ಭಾರತ- ಚೀನಾ ನಡುವೆ ಪ್ರತಿಷ್ಠೆಯ ಸಮರ ಎಂಬಂತೆ ಬಿಂಬಿತವಾಗ್ತಿದೆ ಮಾಲ್ಡೀವ್ಸ್ ಅಸ್ಥಿರತೆ

ಡಿಜಿಟಲ್ ಕನ್ನಡ ಟೀಮ್:

ಮಾಲ್ಡೀವ್ಸ್ ನಲ್ಲಿ ಉದ್ಭವಿಸಿರುವ ರಾಜಕೀಯ ಅಸ್ಥಿರತೆ ಈಗ ಏಷ್ಯಾದ ಪ್ರಬಲ ರಾಷ್ಟ್ರಗಳಾದ ಭಾರತ ಮತ್ತು ಚೀನಾ ನಡುವೆ ಪ್ರತಿಷ್ಠೆಯ ಸಮರವಾಗಿ ಬಿಂಬತವಾಗುತ್ತಿದೆ.

ಮಾಲ್ಡೀವ್ಸ್ ಅಸ್ಥಿರತೆಗೂ ಭಾರತ ಮತ್ತು ಚೀನಾ ನಡುವೆ ಪ್ರತಿಷ್ಠೆಯ ವಿಷಯ ಬರಲು ಕಾರಣ ಏನು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಇದಕ್ಕೆ ಕಾರಣವೂ ಇದೆ. ಮಾಲ್ಡೀವ್ಸ್ ನಲ್ಲಿ ಸದ್ಯ ಮಾಜಿ ಅಧ್ಯಕ್ಷ ಅಬ್ದುಲ್ ಗಯೂಮ್ ಸೇರಿದಂತೆ ಅನೇಕ ರಾಜಕಾರಣಿಗಳು ಹಾಗೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನು ಬಂಧಿಸಲಾಗಿದೆ. ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರ ಈ ಸರ್ವಾಧಿಕಾರಿ ಧೋರಣೆ ವಿರುದ್ಧ ಮಾಜಿ ಅಧ್ಯಕ್ಷ ಮೊಹಮದ್ ನಶೀದ್ ವಿರೋಧಿಸಿದ್ದು, ಮಾಲ್ಡೀವ್ಸ್ ಮಿತ್ರ ರಾಷ್ಟ್ರ ಭಾರತ ಈ ವಿಚಾರವಾಗಿ ಮಧ್ಯ ಪ್ರವೇಶಿಸಬೇಕು. ತನ್ನ ರಾಯಭಾರಿ ಹಾಗೂ ಮಿಲಿಟರಿಯನ್ನು ಕಳುಹಿಸಿ ಬಂಧಿತರಾಗಿರುವ ನ್ಯಾಯಾಧೀಶರು ಹಾಗೂ ರಾಜಕಾರಣೆಗಳಿಗೆ ಸ್ವಾತಂತ್ರ್ಯ ನೀಡಿದ್ದರು. ಚೀನಾದ ವಿರೋಧದ ನಡುವೆಯೂ ನಶೀದ್ ಅವರ ಈ ಹೇಳಿಕೆ ಸಾಕಷ್ಟು ಗಮನ ಸೆಳೆದಿತ್ತು.

ಆದರೆ, ಈಗ ಯಮೀನ್ ಮಾಲ್ಡೀವ್ಸ್ ನ ಮಿತ್ರ ರಾಷ್ಟ್ರಗಳಿಗೆ ಪತ್ರ ಬರೆದಿದ್ದು, ಸಹಾಯಬೇಡಿದೆ. ಯಮೀನ್ ಅವರು ಚೀನಾ, ಪಾಕಿಸ್ತಾನ ಹಾಗೂ ಸೌದಿ ಅರೆಬಿಯಾಗೆ ಮಿತ್ರರಾಷ್ಟ್ರಗಳ ಸ್ಥಾನ ನೀಡಿದ್ದು, ಭಾರತವನ್ನು ಕಡೆಗಣಿಸಿದೆ. ನಶೀದ್ ಅವರ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಚೀನಾ, ಮಾಲ್ಡೀವ್ಸ್ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಮುದಾಯ ಜವಾಬ್ದಾರಿಯಿಂದ ವರ್ತಿಸಿ, ಅಲ್ಲಿನ ಸಾರ್ವಭೌಮತೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದು ಹೇಳಿ ಭಾರತದ ಮಿಲಿಟರಿ ಹಸ್ತಕ್ಷೇಪವನ್ನು ವಿರೋಧಿಸಿತ್ತು. ಈಗ ಯಮೀನ್ ಚೀನಾಗೆ ಸಹಾಯ ಕೋರಿ ಪತ್ರ ಬರೆದಿದ್ದು, ಚೀನಾ ಯಾವ ರೀತಿ ಹೆಜ್ಜೆ ಇಡಲಿದೆ ಎಂಬ ಕುತೂಹಲ ಮೂಡಿಸಿದೆ.

Leave a Reply