ರಮ್ಯಾ ಕೆಚ್ಚೆದೆ ಹೆಣ್ಣು ಅನ್ನೋದನ್ನು ಸಾರುತ್ತಿದ್ದಾರಾ?

ಡಿಜಿಟಲ್ ಕನ್ನಡ ಟೀಮ್:

ನಟಿ ರಮ್ಯಾ.. ಅಲ್ಲ ರಾಜಕಾರಣಿ ರಮ್ಯಾ ಇತ್ತೀಚಿಗೆ ಭಾರೀ ಸುದ್ದಿ ಆಗ್ತಿದ್ದಾರೆ. ಕಾರಣ ಏನೇ ಇರಬಹುದು ರಮ್ಯಾ ವಿಚಾರಕ್ಕೆ ಬಂದು ನಿಲ್ಲುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಸಮಾವೇಶದಲ್ಲಿ ಹೇಳಿದ್ದ ಟಾಪ್ ಹೇಳಿಕೆಯನ್ನು ಉಲ್ಟಾ ಮಾಡಿ ಪಾಂಟ್ ಎಂದಿದ್ದ ರಮ್ಯಾ ಟ್ವೀಟ್ ಭಾರೀ ಪ್ರಚಾರ ಪಡೆದಿತ್ತು. ನಟ ಜಗ್ಗೇಶ್ ಸೇರಿದಂತೆ ಹಲವರು ಕಿಡಿಕಾರಿದ್ರು. ಆದ್ರೆ ರಮ್ಯಾ ಎಲ್ಲವನ್ನೂ ನಿಭಾಯಿಸಿದ ರೀತಿ ಹಿರಿಯ ನಾಯಕರನ್ನೂ ದಂಗುಬಡಿಸುವಂತಿದೆ. ಯಾಕಂದ್ರೆ ಮೊನ್ನೆ ಉತ್ತರ ಕೊಟ್ಟಿರುವ ರಮ್ಯಾ, ನಾನು ಮೋದಿ ಹೇಳಿದ್ದ ಮಾತುಗಳನ್ನೆ ರಿವರ್ಸ್ ಆರ್ಡರ್ ನಲ್ಲಿ ಹೇಳಿದ್ದೇನೆ ಹೊರತು ಬೇರೇನು ಇಲ್ಲ. ನೀವು ನಿಮಗೆ ಇಷ್ಟ ಬಂದ ರೀತಿಯಲ್ಲಜ ಅರ್ಥ ಮಾಡಿಕೊಂಡರೆ ನನ್ನ ತಪ್ಪಲ್ಲ ಎಂದಿದ್ದರು.

ಶ್ರಮವಿಲ್ಲದೆ ಪಲ್ಲಂಗ ಏರಿದವರು, ಕ್ಯಾಚ್ ಹಾಕಿ ಆಕ್ಟ್ ಗಿಟ್ಟಿಸಿದವರು, ಮೇಲೇರಲು ಹೈಕಮಾಂಡ್ ಗೆ ಕ್ಯಾಚ್ ಹಾಕಿದವರು ಅಂತ ತುಂಬಾ ಕೀಳುಮಟ್ಟದಲ್ಲಿ ವಾಗ್ದಾಳಿ ಮಾಡಿದ್ದ ಜಗ್ಗೇಶ್ ಬಗ್ಗೆ ರಮ್ಯಾ ಬುದ್ಧಿವಂತಿಕೆ ಮೆರೆದಿದ್ದಾರೆ. ಜಗ್ಗೇಶ್ ತುಂಬಾ ದೊಡ್ಡ ನಟರು ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಜಗ್ಗೇಶ್ ಹೇಳಿಕೆಯನ್ನು ಕಸದ ಬುಟ್ಟಿಗೆ ಹಾಕಿದ್ದೇನೆ ಎನ್ನುವ ಮೂಲಕ ಜಗ್ಗೇಶ್ ನನಗೆ ಸರಿಸಮನಾದ ನಾಯಕನಲ್ಲ ಎಂದು ಪರೋಕ್ಷವಾಗಿಯೇ ಚುಚ್ಚಿದ್ದಾರೆ.

ನಟಿಯಾಗಿದ್ದ ರಮ್ಯಾ ಅಚಾನಕ್ ಆಗಿ ಕಾಂಗ್ರೆಸ್ ಪಕ್ಷದ ಮೂಲಕ ಸಂಸದೆಯಾಗಿ ಆಯ್ಕೆಯಾದವರು. ಬಳಿಕ ತಮ್ಮ ವೃತ್ತಿಯಾದ ನಟನೆಯನ್ನು ಬಿಟ್ಟು ಪೂರ್ಣ ಪ್ರಮಾಣದ ರಾಜಕಾರಣಿ ಆಗಿದ್ದಾರೆ. ಬೇರೆಲ್ಲಾ ನಾಯಕರ ರೀತಿ ಜನಪ್ರತಿನಿಧಿಯಾಗಿ ಜನರ ಕೆಲಸ ಮಾಡುತ್ತಾ ಜನರ ಮನಸ್ಸು ಗೆದ್ದು, ಸ್ವಲ್ಪ ಹಣಾ ಮಾಡಿದ್ರೋ ಇಲ್ಲವೋ ಗೊತ್ತಿಲ್ಲ. ಆದರೆ ವಿದೇಶಕ್ಕೆ ತೆರಳಿ ತರಬೇತಿ ಪಡೆದು ರಾಜಕಾರಣದ ಪಟ್ಟುಗಳನ್ನು ತಿಳಿದುಕೊಂಡು ಬಂದರು. ಅದೇ ಅವರನ್ನು ಹೈಕಮಾಂಡ್ ಸನಿಹಕ್ಕೆ ಬಂದು ನಿಲ್ಲುವಂತೆ ಮಾಡಿತು. ಇದೀಗ ಸಾಮಾಜಿಕ ಜಾಲ ತಾಣದ ಎಐಸಿಸಿ ಆಧ್ಯಕ್ಷೆಯಾಗಿರುವ ರಮ್ಯಾ ರಾಜ್ಯಕ್ಕಿಂತ ಹೆಚ್ಚಾಗಿ ರಾಷ್ಟ್ರ ರಾಜಕಾರಣದಲ್ಲೇ ಉಳಿದುಕೊಂಡಿದ್ದಾರೆ. ವಿರೋಧಿಗಳು ಸೇರಿದಂತೆ ಸ್ವಪಕ್ಷದಲ್ಲೇ ಕಾಲೆಳೆಯುವ ಮಂದಿಗೂ ರೆಬೆಲ್ ಆಗಿಯೇ ಉತ್ತರ ನೀಡುತ್ತಾ ನಾನು ಕೆಚ್ಚೆದೆ ಹೆಣ್ಣು, ರಾಜಕೀಯ ನನಗೂ ಗೊತ್ತಿದೆ ಅನ್ನೋದನ್ನು ತೋರಿಸುತ್ತಿದ್ದಾರೆ. ಆದ್ರೆ ಅಖಾಡ ರಾಜಕೀಯ ಒಂದನ್ನು ಕರಗತ ಮಾಡಿಕೊಂಡ್ರೆ ರಮ್ಯಾಕಾಲ ಬರೋದ್ರಲ್ಲಿ ಯಾವುದೇ ಅನುಮಾನವಿಲ್ಲ. ನೀವೇನಂತೀರಿ..?

Leave a Reply