ನಟಿ ಶೃತಿ ಹರಿಹರನ್ ರನ್ನು ಹಾಸಿಗೆಗೆ ಕರೆದಿದ್ದ ನಿರ್ಮಾಪಕರು!

ಡಿಜಿಟಲ್ ಕನ್ನಡ ಟೀಮ್:

ಚಿತ್ರರಂಗದಲ್ಲಿ ಅವಕಾಶಗಳನ್ನು ಹರಸುತ್ತಾ ಬರುವ ಅದೆಷ್ಟೋ ನಟಿಯರು ಕಾಸ್ಟಿಂಗ್ ಕೌಚ್ (ಅವಕಾಶಕ್ಕಾಗಿ ಹಾಸಿಗೆ ಹಂಚಿಕೊಳ್ಳುವ) ಸುಳಿಗೆ ಸಿಲುಕಿ ನರಳಿರುವ ಉದಾಹರಣೆ ಸಾಕಷ್ಟಿದೆ. ಈ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಈಗಾಗಲೇ ಅನೇಕ ನಟಿಯರು ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ. ಈಗ ಆ ಸಾಲಿಗೆ ಶೃತಿ ಹರಿಹರನ್ ಕೂಡ ಸೇರ್ಪಡೆಯಾಗಿದ್ದಾರೆ. ಅವರೂ ಚಿತ್ರರಂಗದಲ್ಲಿನ ಕೆಟ್ಟ ಸಂಪ್ರದಾಯಕ್ಕೆ ಸಾಕ್ಷಿಯಾಗಿದ್ದನ್ನು ಹೇಳಿಕೊಂಡಿದ್ದಾರೆ.

ಹೌದು, ಹೈದರಾಬಾದಿನಲ್ಲಿ ನಡೆದ ಇಂಡಿಯಾ ಟುಡೆ ಆಯೋಜಿಸಿದ್ದ ‘ಸಿನಿಮಾದಲ್ಲಿ ಲೈಂಗಿಕತೆ’ ಎಂಬ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿದ್ದ ಶೃತಿ ಹರಿಹರನ್, ತಾವು ಎದುರಿಸಿದ ಕಹಿ ಪರಿಸ್ಥಿತಿಯನ್ನು ವಿವರಿಸಿದ್ದು ಹೀಗೆ…

‘ನಾನು ಕೂಡ ಕಾಸ್ಟಿಂಗ್ ಕೌಚ್ ಕಹಿಯನ್ನು ಎದುರಿಸಿದ್ದೇನೆ. ನಾನು ಚಿತ್ರರಂಗಕ್ಕೆ ಬಂದಾಗ ನನಗೆ 18 ವರ್ಷ. ಆಗ ನಾನು ಎದುರಿಸಿದ ಪರಿಸ್ಥಿತಿ, ಅದರಿಂದ  ಬೇಸತ್ತು ಕಣ್ಣೀರಿಟ್ಟಿದ್ದು,ಈಗಲೂ ಕಣ್ಣಮುಂದೆ ಬರುತ್ತದೆ. ಆ ಸಂದರ್ಭದಲ್ಲಿ ನನ್ನ ನೃತ್ಯ ಸಂಯೋಜಕರೊಬ್ಬರ ಬಳಿ ಈ ವಿಷಯವನ್ನು ಹೇಳಿಕೊಂಡೆ ಆಗ ಅವರು, ಇಂತಹ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಲು ಸಾಧ್ಯವಾಗದಿದ್ದರೆ ಚಿತ್ರರಂಗ ಬಿಟ್ಟು ಹೋಗುವುದು ಉತ್ತಮ ಎಂದರು.

ಮೊದಲ ಕಹಿ ಘಟನೆಯಾದ ನಾಲ್ಕು ವರ್ಷದ ನಂತರ ಮತ್ತೆ ಇಂತಹುದೇ ಪರಿಸ್ಥಿತಿ ನನಗೆ ಎದುರಾಯಿತು. ತಮಿಳು ಚಿತ್ರರಂಗದ ದೊಡ್ಡ ನಿರ್ಮಾಪಕರೊಬ್ಬರು ನನ್ನ ಕನ್ನಡ ಚಿತ್ರವನ್ನು ತಮಿಳಿನಲ್ಲಿ ರಿಮೇಕ್ ಮಾಡಲು ಹಕ್ಕು ಖರೀದಿಸಿದರು. ತಮಿಳಿನಲ್ಲೂ ಆ ಪಾತ್ರ ಮಾಡಲು ನನಗೆ ಅವಕಾಶ ನೀಡುವುದಾಗಿ ಹೇಳಿದರು. ಇದಕ್ಕೆ ಪ್ರತಿಯಾಗಿ ಆ ಚಿತ್ರದ ಐದೂ ನಿರ್ಮಾಪಕರು ಅವರಿಗೆ ಬೇಕಾದ ರೀತಿಯಲ್ಲಿ ನನ್ನನ್ನೂ ಹಂಚಿಕೊಳ್ಳುತ್ತೇವೆ ಎಂದು ಹೇಳಿದರು. ಆಗ ನನ್ನ ಕಾಲಿನಲ್ಲಿದ್ದ ಚಪ್ಪಲಿಯನ್ನು ಕೈಗೆ ತೆಗೆದುಕೊಳ್ಳುವುದಾಗಿ ಹೇಳಿದೆ.

ಈ ಘಟನೆ ನಡೆದ ನಂತರ ಆ ನಿರ್ಮಾಪಕನಿಗೆ ಪರಿಚಯವಿದ್ದ ಅನೇಕ ನಿರ್ಮಾಪಕರು ನಾನು ಹಾಗೆ ಹೇಳಿದ್ದು ನಿಜವೇ ಎಂದು ಕೇಳಿದರು. ನಂತರ ತಮಿಳು ಚಿತ್ರಗಳಿಂದ ಉತ್ತಮ ಅವಕಾಶಗಳು ಬರುವುದು ನಿಂತು ಹೋದವು.’

Leave a Reply