ಇದೇ ತಿಂಗಳು ರಾಜ್ಯದಲ್ಲಿ ಎರಡನೇ ಇನಿಂಗ್ಸ್ ಗೆ ರಾಹುಲ್ ಸಜ್ಜು!

ಡಿಜಿಟಲ್ ಕನ್ನಡ ಟೀಮ್:

ಮೂರು ದಿನಗಳ ಕಾಲ ಹೈದರಾಬಾದ್ ಕಾರ್ನಾಟಕ ಭಾಗದಲ್ಲಿ ದೇವಸ್ಥಾನ, ದರ್ಗಾ, ಜನಾರ್ಶಿವಾದ ಸಮಾವೇಶ ಹೀಗೆ ಭರ್ಜರಿ ಪ್ರವಾಸ ಮಾಡಿ ದೆಹಲಿಗೆ ತೆರಳಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದೇ ತಿಂಗಳಾಂತ್ಯದಲ್ಲಿ ದ್ವಿತೀಯ ಹಂತದ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ.

ಇದೇ ತಿಂಗಳು 24, 25, 26 ರಂದು ಪುನಃ ಕರ್ನಾಟಕಕ್ಕೆ ರಾಹುಲ್ ಆಗಮಿಸಲಿದ್ದು, ಮುಂಬೈ ಕರ್ನಾಟಕ ಭಾಗದಲ್ಲಿ ಮೂರು ದಿನಗಳ ಕಾಲ ಪ್ರವಾಸ ಮಾಡಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕರಿಸಿದ ಮೇಲೆ ಹೊಸ ಉತ್ಸಾಹದೊಂದಿಗೆ ರಾಜಕೀಯದಲ್ಲಿ ಸಕ್ರಿಯರಾಗಿರುವ ರಾಹುಲ್, ಗುಜರಾತಿನಲ್ಲಿ ಮಾಡಿದ ಸುತ್ತಾಟವನ್ನು ನಾವೆಲ್ಲರೂ ನೋಡಿದ್ದೇವೆ. ಈಗ ಅದು ಕರ್ನಾಟಕ ಚುನಾವಣಾ ಪ್ರಚಾರದಲ್ಲೂ ಎದ್ದು ಕಾಣುತ್ತಿದೆ. ಇದೇ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ರಾಹುಲ್ ಗಾಂಧಿ ಅವರ ಪ್ರವಾಸ ದಿಂದ ನಮಗೆ ಲಾಭವಾಗುತ್ತದೆ. ಅವರು ಅಧ್ಯಕ್ಷರಾದ ಮೇಲೆ ಗುಜರಾತ್ ಚುನಾವಣೆಯಲ್ಲಿ ನಮಗೆ ಬಲ ಬಂದಿದೆ’ ಎಂದು ಹೇಳಿಕೊಂಡಿರುವುದು.

Leave a Reply