ಚಂದನ್ ಶೆಟ್ಟಿ- ಅಗ್ನಿಸಾಕ್ಷಿಯ ವೈಷ್ಣವಿ ಜತೆ ಎಂಗೇಜ್ಮೆಂಟ್ ನಿಜಾನಾ?

ಡಿಜಿಟಲ್ ಕನ್ನಡ ಟೀಮ್:

ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿಗೂ ಅಗ್ನಿಸಾಕ್ಷಿ ಸನ್ನಿದಿ ಖ್ಯಾತಿಯ ವೈಷ್ಣವಿಗೂ ಎಂಗೇಜ್ಮೆಂಟ್ ಅಂತೇ… ಹೀಗೊಂದು ಗಾಸಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈ ಸುದ್ದಿ ನಿಜಾನಾ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು. ಕನ್ನಡ ರಾಪ್ ಸಾಂಗ್ ಮೂಲಕ ಯುವಕರ ಮನ ಗೆದ್ದಿದ್ದ ಚಂದನ್ ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರತಿಭೆಯಿಂದ ಎಲ್ಲಾ ವರ್ಗದ ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ಇತ್ತ ವೈಷ್ಣವಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಅಗ್ನಿಸಾಕ್ಷಿ ಧಾರವಾಯಿ ಮೂಲಕ ಮನೆ ಮಾತಾಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಶೃತಿ ಪ್ರಕಾಶ್ ಅವರಿಗೆ ಲೈನ್ ಹೊಡೆಯುತ್ತಿದ್ದ ಚಂದನ್ ಜತೆಗೆ ಈಗ ವೈಷ್ಣವಿ ಹೆಸರು ಕೇಳಿ ಬರುತ್ತಿರೋದು ಅಚ್ಚರಿ ಮೂಡಿಸಿದೆ. ಇವರಿಬ್ಬರಿಗೂ ಹೇಗೆ ಲಿಂಕ್ ಆಯ್ತು, ಇವರು ಎಂಗೇಜ್ ಆಗ್ತಿರೋದು ಸತ್ಯನಾ, ಇದು ಮನೆಯವರ ಆಯ್ಕೆಯೋ ಅಥವಾ ಅವರೇ ಆರಿಸಿಕೊಂಡಿದ್ದಾರೋ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿರೋ ಪ್ರಶ್ನೆಯಾಗಿವೆ.

ಆದರೆ ಮೂಲಗಳ ಮಾಹಿತಿ ಪ್ರಕಾರ ಟಿವಿ ವಾಹಿನ ಕಾರ್ಯಕ್ರಮದಲ್ಲಿ ಇವರಿಬ್ಬರ ಮದುವೆಯಾಗಲಿದ್ದು, ಇದೊಂದು ರೀಲ್ ಮದುವೆಯೇ ಹೊರತು, ನಿಜವಾದ ಮದುವೆ ಅಲ್ಲ.

Leave a Reply