ಸಿದ್ದರಾಮಯ್ಯ ಪಾಕಿಸ್ತಾನದ ಏಜೆಂಟ್ ಎಂದ ಪ್ರಹ್ಲಾದ್ ಜೋಶಿ

 ಡಿಜಿಟಲ್ ಕನ್ನಡ ಟೀಮ್:

ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವತ್ತಿಗೂ ಪಾಕಿಸ್ತಾನದ ಪರ. ಪಾಕಿಸ್ತಾನದ ವಾದವನ್ನೇ ಬೆಂಬಲಿಸಿಕೊಂಡು ಬಂದವರು. ಪಾಕಿಸ್ತಾನದ ಏಜೆಂಟ್ ಎಂದು ಬಿಜೆಪಿ ಮುಖಂಡ, ಸಂಸದ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.

ಆರೆಸ್ಸೆಸ್, ಭಜರಂಗದಳ ಭಯೋತ್ಪಾದನೆ ಸಂಘಟನೆ ಎಂದು ಸಿದ್ದರಾಮಯ್ಯ ಬಣ್ಣಿಸಿದ್ದಾರೆ. ಬಹುಶಃ ಅವರ ಈ ವಾದಕ್ಕೆ ಪಾಕಿಸ್ತಾನದಲ್ಲಿ ಬೆಂಬಲ ಸಿಕ್ಕಿರಬೇಕು. ಅದಕ್ಕೆ ಯಾವಾಗಲೂ ಅವರು ಒಂದು ಕೋಮಿನ ಪರವಾಗಿಯೇ ಬ್ಯಾಟಿಂಗ್ ಆಡುತ್ತಿರುತ್ತಾರೆ ಎಂದು ಕೊಪ್ಪಳದಲ್ಲಿ ಮಾಧ್ಯಮದವರಿಗೆ ಬುಧವಾರ ತಿಳಿಸಿದರು.
ವೋಟ್ ಬ್ಯಾಂಕಿಗಾಗಿ ಸಿದ್ದರಾಮಯ್ಯ ಏನೂ ಬೇಕಾದರೂ ಮಾಡಲು ಸಿದ್ಧರಿದ್ದಾರೆ. ಮಹದಾಯಿ ವಿಚಾರದಲ್ಲಿ ಕೆಲವು ಕನ್ನಡಪರ ಸಂಘಟನೆಗಳನ್ನು ಎತ್ತಿಕಟ್ಟಿ ಹೋರಾಟ ಮಾಡಿಸುತ್ತಾರೆ. ಇಂಥ ಮುಖ್ಯಮಂತ್ರಿಯನ್ನು ಮೊದಲು ಅಧಿಕಾರದಿಂದ ಕಿತ್ತೊಗೆಯಬೇಕು ಎಂದರು.
ಮಹದಾಯಿ ಬಂದ್ ಗೆ ಕರೆ ಕೊಟ್ಟ ವಾಟಾಳ್ ನಾಗರಾಜ್ ಗೆ ತಲೆಯಲ್ಲಿ ಮಿದುಳಿಲ್ಲ. ಮಹದಾಯಿ ಎಲ್ಲಿ ಹರಿಯುತ್ತೇ ಅನ್ನೋ ವಿಚಾರವೇ ಅವರಿಗೆ ಗೊತ್ತಿಲ್ಲ. ಕಾಂಗ್ರೆಸ್ ಏಜೆಂಟ್ ರೀತಿ ವರ್ತಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

Leave a Reply