ಬಿಗ್ ಬಾಸ್ ವಿನ್ನರ್ ಚಂದನ್ ಕಾಲೆಳೆಯಲು ಹೋಗಿ ಸಿಕ್ಕಾಪಟ್ಟೆ ಟ್ರೋಲ್ ಆದ ರಾಪರ್ ರಾಹುಲ್!

ಡಿಜಿಟಲ್ ಕನ್ನಡ ಟೀಮ್:

ಒಬ್ಬ ವ್ಯಕ್ತಿ ಬೆಳೆಯುತ್ತಿದ್ದಾನೆ ಅಂದ್ರೆ ಆತನ ಕಾಲೆಳೆಯೋರ ಸಂಖ್ಯೆ ಕಮ್ಮಿ ಇರುವುದಿಲ್ಲ. ಈಗ ಬಿಗ್ ಬಾಸ್ ವಿನ್ನರ್ ಹಾಗೂ ಕನ್ನಡ ರಾಪರ್ ಚಂದನ್ ಶೆಟ್ಟಿ ಅವರ ಕಾಲೆಳೆಯಲು ಹೋದ ಹೊಸ ರಾಪರ್ ಗಾಯಕ ರಾಹುಲ್ ಅಥವಾ ‘ಡಿಟ್-ಒ’ ಅಭಿಮಾನಿಗಳಿಂದ ಮಂಗಳಾರತಿ ಮಾಡಿಸಿಕೊಳ್ಳುತ್ತಿದ್ದಾನೆ.

ರಾಹುಲ್ ಡಿಟ್ಟೊ ಎಂಬ ರಾಪರ್ ಈಗ ‘ನಂಗನ್ಸಿದ್’ ಎಂಬ ಹಾಡೊಂದನ್ನು ಬಿಟ್ಟಿದ್ದು, ಅದರಲ್ಲಿ ಯಾರಿಗೋ ಟಾಂಗ್ ಕೊಡುವ ಪ್ರಯತ್ನ ಮಾಡಿರೋದು ಸ್ಪಷ್ಟವಾಗಿ ತಿಳಿಯುತ್ತದೆ. ಹಾಡಿನ ಆರಂಭದಲ್ಲಿ ಇದು ಯಾರಿಗೂ ಅನ್ವಯಿಸಲ್ಲ ಎಂದು ಹೇಳಿದರೂ ಹೆಸರು ಹೇಳದೇ ಚಂದನ್ ಶೆಟ್ಟಿಗೆ ಸವಾಲಾಕಿರೋದು ಸ್ಪಷ್ಟವಾಗಿ ಕಾಣುತ್ತದೆ.

ತಲೆಬುಡ ಗೊತ್ತಿಲ್ಲದಿದ್ದರು, ಬಾಯಿಗ್ ಬಂದಿದ್ ಹೇಳೊದಲ್ಲ ರಾಪ್.. ತಲೆ ಮೇಲೆ ತಲೆ ಬಿದ್ದರು ಕಾಪಿ ಮಾಡಬೇಡ ನನ್ ಸ್ಟೈಲ್ ಸೂಟ್ ಆಗೋದಿಲ್ಲ… ಚೀಪ್ ಟ್ರೀಕ್ಸ್ ಮಾಡಿಕೊಂಡು ಮೆರೆಯುತ್ತಿದ್ದಾರೆ… ಹೀಗೆ ಅನೇಕ ಸಾಲುಗಳು ಯಾವುದೋ ಒಬ್ಬ ವ್ಯಕ್ತಿಗೆ ಪರೋಕ್ಷವಾಗಿ ಸವಾಲಾಕುವಂತಿದೆ. ಅಲ್ಲದೆ CRAP ಎಂದು ಬರೆದು ಅದರಲ್ಲಿ  C ಅಕ್ಷರ ಗೀಚಿರುವುದು ಈ ಸಾಲುಗಳು ಚಂದನ್ ಗಾಗಿ ಹೇಳಿರೋದು ಎಂಬುದನ್ನು ಪುಷ್ಟಿಕರಿಸುತ್ತದೆ.

ಈ ಹಾಡಿನಲ್ಲಿ ರಾಹುಲ್ ಡಿಟ್ಟೊ ತನ್ನ ಕಲೆ, ಸಾಮರ್ಥ್ಯವನ್ನು ಚೆನ್ನಾಗಿಯೇ ಪ್ರದರ್ಶಿಸಿದ್ದರೂ ಅದರ ಹಿದಿನ ಉದ್ದೇಶ ಮಾತ್ರ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಪರಿಣಾಮ ಟ್ರಾಲ್ ಪೇಜ್ ಗಳ ತುಂಬಾ ಮಂಗಳಾರತಿ ಎತ್ತಿಸಿಕೊಳ್ಳುತ್ತಿದ್ದಾನೆ. ಈ ಹಾಡಿನ ಕುರಿತಾಗಿ ಮತ್ತೊಬ್ಬ ರಾಪರ್ ಹಾಗೂ ನಂಗನ್ಸಿದ್ ಹಾಡಿನ ನಿರ್ಮಾಪಕ ಅಲೋಕ್ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದು, ಇದು ಕಲಾವಿದನಿಗೆ ಹೇಳಿರುವುದಲ್ಲ. ರಾಪ್ ಗೊತ್ತಿಲ್ಲದೋರು ತಾನೊಬ್ಬ ರಾಪರ್ ಎಂದು ಹೇಳಿಕೊಳ್ಳುವವರಿಗೆ. ಚಂದನ್ ನನಗೆ ಮುಂಚೆ ಇಂದಲೂ ಗೊತ್ತು. ಅವರಿಗೆ ಹೇಳಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಒಂದು ವೇಳೆ ಚಂದನ್ ಗೆ ಈ ಹಾಡು ಸಂಬಂಧಿಸಿಲ್ಲವೆಂದಾದರೆ, ಹಾಡಿನಲ್ಲಿ ಹೇಳಿರುವ ಹಾಗೆ ಸದ್ಯ ಕನ್ನಡದಲ್ಲಿ ರಾಪ್ ಹಾಡಿನ ಮೂಲಕ ಮೆರೆಯುತ್ತಿರೋರು ಯಾರು? ಎಂದು ದುರ್ಬಿನ್ ಹಾಕಿ ನೋಡಿದರೂ ಚಂದನ್ ಹೊರತಾಗಿ ಮತ್ಯಾರೂ ಕಾಣುವುದಿಲ್ಲ. ಹೀಗಾಗಿ ಯುವ ಪ್ರತಿಭೆಗಳು ಪರಸ್ಪರ ಕಾಲೆಳೆದುಕೊಳ್ಳುವ ಬದಲು ತಮ್ಮಲ್ಲಿರುವ ಸ್ಪರ್ಧೆಯನ್ನು ಆರೋಗ್ಯಕರವಾಗಿ ಸ್ವೀಕರಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರೆ ಅವರೂ ಕೂಡ ಬೆಳೆಯುತ್ತಾರೆ. ಇಲ್ಲವಾದರೆ ಇವರ ಹಾಡು, ಪ್ರಯತ್ನಗಳೇ ಚೀಪ್ ಟ್ರಿಕ್ಸ್ ಎಂದು ಜನ ಉಗಿಯುತ್ತಾರೆ.

Leave a Reply