ಭಾರತದಲ್ಲಿರೋ ಮುಖ್ಯಮಂತ್ರಿಗಳ ಬಂಡವಾಳ ನೀವೇ ನೋಡಿ!

ಡಿಜಿಟಲ್ ಕನ್ನಡ ಟೀಮ್:

ನೀನು ನಂಬುತ್ತೀರೋ ಬಿಡುತ್ತಿರೋ, ಭಾರತದಲ್ಲಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ಶೇ.35ರಷ್ಟು ಸಿಎಂಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಹೌದು, ಅಸೋಸಿಯೇಶನ್ ಫಾರ್ ಡೆಮಾಕ್ರಾಟಿಕ್ ರೀಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ಎನ್ಇಡಬ್ಲ್ಯೂ) ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡೆವಿಟ್ ಗಳನ್ನು ಪರಿಶೀಲಿಸಿ ವರದಿ ಸಿದ್ಧ ಪಡಿಸಿದ್ದು, ಅದರ ಪ್ರಕಾರ ದೇಶದ 31 ಮುಖ್ಯಮಂತ್ರಿಗಳ ಪೈಕಿ ಶೇ.35 ರಷ್ಟು ಅಂದರೆ, 11 ಮುಖ್ಯಮಂತ್ರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಅದರಲ್ಲಿ ಶೇ.26 ರಷ್ಟು, ಪ್ರಕರಣಗಳು ಕೊಲೆ, ಕೊಲೆ ಪ್ರಯತ್ನ, ಮೋಸದಂತಹ ಗಂಭೀರ ಪ್ರಕರಣಗಳು ದಾಖಲಾಗಿವೆ.

ಇನ್ನು ದೇಶದಲ್ಲಿರುವ ಶೇ.81 ರಷ್ಟು ಅಂದರೆ 25 ಮುಖ್ಯಮಂತ್ರಿಗಳು ಕೋಟ್ಯಧಿಪತಿಗಳು. ಅದರಲ್ಲಿ ಇಬ್ಬರು ಶತಕೋಟಿ ಆಸ್ತಿ ಹೊಂದಿದ್ದರೆ, ಮುಖ್ಯಮಂತ್ರಿಗಳ ಒಟ್ಟು ಆಸ್ತಿ ಸರಾಸರಿ 16.18 ಕೋಟಿ ಸಾಮರ್ಥ್ಯವಿದೆ. ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (₹ 177) ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಅರುಣಾಚಲ ಪ್ರದೇಶದ ಪೇಮಾ ಖಂಡು (₹ 129) ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು ತ್ರಿಪುರಾ ಮುಖ್ಯಮಂತ್ರಿ ಮಾಣಿಕ್  ಸರ್ಕಾರ್ ಕೇವಲ ₹ 27 ಲಕ್ಷ ಮೌಲ್ಯದಷ್ಟು ಆಸ್ತಿ ಹೊಂದಿದ್ದು ಕೊನೆಯಸ್ಥಾನದಲ್ಲಿದ್ದಾರೆ.

ಇನ್ನು ಮುಖ್ಯಮಂತ್ರಿಗಳ ಶಿಕ್ಷಣ ಅರ್ಹತೆ ನೋಡುವುದಾದರೆ, 31 ಸಿಎಂಗಳ ಪೈಕಿ ಶೇ.10 ರಷ್ಟು ಮಂದಿ 12ನೇ ತರಗತಿ ಪಾಸಾಗಿದ್ದರೆ,ಶೇ.39ರಷ್ಟು ಸಿಎಂಗಳು ಪದವಿ ಪಡೆದಿದ್ದಾರೆ. ಇನ್ನು ಶೇ.32ರಷ್ಟು ವೃತ್ತಿಪರ ಪದವಿಧವಿದರರಾದರೆ, ಶೇ.16 ರಷ್ಟು ಸ್ನಾತಕೋತ್ತರ ಪದವಿ ಹಾಗೂ ಶೇ.3 ರಷ್ಟು ಡಾಕ್ಟರೇಟ್ ಮುಗಿಸಿದ್ದಾರೆ.

Leave a Reply