ಸೇನಾ ದಿನದಂದು ಭಾರತೀಯ ಯೋಧರ ಭರ್ಜರಿ ಬೇಟೆ! ಕುತಂತ್ರಿ ಪಾಕ್‌ನ 7 ಸೈನಿಕರು, 4 ಉಗ್ರರ ಸಂಹಾರ!

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನದ ವಿಷಯದಲ್ಲಿ ಭಾರತ ಶಾಂತಿ ಪಠಿಸುವ ಕಾಲ ಮುಗಿದಿದೆ. ಇನ್ನೇನಿದ್ದರೂ ಅಲ್ಲಿಂದಲ್ಲಿಗೆ ಲೆಕ್ಕ ಚುತ್ತಾ ಮಾಡುವುದಷ್ಟೇ ಭಾರತದ ಕೆಲಸ. ಸದ್ಯ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್ ಸೈನ್ಯಕ್ಕೆ ಹಾಗೂ ಜಮ್ಮು ಕಾಶ್ಮೀರದ ಉಗ್ರರಿಗೆ ಭಾರತೀಯ ಸೇನೆ ಸೋಮವಾರ ಇಂತಹುದೇ ಉತ್ತರ ಕೊಟ್ಟಿದೆ. ಪಾಕಿಸ್ತಾನದ ಏಳು ಯೋಧರು ಹಾಗೂ ನಾಲ್ವರು ಉಗ್ರರ ಸಂಹಾರದೊಂದಿಗೆ ಸೇನಾ ದಿನವನ್ನು ಭರ್ಜರಿಯಾಗಿ ಆಚರಿಸಿದೆ!

ಕಳೆದ ಕೆಲವು ದಿನಗಳಿಂದ ಗಡಿಯಲ್ಲಿ ಪಾಕಿಸ್ತಾನ ಕದನವಿರಾಮ ಉಲ್ಲಂಘಿಸಿ ಮತ್ತೆ ಬಾಲ ಬಿಚ್ಚುತ್ತಿದೆ. ಪಾಕಿಸ್ತಾನದ ಕುತಂತ್ರದ ದಾಳಿಗೆ ಕಳೆದ ಶನಿವಾರ ಭಾರತೀಯ ಯೋಧನೋಬ್ಬ ಹುತಾತ್ಮನಾಗಿದ್ದ. ಇದಕ್ಕೆ ಪ್ರತಿಕಾರವಾಗಿ ಈಗ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ಸೇನೆ ಪಾಕ್ ಯೋಧರ ಎದೆ ಸೀಳಿದೆ. ಭಾರತ ಸೇನೆಯ ಕಾರ್ಯಾಚರಣೆಯಲ್ಲಿ ನಾಲ್ವರು ಪಾಕ್ ಯೋಧರು ಗಾಯಗೊಂಡಿದ್ದಾರೆ.

ಪೂಂಚ್ ಜಿಲ್ಲೆಯ ಮೇಧಾರ್ ಸೆಕ್ಟರ್‌ನ ಕೋಟ್ಲಿ ಪ್ರದೇಶದಲ್ಲಿರುವ ಅಂತಾರಾಷ್ಟ್ರೀಯ ಗಡಿರೇಖೆಯಲ್ಲಿ ಪಾಕ್ ಸೈನಿಕರು ಅನಗತ್ಯ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ ಭಾರತೀಯ ಯೋಧರು, ನಾಲ್ಕು ಚೆಕ್ ಪೋಸ್ಟ್‌ಗಳನ್ನು ಧ್ವಂಸ ಮಾಡಿ ಪಾಕ್ ಸೈನಿಕರ ಹುಟ್ಟಡಗಿಸಿದೆ.

ಇನ್ನು ಕಣಿವೆ ರಾಜ್ಯದ ಉರಿ ವಲಯದ ದೌಲಾಂಜಾ ಪ್ರದೇಶದ ಗಡಿ ಭಾಗದಲ್ಲಿ ಅಕ್ರಮವಾಗಿ ನುಸುಳುತ್ತಾ ಆತ್ಮಹತ್ಯಾ ದಾಳಿಗೆ ಸಜ್ಜಾಗಿದ್ದ ಐವರು ಜೈಶ್ ಇ ಮೊಹಮದ್ ಸಂಘಟನೆ ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಅದರೊಂದಿಗೆ ಸೇನಾ ದಿನದಂದು 11 ಬಲಿ ಪಡೆದು ಭಾರತೀಯ ಸೇನೆ ದೇಶದ ರಕ್ಷಣೆ ಮಾಡಿದೆ. ಸೇನೆಯ ಈ ಕಾರ್ಯಕ್ಕೆ ರಾಷ್ಟ್ರವೇ ಹೆಮ್ಮೆ ಪಡುವಂತೆ ಮಾಡಿದೆ.

Leave a Reply