ಮೋದಿ ಹಿಂದೂ ಅಲ್ಲ ಎಂದ ಪ್ರಕಾಶ್ ರೈ!

ಡಿಜಿಟಲ್ ಕನ್ನಡ ಟೀಮ್:
ಪ್ರಧಾನಿ ನರೇಂದ್ರ ಮೋದಿ ಹೋದ ಕಡೆಗಳಲ್ಲಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುವುದು ಸಾಮಾನ್ಯ. ಭಾರತದ ದೇವಸ್ಥಾನಗಳಿರಲಿ, ವಿದೇಶದ ದೇಗುಲಗಳೇ ಇರಲಿ, ಪ್ರಧಾನಿ ದೇವರ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿ ಕೆಲ ಕಾಲ ಧ್ಯಾನಸ್ಥರಾಗಿ ಕುಳಿತು ಕೊಳ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹಿಂದೂ ಅಲ್ಲ ಅನ್ನೋ ಸ್ಫೋಟಕ ವಿಚಾರ ಹೊರ ಬಿದ್ದಿದೆ.
ಈ ಮಾತು ಎಷ್ಟು ಸತ್ಯ ಅನ್ನೋದೇ ಡೌಟ್..!
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರು ಹಿಂದೂಗಳಲ್ಲ ಅಂತಾ ಹೇಳಿರೋದು ಓರ್ವ ನಟ ಪ್ರಕಾಶ್ ರೈ. ಈ ಮಾತು ಎಷ್ಟು ಸತ್ಯ? ಆದ್ರೆ ನಾನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ವಿರೋಧಿಯಾಗಿದ್ದೇನೆ. ಅವರನ್ನು ಹಿಂದೂ ಎಂದು ಪರಿಗಣಿಸಬೇಡಿ ಅಂತಾ ಕನ್ನಡಿಗ ಪ್ರಕಾಶ್ ರೈ ಹೇಳಿದ್ದಾರೆ.
ಭಾರೀ ಚರ್ಚೆಯಾಗ್ತಿದೆ ಪ್ರಕಾಶ್ ರೈ ಹೇಳಿಕೆ
ಡಿಎನ್ಎ ಗೆ ಸಂದರ್ಶನ ಕೊಟ್ಟಿರುವ ನಟ ಪ್ರಕಾಶ್ ರೈ, ಪ್ರಧಾನಿ ಮೋದಿ ಹಾಗೂ ಅಮಿತ್ ಅವರನ್ನ ವಿರೋಧ ಮಾಡ್ತೀನಿ, ಅವರನ್ನು ಹಿಂದೂಗಳು ಎಂದು ಪರಿಗಣಿಸಬೇಡಿ ಎಂದಿದ್ದಾರೆ ಎಂದು ಡಿಎನ್ಎ ಟ್ವಿಟ್ಟರ್ ನಲ್ಲಿ ಹಾಕ್ತಿದ್ದ ಹಾಗೆ ಭಾರೀ ಪರ ವಿರೋಧ ಚರ್ಚೆ ಶುರು ಆಗಿದೆ. ಕೆಲವರು ನಿನ್ನಿಂದ ಸರ್ಟಿಫಿಕೇಟ್ ಬೇಕಿಲ್ಲ ಎಂದ್ರೆ, ಇನ್ನೂ ಕೆಲವರು ನಿಮ್ಮ ಮಾತಿಗೆ ಸಹಮತ ಇದೆ ಎಂದಿದ್ದಾರೆ. ಸಂದರ್ಶನದಲ್ಲಿ ಇನ್ನೂ ಏನೇನು ಮಾತನಾಡಿದ್ದಾರೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

Leave a Reply