ಆಪ್ತ ಸ್ನೇಹಿತ ಮೋದಿಗೆ ಇಸ್ರೇಲ್ ಪ್ರಧಾನಿ ನೆತನ್ಯಾಹುನಿಂದ ‘ಗಾಲ್ ಜೀಪ್’ ಉಡುಗೊರೆ! ಏನಿದರ ವಿಶೇಷ?

PTI7_4_2017_000248B

ಡಿಜಿಟಲ್ ಕನ್ನಡ ಟೀಮ್:

ಮುಂದಿನ ವಾರ ಭಾರತ ಪ್ರವಾಸ ಮಾಡಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಆತ್ಮೀಯ ಸ್ನೇಹಿತ ಮೋದಿಗೆ ‘ಗಾಲ್ ಜೀಪ್’ ಅನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ.

ಬೆಂಜಮಿನ್ ಅವರ ಈ ಪ್ರವಾಸದಲ್ಲಿ ಉಭಯ ರಾಷ್ಟ್ರಗಳ ನಡುವೆ ದೊಡ್ಡ ಮಟ್ಟದ ಒಪ್ಪಂದ ನಡೆಯುವ ಸಾಧ್ಯತೆಗಳಿವೆ. ಈ ಎಲ್ಲದರ ನಡುವೆ ನೆತನ್ಯಾಯು ಅವರು ಮೋದಿಗೆ ನೀಡುತ್ತಿರುವ ಈ ವಿಶೇಷ ಉಡುಗೊರೆ ಸಾಕಷ್ಟು ಗಮನ ಸೆಳೆದಿದೆ. ಹಾಗಾದರೆ ಈ ಗಾಲ್ ಜೀಪ್ ಏನು? ಇದರ ವಿಶೇಷತೆಗಳೇನು? ಈ ಜೀಪ್ ಕೊಡಲು ಕಾರಣವೇನು? ಎಂಬುದನ್ನು ನೋಡೋಣ ಬನ್ನಿ.

ಈ ಗಾಲ್ ಜೀಪ್ ಸಮುದ್ರದ ಉಪ್ಪಿನ ನೀರನ್ನು ಅತ್ಯುತ್ತಮ ಗುಣಮಟ್ಟದ ಕುಡಿಯುವ ನೀರನ್ನಾಗಿ ಪರಿವರ್ತಿಸುವ ಒಂದು ಸಂಚಾರಿ ವಾಹನ ಯಂತ್ರ. ಕಳೆದ ವರ್ಷ ಮೋದಿ ಇಸ್ರೇಲ್ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಬೆಂಜಮಿನ್ ನೆತನ್ಯಾಹು ಹಾಗೂ ಮೋದಿ ಇಬ್ಬರು ಓಲ್ಗಾ ಸಮುದ್ರ ತೀರದಲ್ಲಿ ಇದೇ ಗಾಲ್ ಜೀಪ್ ಮೇಲೆ ವಿಹರಿಸಿದ್ದರು. ಇಸ್ರೇಲಿನ ಈ ವಿಶಿಷ್ಟ ಆವಿಷ್ಕಾರವನ್ನು ನೋಡಿ ಮೋದಿ ಮೆಚ್ಚಿಕೊಂಡಿದ್ದು ಹೀಗೆ… ‘ನೈಸರ್ಗಿಕವಾದ ಕುಡಿಯುವ ನೀರಿನ ಕೊರತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಇಸ್ರೇಲಿನ ಈ ವಿಶಿಷ್ಟ ಅನ್ವೇಷಣೆ ಮಹತ್ವದ್ದಾಗಿದೆ. ಈ ವಾಹನದಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವವರಿಗೆ ಪರಿಹಾರವಾಗಲಿದೆ. ಇದನ್ನು ತೋರಿಸಿದ ಬಿಬಿ (ಬೆಂಜಮಿನ್ ನೆತನ್ಯಾಹು) ಅವರಿಗೆ ಧನ್ಯವಾದ ತಿಳಿಸುತ್ತೇನೆ.’

ಹೀಗೆ ಮೋದಿ ವಿಹರಿಸಿ ಮನಸಾರೆ ಮೆಚ್ಚಿದ್ದ ಗಾಲ್ ಜೀಪ್ ಅನ್ನೇ ಬೆಂಜಮಿನ್ ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ. ಸದ್ಯ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಈಗಾಗಲೇ ಈ ವಾಹನವನ್ನು ಭಾರತಕ್ಕೆ ಕಳುಹಿಸಲಾಗಿದ್ದು, ಬೆಂಜಮಿನ್ ನೆತನ್ಯಾಹು ಭಾರತಕ್ಕೆ ಬರುವ ವೇಳೆಗೆ ಅದು ಕೂಡ  ಬಂದು ಸೇರುವ ನಿರೀಕ್ಷೆ ಇದೆ. ಈ ಗಾಲಾ ಜೀಪಿನ ವಿಶೇಷತೆಗಳೆಂದರೆ…

  • ಈ ಪುಟ್ಟ ಜೀಪ್ ಪ್ರತಿನಿತ್ಯ ಸಮುದ್ರದಿಂದ 20 ಸಾವಿರ ಲೀಟರ್ ಕುಡಿಯುವ ನೀರನ್ನು ತರಬಲ್ಲ ಸಾಮರ್ಥ್ಯ ಹೊಂದಿದೆ.
  • ಪ್ರತಿನಿತ್ಯ 80 ಸಾವಿರ ಅಶುದ್ಧ ನೀರನ್ನು ಶುದ್ಧೀಕರಿಸಲಿದೆ. (ವಿಶ್ವ ಆರೋಗ್ಯ ಸಂಸ್ಥೆ ಶುದ್ಧ ಕುಡಿಯುವ ನೀರಿಗೆ ವಿಧಿಸಿರುವ ಮಾನದಂಡ ಸರಿಯಾದ ಗುಣಮಟ್ಟಕ್ಕೆ ತಕ್ಕಂತೆ ಶುದ್ಧೀಕರಣ ಮಾಡಲಿದೆ.)
  • ಈ ಗಾಲಾ ವಾಹನದ ಮೊತ್ತ 3.90 ಲಕ್ಷ ಶೆರ್ಕ್ (₹ 70.60 ಲಕ್ಷ)ದಷ್ಟಾಗಿದೆ.

Leave a Reply