ಎಡಕಲ್ಲು‌ ಗುಡ್ಡ ಖ್ಯಾತಿಯ ಚಂದ್ರಶೇಖರ್ ಇನ್ನಿಲ್ಲ

ಎಡಡಕಲ್ಲು ಗುಡ್ಡದ ಚಿತ್ರದ ಖ್ಯಾತಿಯ ನಟ ಚಂದ್ರಶೇಖರ್ ಶನಿವಾರ ಕೆನಡಾದಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ನಮ್ಮ ಮಕ್ಕಳು‌ ಚಿತ್ರದಿಂದ ಚಿತ್ರರಂಗಕ್ಕೆ ಪ್ರವೇಶಿಸಿದ ಚಂದ್ರಶೇಖರ್, ಇತ್ತೀಚೆಗೆ ಮೂರು ಗಂಟೆ ಮೂವತ್ತು ದಿನ ಮೂವತ್ತು ನಿಮಿಷ ಚಿತ್ರದಲ್ಲಿ ಅಭಿನಯಿಸಿದ್ದರು. ಈವರೆಗೂ ಸುಮಾರು 60ಕ್ಕೂ‌ಹೆಚ್ಚು ಸಿನಿಮಾಗಳಲ್ಲಿ ಚಂದ್ರು ಅಭಿನಯಿಸಿದ್ದರು.

ಸಂಸ್ಕಾರ, ವಂಶವೃಕ್ಷ, ಒಂದೇ ರೂಪ ಎರಡು ಗುಣ, ಪೂರ್ವಪರ, ಎಡಕಲ್ಲು ಗುಡ್ಡದ ಮೇಲೆ ಸೇರಿದಂತೆ 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಎಡಕಲ್ಲು ಗುಡ್ಡದ ಮೇಲೆ ಎನ್ನು ಚಿತ್ರವೇ ಚಂದ್ರಶೇಖರ್ ಅವರಿಗೆ ಕಡೇಯ ಸಿನಿಮಾವಾಗಿದೆ.

ಚಂದ್ರು ಹಾಗೂ ಪುತ್ರಿ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ವಾಸವಾಗಿದ್ದರು. ಚಂದ್ರಶೇಖರ್ ಪತ್ನಿ ಕೆನೆಡಾದಲ್ಲಿ ಭರತನಾಟ್ಯ ಶಾಲೆ ನಡೆಸುತ್ತಿದ್ದು, ಕಳೆದ 10 ದಿನಗಳ ಹಿಂದಷ್ಟೇ ಚಂದ್ರಶೇಖರ್ ಕೆನಡಾಗೆ ತೆರಳಿದ್ದರು. ಚಿತ್ರರಂಗದಲ್ಲಿ ಕೆನಡಾ ಚಂದ್ರು ಎಂದೇ ಚಿತ್ರರಂಗದಲ್ಲಿ ಖ್ಯಾತಿ‌ ಪಡೆದಿದ್ದರು.

ಮೊದಲಿಗೆ ಕಾಲಿನಲ್ಲಿ ಬ್ಲಡ್ ಕ್ಲಾಟ್ ಆಗಿತ್ತು .ನಂತರ ಹೃದಯದಲ್ಲಿ ಬ್ಲಡ್ ಕ್ಲಾಟ್ ಕಾಣಿಸಿಕೊಂಡಿತ್ತು. ಚಿಕಿತ್ಸೆ ಫಲಕಾರಿ ಆಗದೆ ಕೆನಡಾದಲ್ಲೆ ಕೊನೆಯುಸಿರೆಳೆದರು. ಚಂದ್ರಶೇಖರ್ ಪತ್ನಿ‌ ಹಾಗೂ ಪುತ್ರಿ ತಾನ್ಯ ಅವರನ್ನು ಅಗಲಿದ್ದಾರೆ. ತಾನ್ಯ ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳವ‌ ಉದ್ದೇಶದಿಂದ ಭಾರತಕ್ಕೆ ಬಂದಿದ್ದರು. ಚಂದ್ರಶೇಖರ್ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

Leave a Reply