ಆಧಾರ್ ವಿರುದ್ಧದ ಹೋರಾಟಕ್ಕೆ ಮೋದಿ ಹೇಳಿಕೆಯನ್ನೇ ಅಸ್ತ್ರವಾಗಿ ಬಳಸಿದ ಮಮತಾ!

ಡಿಜಿಟಲ್ ಕನ್ನಡ ಟೀಮ್:

ಆಧಾರ್ ಕಾರ್ಡ್ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಸಮರ ಸಾರಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ಈ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂದಳು ಡಾವೋಸ್ ನಲ್ಲಿ ನಡಿದ ಭಾಷಣದ ಹೇಳಿಕೆಯನ್ನೇ ಅಸ್ತ್ರವಾಗಿ ಬಳಸಿದ್ದಾರೆ.

ಹೌದು, ಕಳೆದ ತಿಂಗಳು ಡಾವೋಸ್ ನಲ್ಲಿ ನಡೆದ ಆರ್ಥಿಕ ಶೃಂಗ ಸಭೆ ವೇಳೆ ಮಾತನಾಡಿದ ಮೋದಿ ಒಂದು ಮಾತನ್ನು ಹೇಳಿದ್ದರು. ಆ ಮಾತು ಈಗ ಮಮತಾ ಬ್ಯಾನರ್ಜಿಗೆ ಅಸ್ತ್ರವಾಗಿದೆ. ಮೋದಿ  ಹೇಳಿದ ಹೇಳಿಕೆ ಯಾವುದು ಎಂದರೆ…

‘ಡಾಟಾವನ್ನು ಯಾರು ನಿಯಂತ್ರಿಸುತ್ತಾರೋ ಅವರು ಬಲಶಾಲಿಯಾಗಲಿದ್ದು, ವಿಶ್ವವನ್ನು ಕಟ್ಟಬಲ್ಲ’ ಎಂಬ ಸಾಲನ್ನು ಹೇಳಿದ್ದರು. ಈಗ ಅದೇ ಮಾತನ್ನು ಇಟ್ಟುಕೊಂಡು, ‘ಪ್ರಧಾನಿ ಮೋದಿ ಆಧಾರ್ ಕಾರ್ಡ್ ಮೂಲಕ ಜನರ ಡಾಟಾವನ್ನು ಪಡೆದು ಅವರನ್ನು ನಿಯಂತ್ರಿಸಲು ಮೋದಿ ಮುಂದಾಗಿದ್ದಾರೆ’ ಎಂದು ಪಶ್ಚಿಮ ಬಂಗಾಳ ಸರ್ಕಾರದ ಪರ ವಾದ ಮಂಡಿಸುತ್ತಿರುವ ಕಾಂಗ್ರೆಸ್ ನಾಯಕ ಹಾಗೂ ವಕೀಲ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐದು ಸದಸ್ಯರ ಪೀಠದ ಮುಂದೆ ವಾದ ಮಂಡಿಸಿದ್ದಾರೆ.

Leave a Reply