ನಿರ್ಧಾರದಿಂದ ಕೇಂದ್ರ ಸರ್ಕಾರ ಅಡುಗೆ ಅನಿಲ ಸಬ್ಸಿಡಿ, ಪಡಿತರ ಚೀಟಿ ಸೇರಿದಂತೆ ಇತರೆ ವಿಭಾಗಗಳಲ್ಲಿ ಸರ್ಕಾರಕ್ಕೆ ಮೋಸ ಮಾಡುತ್ತಿದ್ದ ನಕಲಿ ಫಲಾನುಭವಿಗಳನ್ನು ಪತ್ತೆ ಹಚ್ಚಿ ಸರ್ಕಾರದ ಸಂಪನ್ಮೂಲ ಸೋರಿಕೆಯನ್ನು ತಡೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಇದರ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ.

2016-17ನೇ ಸಾಲಿನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಉನ್ನತ ಶಿಕ್ಷಣ ಸಮೀಕ್ಷೆಯಲ್ಲಿ ಎಲ್ಲಾ ಶಿಕ್ಷಕರಿಗೂ ಆಧಾರ್ ಕಡ್ಡಾಯ ಮಾಡಬೇಕು ಎಂದು ತಿಳಿಸಿತ್ತು. ಶೇ.85 ರಷ್ಟು ಮಂದಿ ಆಧಾರ್ ಸಲ್ಲಿಕೆ ಮಾಡಿದ್ದು, ಅದರಲ್ಲಿ 85 ಸಾವಿರಕ್ಕೂ ಹೆಚ್ಚು ಶಿಕ್ಷಕರು ಸುಳ್ಳು ಮಾಹಿತಿ ನೀಡಿ ಏಕಕಕಾಲದಲ್ಲಿ ಮೂರರಿಂದ ನಾಲ್ಕು ಕಾಲೇಜು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಅಂಶ ಕಂಡು ಬಂದಿದೆ. ಶೇ.100 ರಷ್ಟು ಆಧಾರ್ ಸಲ್ಲಿಕೆಯಾದರೆ ಇದರ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸಿವಾಲಯ ಅಭಿಪ್ರಾಯಪಟ್ಟಿದೆ.

ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಕಳ್ಳಶಿಕ್ಷಕರಿದ್ದಾರೆ. ಏಕಕಾಲದಲ್ಲಿ ಕಳ್ಳ ದಾರಿ ಹಿಡಿದು ವಿವಿಧ ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದ ಶಿಕ್ಷಕರಾಗಿದ್ದಾರೆ. ಆಧಾರ್ ಕಾರ್ಡ್ ಸಲ್ಲಿಕೆ ನಿರ್ಧಾರ ನಂತರ ಇಂತಹ 80 ಸಾವಿರ ಶಿಕ್ಷಕರು ಸಿಕ್ಕಿಬಿದ್ದಿದ್ದು, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಈ 80  ಸಾವಿರ ಶಿಕ್ಷಕರ ಪೈಕಿ ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ಇಂತಹ ಪ್ರಕರಣಗಳು ದಾಖಲಾಗಿಲ್ಲ. ಈ ಎಲ್ಲ ಪ್ರಕರಣಗಳು ರಾಜ್ಯ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಕಂಡು ಬಂದಿವೆ ಎಂದು ಸ್ಪಷ್ನೆ ನೀಡಿದ್ದಾರೆ ಕೇಂದ್ರ ಮಾವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್.

Leave a Reply