ಬಿಗ್ ಬಾಸ್ ಮನೆಯಿಂದ ಸಮೀರ್ ಆಚಾರ್ಯ ಔಟ್? ಇನ್ನುಳಿದಿರೋದು ನಾಲ್ಕೇ ಜನ!

ಡಿಜಿಟಲ್ ಕನ್ನಡ ಟೀಮ್:

ಬಿಗ್ ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಕಳೆದೆರಡು ದಿನಗಳಿಂದ ಇಬ್ಬರು ಸ್ಪರ್ಧಿಗಳು ಔಟಾಗಿದ್ದಾರೆ. ಈಗ ಮತ್ತೊಬ್ಬ ಸ್ಪರ್ಧಿ ಸಮೀರ್ ಆಚಾರ್ಯ ಕೂಡ ಮನೆಯಿಂದ ಹೊರ ಬಿದ್ದಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಕೇಳಿಬಂದಿದೆ.

ಸೋಮವಾರ ಸಮೀರ್ ಆಚಾರ್ಯ ಮನೆಯಿಂದ ಹೊರ ಬಿದ್ದಿರುವುದಾಗಿ ಮೂಲಗಳು ತಿಳಿಸಿವೆ. ಇದರೊಂದಿಗೆ ಅಂತಿಮ ನಾಲ್ಕು ಜನ ಮಾತ್ರ ಉಳಿದಿದ್ದು, ಜಯರಾಂ ಕಾರ್ತಿಕ್, ಚಂದನ್ ಶೆಟ್ಟಿ, ನಿವೇದಿತಾ ಗೌಡ ಹಾಗೂ ದಿವಾಕರ್ ಅಂತಿಮ ನಾಲ್ವರಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಮತ್ತೊಬ್ಬ ಅಭ್ಯರ್ಥಿಯನ್ನೂ ಶೀಘ್ರದಲ್ಲೇ ಹೊರಗೆ ಕರೆಸಿಕೊಂಡು ಮನೆಯಲ್ಲಿ ಟಾಪ್ 3 ಅಭ್ಯರ್ಥಿಗಳನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ.

ರಿಯಾಜ್, ಅನುಪಮಾ ಹಾಗೂ ಶೃತಿ ಪ್ರಕಾಶ್ ಹೊರ ಬಂದ ಸುದ್ದಿಯನ್ನು ಡಿಜಿಟಲ್ ಕನ್ನಡ ನಿಖರವಾಗಿ ಹೇಳಿದ್ದು, ಈಗಲೂ ಕೂಡ ಮೂಲಗಳಿಂದ ಬಂದಿರುವ ಮಾಹಿತಿಪ್ರಕಾರ ಸಮೀರ್ ಹೊರ ಬಿದ್ದಿದ್ದಾರೆ. ಬಿಗ್ ಬಾಸ್ ರೋಚಕ ಹಂತಕ್ಕೆ ತಲುಪಿದ್ದು ಪ್ರಮುಖ ಬೆಳವಣಿಗೆಗಳ ಮಾಹಿತಿ ಪಡೆಯಲು ನಮ್ಮ ವೆಬ್ ಸೈಟ್ ಅನ್ನು ನೋಡುತ್ತಿರಿ.

Leave a Reply