ಬಿಜೆಪಿ ಕೋಮುವಾದಿಗಳ ಏಜೆಂಟ್; ಸಿದ್ರಾಮಯ್ಯ ಟಾಂಗ್!

ಡಿಜಿಟಲ್ ಕನ್ನಡ ಟೀಮ್:
‘ಬೇರೆ ಧರ್ಮದವರನ್ನು ದ್ವೇಷಿಸುವುದು, ಹಿಂದೂಗಳನ್ನು ಬೇರೆ ಧರ್ಮದವರ ವಿರುದ್ಧ ಎತ್ತಿ ಕಟ್ಟುವಮೂಲಕ ಬಿಜೆಪಿ ಕೋಮುವಾದಿಗಳ ಏಜೆಂಟ್ ಆಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ  ನಡೆಸಿದ್ದಾರೆ.
‘ನಾವು ಎಲ್ಲ ಧರ್ಮ, ಜಾತಿಯವರನ್ನು ಪ್ರೀತಿಸಬೇಕು. ಆಗ ನಮ್ಮ ಜೀವನ ಸಾರ್ಥಕವಾಗುತ್ತದೆ. ಆದ್ರೆ ಬಿಜೆಪಿಯವರು ಧರ್ಮ ಮತ್ತು ದೇವರ ಹೆಸರಿನಲ್ಲಿ ರಾಜಕೀಯ ಮಾಡ್ತಾರೆ. ಮಂಗಳೂರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಪುತ್ತೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಹೇಳಿದರು.
ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳುವ ಬಿಜೆಪಿ ನಾಯಕರು ಗ್ರಾಮ ಪಂಚಾಯಿತಿ ಸದಸ್ಯರಾಗಲೂ ನಾಲಾಯಕು. ಆದ್ರೆ ನಮ್ಮ ಸರಕಾರ ಜನತೆಗೆ ಬೇಕಾದ ಎಲ್ಲಾ ಭಾಗ್ಯಗಳನ್ನು ನೀಡಿದೆ. ಯಡಿಯೂರಪ್ಪರವರು ಸೈಕಲ್ ಮತ್ತು ಸೀರೆ ಭಾಗ್ಯ ಮಾತ್ರ ಕೊಟ್ಟು ಏನೋ ಕಡಿದು ಕಟ್ಟೆ ಹಾಕಿದವರಂತೆ ಮಾತಾಡುತ್ತಿದ್ದಾರೆ. ಅವರು ಮಾಡಿರುವ ಮೂರನೇ ಸಾಧನೆ ಎಂದರೆ ಜೈಲಿಗೆ ಹೋಗಿದ್ದು. ಕೋಮು ಗಲಭೆ ಸೃಷ್ಟಿಸುವವರ ವಿರುದ್ಧ ಕಠಿಣ ಶಿಕ್ಷೆ ಜಾರಿ ಕುರಿತು ಶೀಘ್ರ ಕಾನೂನು ತರುತ್ತೇವೆ’ ಎಂದು ತಿಳಿಸಿದರು.

Leave a Reply