ಕರ್ನಾಟಕ ಬಂದ್ ನಿಂದ ಏನೇನಾಯ್ತು? ಗೆದ್ದಿದ್ದು ಯಾರು.. ಸೋತಿದ್ದು ಯಾರು? 

ಮಹದಾಯಿ ನೀರಿಗಾಗಿ ಕನ್ನಡ ಸಂಘಟನೆಗಳು ಕರೆ ಕೊಟ್ಟಿದ್ದ ಕರ್ನಾಟಕ ಬಂದ್ ಬಹುತೇಕ ಯಶಸ್ವಿಯಾಗಿದ್ದು, ಗೋವಾ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿವೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೋರಾಟದ ತೀವ್ರತೆ ಯಾವ ಪಕ್ಷದ ಮರ್ಜಿಗೂ ಒಳಗಾಗದೇ  ಹಾದಿಯಲ್ಲಿ ಸಾಗುತ್ರಾ ಯಶಸ್ವಿಯಾಗಿದೆ. ಅದರಲ್ಲೂ ನಾಯಿ ಕೇಂದ್ರ ಸರ್ಕಾರಕ್ಕೆ ಧಿಕ್ಕಾರವೆಂದಿದ್ದು, ಮೇಕೆ ಕೂಡ ಗೋವಾ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಮಕ್ಕಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಕಿ, ವಾಲಿಬಾಲ್ ಆಟವಾಡಿದ್ದು ಇಂದಿನ ವಿಶೇಷಗಳು. ವಾಟಾಳ್ ನಾಗರಾಜ್, ಪ್ರಧಾನಿ ಮಧ್ಯ ಪ್ರವೇಶಕ್ಕೆ ಆಗ್ರಹಿಸಿದ್ರೆ, ಸಾರಾ ಗೋವಿಂದು ಪ್ರಧಾನಿ ಮೋದಿಗೆ ಫೆಬ್ರವರಿ 4 ರಂದು ಕಪ್ಪು ಬಾವುಟ ಪ್ರದರ್ಶನಕ್ಕೆ ಕರೆ ನೀಡಿದ್ರು. ಉತ್ತರ ಕರ್ನಾಟಕದಲ್ಲೂ ಬಗೆ ಬಗೆಯಾಗಿ ಹೋರಾಟಗಾರರು ಗಮನ ಸೆಳೆದ್ರು..
ವಿಷಯ ಅಂದ್ರೆ ಬಂದ್ ಕರೆ ನೀಡಿದಾಗ ಸರ್ಕಾರಿ ಪ್ರಾಯೋಜಿತ ಬಂದ್ ಅನ್ನೋ ಅಪಸ್ವರ ಕೇಳಿ ಬಂದಿತ್ತು. ಮೈಸೂರಿನಲ್ಲಿ ನಿಗದಿಯಾಗಿದ್ದ ಬಿಜೆಪಿ ಪರಿವರ್ತನಾ ಯಾತ್ರೆಗೆ ಅಡ್ಡಿ ಮಾಡಲೆಂದೇ ದಿನಾಂಕ ಬದಲಾವಣೆ ಮಾಡಲಾಗಿದೆ ಅನ್ನೋ ಆರೋಪವನ್ನು ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮಾಡಿದ್ರು. ಆದ್ರೆ ಕನ್ನಡಿಗರ ಹೋರಾಟ ಎಲ್ಲಾ ಆರೋಪಗಳನ್ನು ಮೆಟ್ಟಿ ನಿಲ್ಲುವ ಮೂಲಕ ಕನ್ನಡದ ವಿಚಾರದಲ್ಲಿ ನಾವೆಲ್ಲರೂ ಒಂದೇ ಅನ್ನೋದನ್ನು ಸಾರಿ ಹೇಳುವ ಮೂಲಕ ಎದುರಾಳಿಗೆ ತಕ್ಕ ಉತ್ತರ ಕೊಟ್ಟಿವೆ.
ಬಂದ್ ಕರೆ ಕೊಟ್ಟಾಗ ಈ ಬಂದ್ ಅವಶ್ತಕತೆ ಇಲ್ಲ. ಹೋರಾಟಕ್ಕೆ ನಮ್ಮ ಬೆಂಬಲ ಇರುತ್ತೆ, ಬಂದ್ ಮಾಡಿದರೆ ಅದರಿಂದ ಜನರಿಗೇ ಕಷ್ಟ ಎನ್ನುವ ಮೂಲಕ ಬಂದ್ ನಡೆಯದಂತೆ ದಾರಿ ತಪ್ಪಿಸಲು ಪ್ರಯತ್ನ ನಡೀತು. ಬಂದ್ ಹಿಂದಿನ ದಿನದ ತನಕವೂ ಕೂಡ ಬಂದ್ ಬಗ್ಗೆ ಅನಿಶ್ಚಿತತೆ ಕಾಡುತ್ತಿತ್ತು. ಶಾಲಾ ಕಾಲೇಜುಗಳು, ಅಂಗಡಿ ಮುಂಗ್ಗಟ್ಟುಗಳು ಕೂಡ ಬಂದ್ ಮಾಡಬೇಕೋ ಅಥವಾ ಬಂದ್ ವಿಫಲವಾಗುತ್ತೋ ಅನ್ನೋ ಜಂಜಾಟದಲ್ಲಿ ತಲೆ ಬಿಸಿ ಮಾಡಿಕೊಂಡಿದ್ದವು. ಕೊನೆಗೂ ಹೋರಾಟ ಯಶಸ್ಸು ಸಾಧಿಸಿದ್ದು, ಹೊರಾಟದ ದಿಕ್ಕು ತಪ್ಪಿಸಲು ಪ್ರಯತ್ನಿಸಿದವರಿಗೆ ಮುಖಭಂಗವಾಗಿದೆ.

Leave a Reply