‘ನಾಲಿಗೆ ಹರಿಬಿಡಬೇಡಿ!’ ರಾಜ್ಯ ಬಿಜೆಪಿ ನಾಯಕರಿಗೆ ಬಿಎಸ್ ವೈ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಬಿಜೆಪಿ ನಾ.ಕರು ವಿವಾದಾತ್ಮಕ  ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿರೋ ಚುನಾವಣಾ ಪ್ರಚಾರದ ವೇಳೆ ತಂಡಕ್ಕೆ ಮುಜುಗರಕ್ಕೀಡು ಮಾಡಿದೆ. ಇಂತಹ ಪರಿಸ್ಥಿತಿಯನ್ನು ತಡೆಯಲು ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ತಮ್ಮ ಪಕ್ಷದ ನಾಯಕರಿಗೆ ನಾಲಿಗೆ ಹರಿಬಿಡದಂತೆ ಎಚ್ಚರಿಕೆ ರವಾನಿಸಿದ್ದಾರೆ.

ಹೌದು, ಸದ್ಯ ಅನಂತ ಕುಮಾರ್ ಸೇರಿದಂತೆ ಕೆಲವು ನಾಯಕರುಗಳು ಸಾರ್ವಜನಿಕ ಸಭೆಗಳಲ್ಲಿ ನೀಡುತ್ತಿರುವ ಹೇಳಿಕೆ ಪಕ್ಷಕ್ಕೆ ಲಾಭ ತರುವುದಕ್ಕಿಂತ ನಷ್ಟ ಅನುಭವಿಸುವಂತೆ ಮಾಡುತ್ತಿವೆ. ಪ್ರಸ್ತುತ  ರಾಜ್ಯ ಪ್ರವಾಸದಲ್ಲಿ ನಿರತರಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಟೀಕೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರತಿಕ್ರಿಯೆ ನೀಡಿದ ಬಿಎಸ್ ವೈ, ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳುತ್ತಲೇ ತಮ್ಮ ಪಕ್ಷದ ನಾಯಕರಿಗೂ ಎಚ್ಚರಿಕೆ ರವಾನಿಸಿರೋದು ಹೀಗೆ… ‘ಧಾರ್ಮಿಕ ಧ್ರುವೀಕರಣದಿಂದ ರಾಜಕೀಯ ಲಾಭ ಪಡೆಯುವ ಉದ್ದೇಶ ಬಿಜೆಪಿಗೆ ಇಲ್ಲ. ಈ ಕೆಲಸವೇನಿದ್ದರೂ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ್ದು. ರಾಜ್ಯದಲ್ಲಿ ಇಲ್ಲಿಯವರೆಗೂ ಹಿಂದೂ ಸಂಘಟನೆಗಳ 24 ಕಾರ್ಯಕರ್ತರ ಹತ್ಯೆಯಾಗಿದೆ. ಇಲ್ಲಿನ ಕಾಂಗ್ರೆಸ್ ಸರ್ಕಾರ ಯಾವ ಪ್ರಕರಣದಲ್ಲೂ ಸೂಕ್ತ ಕ್ರಮ ಕೈಗೊಂಡಿಲ್ಲ. ತಾನು ಜಾತ್ಯತೀತವಾದಿ ಎನ್ನುತ್ತಿರುವ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಕೋಮುವಾದಿ ರಾಜಕಾರಣ ಮಾಡುತ್ತಿದೆ. ಅತ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣೆ ಹತ್ತಿರಕ್ಕೆ ಬರುತ್ತಲೇ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ರಾಹುಲ್ ಗಾಂಧಿ ಕೇವಲ ಎಲೆಕ್ಷನ್ ಹಿಂದೂ ಆಗಿದ್ದಾರೆ.’

‘ಕೋಮು ಸೌಹಾರ್ದ ಕೆರಳಿಸುವ ಹೇಳಿಕೆಗಳನ್ನು ನೀಡದಂತೆ ಬಿಜೆಪಿ ಮುಖಂಡರಿಗೆ ಎಚ್ಚರಿಕೆ ನೀಡಲಾಗಿದೆ. ಸಮುದಾಯಗಳ ನಡುವೆ ಕೋಮು ಭಾವನೆ ಕೆರಳಿಸುವ ಹೇಳಿಕೆ ನೀಡಬಾರದು. ಅನಂತ್ ಕುಮಾರ್ ಹೆಗ್ಡೆಯಂತಹ ನಾಯಕರ ಹೇಳಿಕೆಗಳನ್ನು ನಾನು ಸಮರ್ಥಿಸುವುದಿಲ್ಲ, ಅವರಿಗೆ ಈ ಬಗ್ಗೆ ಸಲಹೆ ನೀಡಲಾಗಿದ್ದು, ಈಗಾಗಲೇ ತಮ್ಮ ಹೇಳಿಕೆ ಸಂಬಂಧ ಸಂಸತ್ ನಲ್ಲಿ ಕ್ಷಮೆಯಾಚಿಸಿದ್ದಾರೆ. ಯಾರೊಬ್ಬರು ಕೋಮು ಸೌಹಾರ್ದತೆ ಕೆರಳಿಸುವ ಹೇಳಿಕೆ ನೀಡಬಾರದು. ನಾನು ಅಂತಹ ಯಾವುದೇ ಹೇಳಿಕೆಗಳನ್ನು ಒಪ್ಪುವುದಿಲ್ಲ. ಅನಂತ ಕುಮಾರ್ ಹೆಗಡೆಗೆ ಈ ವಿಚಾರವಾಗಿ ಸಲಹೆ ನೀಡಿದ್ದೇನೆ.’

Leave a Reply