ಭಾರತದ ಮೇಲೆ ದಾಳಿ ಮುಂದುವರಿಸಲಿವೆ ಪಾಕ್ ಉಗ್ರ ಸಂಘಟನೆಗಳು: ಅಮೆರಿಕ ಗುಪ್ತಚರ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್:

ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಕಳೆದ ಒಂದು ವಾರದಿಂದ ಉಗ್ರರ ದಾಳಿ ಹೆಚ್ಚಾಗಿರುವ ಬೆನ್ನಲ್ಲೇ ಈಗ ಅಮೆರಿಕ ಗುಪ್ತಚರ ಇಲಾಖೆ ಭಾರತಕ್ಕೆ ಎಚ್ಚರಿಕೆ ರವಾನಿಸಿದೆ. ಅದೇನೆಂದರೆ, ಪಾಕಿಸ್ತಾನ ಹಫೀಜ್ ಸಯೀದ್ ನನ್ನು ಉಗ್ರ ಎಂದು ಪರಿಗಣಿಸಿದ್ದರೂ ಪಾಕ್ ಉತ್ತೇಜಿತ ಉಗ್ರ ಸಂಘಟನೆಗಳು ಭಾರತದ ಮೇಲೆ ದಾಳಿ ಮುಂದುವರಿಸಲಿವೆ.

ಕಳೆದ ಒಂದು ವಾರದಲ್ಲಿ ಜಮ್ಮು ಕಾಶ್ಮೀರದ ಸುಂಜ್ವಾನ್ ಹಾಗೂ ಶ್ರೀನಗರ ಪ್ರದೇಶಗಳಲ್ಲಿ ಉಗ್ರರ ದಾಳಿ ನಡೆದಿದ್ದು, 7 ಯೋಧರು ಹುತಾತ್ಮರಾಗಿದ್ದಾರೆ. ಈ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನ ನಡುವಣ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗಿದ್ದು, ಪಾಕ್ ಪ್ರೋತ್ಸಾಹ ಹೊಂದಿರುವ ಭಯೋತ್ಪಾದಕ ಸಂಘಟನೆಗಳು ತಮ್ಮ ದಾಳಿ ಮುಂದುವರಿಸಲಿವೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಅಮೆರಿಕದ ಗುಪ್ತಚರ ನಿರ್ದೇಶಕ ಡ್ಯಾನ್ ಕೋಟ್ಸ್ ಎಚ್ಚರಿಸಿದ್ದಾರೆ. ಬುಧವಾರ ಈ ಕುರಿತಾಗಿ ಮಾತನಾಡಿದ ಅವರು ಹೇಳಿದಿಷ್ಟು…

‘ಪಾಕಿಸ್ತಾನ ದಿನೇ ದಿನೇ ಅಮೆರಿಕದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ನೂತನ ಅಣ್ವಸ್ತ್ರ ನಿಯೋಜನೆ, ಭಯೋತ್ಪಾದಕ ಸಂಘಟನೆಗಳಿಗೆ ಪ್ರೋತ್ಸಾಹ, ಉಗ್ರರ ವಿರುದ್ಧ ಹೋರಾಟ ನಡೆಸದಿರುವುದು, ಚೀನಾ ಜತೆಗೆ ಹೆಚ್ಚಾಗಿ ಕೈಜೋಡಿಸುತ್ತಿರುವುದು, ಭಾರತ ಹಾಗೂ ಅಫ್ಘಾನಿಸ್ತಾನದ ಮೇಲಿನ ದಾಳಿ ಮುಂದುವರಿಸುತ್ತಿದೆ.

ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಉಗ್ರ ಸಂಘಟನೆಗಳು ಭಾರತದ ಮೇಲೆ ದಾಳಿ ಮುಂದುವರಿಸಲಿದ್ದು, ಮತ್ತೆ ಜಮ್ಮು ಕಾಶ್ಮೀರದಲ್ಲಿ ದೊಡ್ಡ ಮಟ್ಟದ ದಾಳಿಯಾದರೆ, ಎರಡು ದೇಶಗಳ ನಡುವಣ ಬಿಕ್ಕಟ್ಟು ಉಲ್ಬಣಿಸಲಿದೆ. ಪರಿಣಾಮ ಮುಂದಿನ ದಿನಗಳಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಉದ್ವಿಿಗ್ನ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.’

Leave a Reply