ನನ್ನ ಬೆನ್ನಿಗೆ ಇರಿದ ಸಿದ್ರಾಮಯ್ಯಗೆ ಸೋಲು ಭಾಗ್ಯ ಖಚಿತ: ದೇವೇಗೌಡ

ಡಿಜಿಟಲ್ ಕನ್ನಡ ಟೀಮ್:

ನಾನು ಬೆಳೆಸಿದ ಸಿದ್ದರಾಮಯ್ಯ ನನ್ನ ಬೆನ್ನಿಗೇ ಚೂರಿ ಹಾಕಿದವರು. ಅಧಿಕಾರಕ್ಕೋಸ್ಕರ ಕಾಂಗ್ರೆಸ್ಸಿಗೆ ಹೋಗಿ ನನಗೆ ದ್ರೋಹ ಮಾಡಿದರು. ಅವರಿಗೆ ಮುಂದಿನ ಚುನಾವಣೆಯಲ್ಲಿ ‘ಸೋಲು ಭಾಗ್ಯ’ ಖಚಿತ ಎಂದು ಮಾಜಿ ಪ್ರಧಾನಿ ದೇವೇಗೌಡರು ಗುಡುಗಿದ್ದಾರೆ.

ಸಿದ್ದರಾಮಯ್ಯ ಅವರನ್ನು ನಾನು ಉಪಮುಖ್ಯಮಂತ್ರಿ ಮಾಡಿದ್ದೆ. ಆಗ ಕುಮಾರಸ್ವಾಮಿಯನ್ನು ಮಂತ್ರಿ ಕೂಡ ಮಾಡಿರಲಿಲ್ಲ. ಒಂದೊಮ್ಮೆ ಕುಮಾರಸ್ವಾಮಿಯನ್ನು ಅಧಿಕಾರದಲ್ಲಿ ನೋಡಬೇಕೆಂದಿದ್ದರೆ ಸಿದ್ದರಾಮಯ್ಯ ಬದಲು ಅವನನ್ನೇ ಉಪಮುಖ್ಯಮಂತ್ರಿ ಮಾಡುತ್ತಿದ್ದೆ. ನನಗೆ ಮೋಸ ಮಾಡಿ ಕಾಂಗ್ರೆಸ್ಸಿಗೆ ಹೋದ ಸಿದ್ದರಾಮಯ್ಯ ಈಗ ನನ್ನ ವಿರುದ್ಧವೇ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ ಎಂದು ಪಾವಗಡದಲ್ಲಿ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮದಲ್ಲಿ ಸೋಮವಾರ ಟೀಕಿಸಿದರು.
ನನ್ನ ಪುತ್ರ ವ್ಯಾಮೋಹದ ಬಗ್ಗೆ ಮಾತಾಡುವ ಸಿದ್ದರಾಮಯ್ಯ ಇವತ್ತು ತಮ್ಮ ಮಗನನ್ನು ಚುನಾವಣೆ ಕಣಕ್ಕೆ ಇಳಿಸಲು ಹೊರಟಿದ್ದಾರೆ. ಮಗನನ್ನು ಮುಖ್ಯಮಂತ್ರಿ ಮಾಡುವ ಕನಸು ಅವರದು. ಹಾಗಾದರೆ ಇದೇನು ಪುತ್ರ ವ್ಯಾಮೋಹ ಅಲ್ಲವೇ? ಎಂದು ಪ್ರಶ್ನಿಸಿದರು.

Leave a Reply