ಸಿದ್ರಾಮಯ್ಯ ಒಬ್ಬ ತಲೆತಿರುಕ, ಊರೂರು ಅಲೆಯುತ್ತಿರುವ ಹುಚ್ಚ: ಯಡಿಯೂರಪ್ಪ ವ್ಯಂಗ್ಯ

ಡಿಜಿಟಲ್ ಕನ್ನಡ ಟೀಮ್:

ಸಿದ್ದರಾಮಯ್ಯ ಒಬ್ಬ ತಲೆತಿರುಕ. ಹೀಗಾಗಿ ಹುಚ್ಚನಂತೆ ಊರೂರು ಅಲೆಯುತ್ತಾ ಬಾಯಿಗೆ ಬಂದಂತೆ ಮಾತಾಡಾತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಕಟಕಿಯಾಡಿದ್ದಾರೆ.

ಮೀನು ತಿಂದು ಧರ್ಮಸ್ಥಳಕ್ಕೆ ಹೋದ ಸಿದ್ದರಾಮಯ್ಯ ಗೋಮಾಂಸವನ್ನೂ ತಿಂದುಕೊಳ್ಳಲಿ. ಆದರೆ ಗೋಮಾಂಸ ಸೇವನೆ, ಗೋಹತ್ಯೆ ಬಗ್ಗೆ ಪಾಠ ಹೇಳೋದು ಬೇಡ. ಗೋಮಾಂಸ ಸೇವನೆ ಪ್ರತಿಪಾದಿಸುವ ಅವರಿಗೆ, ಹಿಂದೂಗಳ ಸರಣಿ ಹತ್ಯೆ ತಡೆಯಲು ಆಗದ ಅವರಿಗೆ ಹಿಂದುತ್ವದ ಬಗ್ಗೆ ಮಾತಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಚಿತ್ರದುರ್ಗದಲ್ಲಿ ಮಾಧ್ಯಮದವರಿಗೆ ಮಂಗಳವಾರ ತಿಳಿಸಿದ್ದಾರೆ.
ಅವರು ಹೇಳಿದ್ದಿಷ್ಟು: ‘ಮಾತಿಗೆ ಮುಂಚೆ ನನ್ನನ್ನು ಜೈಲಿಗೆ ಹೋಗಿ ಬಂದವರು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಮಾತಾಡಬಹುದು. ಆದರೆ ಹೀಗೆ ಮಾತಾಡುತ್ತಾ ಹೋದರೆ ಜನರೇ ಅವರನ್ನು ಬಡಿಗೆ ತೆಗೆದುಕೊಂಡು ಬೀದಿ, ಬೀದಿಯಲ್ಲಿ ಅಟ್ಟಾಡಿಸಿ ಬಡಿಯುತ್ತಾರೆ.’
‘ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಿಟ್ಟರೆ ಕಾಂಗ್ರೆಸ್ನಲ್ಲಿ ಬೇರಾರೂ ಗೆಲ್ಲದ ಪರಿಸ್ಥಿತಿ ಇದೆ. ಕರ್ನಾಟಕದಲ್ಲಿ ಅಧಿಕಾರದಲ್ಲಿರೋ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಅಡ್ರೆಸ್ಸಿಗೆ ಇಲ್ಲದಂತೆ ಹೋಗುತ್ತದೆ.’

Leave a Reply