ಶ್ರೀರಾಮುಲು ಅವರನ್ನು ಉಪಾಹಾರಕ್ಕೆ ಕರೆದ ಅಮೆರಿಕ ಅಧ್ಯಕ್ಷ ಟ್ರಂಪ್!

ಡಿಜಿಟಲ್ ಕನ್ನಡ ಟೀಮ್:

ನಂಬಿದರೆ ನಂಬಿ, ಬಿಟ್ಟರೆ ಬಿಡಿ!

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜತೆ ಉಪಾಹಾರ ಮಾಡಲು ಬಿಜೆಪಿ ಸಂಸದ ಶ್ರೀರಾಮುಲು ಅವರಿಗೆ  ಆಹ್ವಾನ ಬಂದಿದೆ!!
ಬಳ್ಳಾರಿ ಗಣಿ ಬಳಗದ ಶ್ರೀರಾಮುಲುವಿಗೂ ಅಮೆರಿಕ ಅಧ್ಯಕ್ಷರಿಗೂ ಏನು ಸಂಬಂಧ ಎಂದು ಪ್ರಶ್ನೆ ಮಾಡಬೇಡಿ. ಈ ಸಂಗತಿ ಶೇಕಡಾ ನೂರರಷ್ಟು ನಿಜ. ಫೆ. 9 ರಂದು ವಾಷಿಗ್ಟಂನ್ ನಲ್ಲಿ ನಡೆಯುವ 66ನೇ ರಾಷ್ಟ್ರೀಯ ಪ್ರಾರ್ಥನಾ ಉಪಾಹಾರ ಕೂಟದಲ್ಲಿ ಟ್ರಂಪ್ ಜತೆ ಪಾಲ್ಗೊಳ್ಳುವಂತೆ ಶ್ರೀರಾಮುಲು ಅವರಿಗೆ ಆಹ್ವಾನ ಬಂದಿದೆ. ಈ ವಿಷಯವನ್ನು ಸ್ವತಃ ಶ್ರೀರಾಮುಲು ಅವರೇ ಮಾಧ್ಯಮದವರಿಗೆ ಖಚಿತಪಡಿಸಿದ್ದಾರೆ.
ಅಮೆರಿಕ ಶ್ರೀರಾಮುಲು ಅವರಿಗೆ ಹೊಸದೇನೂ ಅಲ್ಲ. ಹಲವಾರು ಬಾರಿ ಹೋಗಿ ಬಂದಿದ್ದಾರೆ. ಆದರೆ ಅಲ್ಲಿನ ಅಧ್ಯಕ್ಷರ ಜತೆ ಉಪಾಹಾರಕ್ಕೆ ಆಹ್ವಾನ ಬಂದಿರುವುದು ಇದೇ ಮೊದಲು. ಅಂದಹಾಗೆ ಸಂಸತ್ತಿನ ಅಧಿವೇಶನ ನಡೆಯುತ್ತಿರುವುದರಿಂದ ಪಕ್ಷದ ಮುಖಂಡರು ಅನುಮತಿ ಕೊಟ್ಟರೆ ಮಾತ್ರ ಅವರು ಟ್ರಂಪ್ ಜತೆ ಉಪಾಹಾರ ಮಾಡಲು ಹೋಗುತ್ತಾರಂತೆ. ಇಲ್ಲದಿದ್ದರೆ ಇಲ್ಲ.
ಅಂದಹಾಗೆ, ಶ್ರೀರಾಮುಲು ಅವರ ಜತೆ ಉಪಾಹಾರ ಮಾಡುವ ಅದೃಷ್ಟ ಡೋನಾಲ್ಟ್ ಟ್ರಂಪ್ ಅವರಿಗೆ ಇದೆಯೋ ಇಲ್ಲವೋ ನೋಡಬೇಕು!

Leave a Reply