ಪ್ಲಾಸ್ಟಿಕ್ ಆಧಾರ್ ಕಾರ್ಡ್ ನಿಂದ ಮಾಹಿತಿ ಸೋರಿಕೆ ಸಾಧ್ಯತೆ, ಜನರಿಗೆ ಯುಐಡಿಎಐ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್:

ಅಧಿಕೃತವಾಗಿ ಆಧಾರ್ ಕೇಂದ್ರಗಳಲ್ಲಿ ನೀಡುವ ಕಾರ್ಡ್ ಗಳ ಹೊರತಾಗಿ ಖಾಸಗಿ ಅಂಗಡಿಗಳಲ್ಲಿ ಮಾಡಿಕೊಡುವ ಪ್ಲಾಸ್ಟಿಕ್ ಆಧಾರ್ ಸ್ಮಾರ್ಟ್ ಕಾರ್ಡ್ ಅಥವಾ ಲ್ಯಾಮಿನೇಟೆಡ್ ಕಾರ್ಡ್ ಗಳನ್ನು ಬಳಸದಂತೆ ಭಾರತೀಯ ವಿಶೇಷ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಸಾರ್ವಜನಿಕರಿಗೆ ಎಚ್ಚರಿಕೆ ರವಾನಿಸಿದೆ.

ಆಧಾರ್ ಮಾಹಿತಿ ಸೋರಿಕೆ, ದುರುಪಯೋಗದ ಕುರಿತಾಗಿ ಸಾಕಷ್ಟು ಚರ್ಚೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಯುಐಡಿಎಐ ಈ ಎಚ್ಚರಿಕೆ ರರವಾನಿಸಿರೋದು ಮಹತ್ವ ಪಡೆದುಕೊಂಡಿದೆ. ಪಿವಿಸಿ ಆಧಾರ್ ಸ್ಮಾರ್ಟ್ ಕಾರ್ಡ್ ಗಳಳು ಕೆಲವೊಮ್ಮೆ ಕಾರ್ಯ ನಿರ್ವಹಿಸುವುದಿಲ್ಲ. ಇದರಲ್ಲಿ ಮುದ್ರಿತವಾಗುವ ಕ್ಯೂಆರ್ ಕೋಡ್ ಕೆಲಸ ಮಾಡದಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಲ್ಲದೆ ಇದರ ಬೆಲೆ 50-300 ವರೆಗೂ ಕೆಲವು ಕಡೆ ಅದಕ್ಕಿಂತಲೂ ಹೆಚ್ಚಿನ ಕಡೆ ಇನ್ನು ಹೆಚ್ಚಿನ ಶುಲ್ಕ ಪಡೆಯಲಾಗುತ್ತದೆ. ಇನ್ನು ಖಾಸಗಿ ಅಂಗಡಿಗಳಲ್ಲಿ ಆಧಾರ್ ಕಾರ್ಡ್ ಮಾಡಿಸುವಾಗ ಮಾಹಿತಿ ಸೇರಿಕೆಯಾಗುವ ಸಾಧ್ಯತೆಯೂ ಇದ್ದು, ಇದಕ್ಕಾಗಿ ಕೇವಲ ಆಧಾರ್ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಪಡೆಯಬೇಕು. ಅದರಲ್ಲೂ ಕಾಗದ ರೂಪದಲ್ಲಿರುವ ಆಧಾರ್ ಇಟ್ಟುಕೊಳ್ಳುವುದು ಉತ್ತಮ ಎಂದು ಯುಐಡಿಎಐ ಸಿಇಒ ಅಜಯ್ ಭೂಷಣ ಪಾಂಡೆ ತಿಳಿಸಿದ್ದಾರೆ.

Leave a Reply